ಹಾವೇರಿ 29:ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಿ ಹೊಸ-ಹೊಸ ವಿಜ್ಞಾನ ಮಾದರಿಗಳನ್ನು ಅವಿಷ್ಕಾರಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ದುಗ್ಗತ್ತಿ ಅವರು ಹೇಳಿದರು.
ನಗರದ ಹುಕ್ಕೇರಿಮಠದ ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯತ್, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ-ಮಾನಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಇದ್ದರೆ, ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುತ್ತಾರೆ. ಹೊಸತನ ಹಾಗೂ ಸಮಾಜದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸುವ ಮಾದರಿಗಳನ್ನು ವಿದ್ಯಾಥರ್ಿಗಳು ತಯಾರಿಸಬೇಕು. ಹೊಸ ಅವಿಷ್ಕಾರಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಿಲ್ಲೆಯ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಸತತ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ರಾಜ್ಯದಲ್ಲೆ ಪ್ರಥಮ ಸ್ಥಾನ ಪಡೆದಿರುವುದು ಅಭಿನಂದನೀಯ ಎಂದು ಹೇಳಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾಜರ್ುನ ಬಾಲದಂಡಿ ಅವರು ಮಾತನಾಡಿ, ಇನ್ಸ್ಪೈರ್ ಅವಾಡರ್್ ಕಾರ್ಯಕ್ರಮ ವಿಶಿಷ್ಠವಾಗಿದ್ದು, ಬಾಲವಿಜ್ಞಾನಿಗಳ ಪ್ರತಿಭೆ ಹೊರತರಲು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯವು ಕಠಿಣ ಎಂಬ ಮನೋಭಾವವಿರುತ್ತದೆ. ಶಿಕ್ಷಕರು ಅವರಿಗೆ ಪ್ರಾಯೋಗಿಕವಾಗಿ ಅರ್ಥವಾಗುವಂತೆ ಬೋಧಿಸಿದಾಗ ವಿದ್ಯಾಥರ್ಿಗಳು ಸರಳವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರು ಮಾತನಾಡಿ ಎಪಿಜೆ ಅಬ್ದುಲ್ ಕಲಾಂ ಅವರು ದೇಶ ಕಂಡ ಅಪರೂಪದ ವ್ಯಕ್ತಿ. ತಮ್ಮ ಘನತೆ, ಗೌರವ, ಆದರ್ಶಗಳ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಅಚ್ಚುಕಟ್ಟಾಗಿ ಮಾಡುತ್ತಿದೆ. ಯುವ ವಿಜ್ಞಾನಿಗಳು ವಿಜ್ಞಾನ ಕೌಶಲ್ಯಗಳನ್ನು ದೇಶದಲ್ಲೆಡೆ ಪಸರಿಸಬೇಕು. ವಿದ್ಯಾಥರ್ಿಗಳು ಸೃಜನಶೀಲತೆ, ಹೊಸತನದಡಿ ವಿಜ್ಞಾನ ಮಾದರಿ ತಯಾರಿಸಿದ್ದಾರೆ. ಈ ಪ್ರದರ್ಶನ ಕೇವಲ ನಗರದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ಮಕ್ಕಳು ಭಾಗವಹಿಸಿ ತಮ್ಮ ಸೃಜನಶೀಲತೆ, ಕ್ರಿಯಾಶೀಲತೆ ಪ್ರದಶರ್ಿಸಿರುವುದು ಅಭಿನಂದನಾರ್ಹವಾಗಿದೆ.
ಡಯಟ್ ಪ್ರಾಂಶುಪಾಲರಾದ ಜಿ.ಎಂ. ಬಸವಲಿಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕ ಅಂದಾನೆಪ್ಪ ವಡಗೇರಿ, ಪ್ರದರ್ಶನದ ನಿರೀಕ್ಷಕರಾದ ಗುಜರಾತಿನ ಚಂದನ್ ಗೌತಮ್ ಅವರು ಸಮಾರಂಭದಲ್ಲಿ ಮಾತನಾಡಿದರು.
ಗಮನ ಸೆಳೆದ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು: ಸಾವಯವ ಕೃಷಿ, ಮಣ್ಣು ಹಾಗೂ ಕೀಟ ನಿರ್ವಹಣೆ, ಕಳೆ ನಿರ್ವಹಣೆ, ಸಮಯ ಆಧಾರಿತ ಯಂತ್ರ, ಎಟಿಎಂ ಸೆಕ್ಯುರಿಟಿ, ವಿದ್ಯುತ್ ಚಾಲಿತ ಶಾಲಾ ಘಂಟೆ, ವ್ಯಾಕ್ಯೂಮ್ ಕ್ಲೀನರ್, ಮಿಶ್ರ ಬೇಸಾಯ, ನೀರನ್ನು ಸಂರಕ್ಷಿಸುವ ಸಾಧನ, ತಾರಸಿ ಉದ್ಯಾನ, ಶಕ್ತಿಯ ಮಿತವ್ಯಯ, ಸಿಲಿಂಗ್ ಪ್ಯಾನ್ ಬಳಕೆಯಿಂದ ಪುನರ್ ವಿದ್ಯುತ್ತ ಉತ್ಪಾದನೆ, ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದನೆ, ತ್ಯಾಜ್ಯ ನಿರ್ವಹಣಾ ಸಂವಹನ ಘಟಕ, ಫಾರೆಸ್ಟ್ ಫೈರ್ ಡಿಟೆಕ್ಷನ್ ಒಳಗೊಂಡಂತೆ ಹಲವು ವೈವಿಧ್ಯಮಯ ವಿಜ್ಞಾನ ಮಾದರಿಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾಗಿವೆ. ಜಿಲ್ಲೆಯ 549ಕ್ಕೂ ಹೆಚ್ಚುನ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡಿವೆ. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರು ವಿಜ್ಞಾನ ವಸ್ತು ಪ್ರದರ್ಶನದ ಮಳೆ ತರಿಸುವ ವಿಜ್ಞಾನ ಮಾದರಿಗೆ ಚಾಲನೆ ನೀಡಿ ವೀಕ್ಷಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಹೆಚ್.ಪಾಟೀಲ, ಡಯಟ್ನ ಹಿರಿಯ ಉಪನ್ಯಾಸಕರಾದ ಝಡ್ ಖಾಜಿ ಹಾಗೂ ಎಂ.ಬಿ.ಅಂಬಿಗೇರ, ಇನ್ಸ್ಪೈರ್ ಅವಾಡರ್್ ನೋಡಲ್ ಅಧಿಕಾರಿಗಳಾದ ಲತಾಮಣಿ ಟಿ.ಎಂ, ನಿಣರ್ಾಯಕಾರದ ಜಿ.ಹೆಚ್.ಕಾಲೇಜಿನ ಶಂಕರ್, ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲರಾದ ಕಟ್ಟಿಮನಿ, ಗಾಂಧಿಪುರ ಪಿ.ಯು. ಕಾಲೇಜಿನ ಉಪನ್ಯಾಸಕರಾದ ಶೇಖರಪ್ಪ, ವಿಜ್ಞಾನ ವಿಷಯ ಪರಿವೀಕ್ಷಕರಾದ ಬಿ.ಎಸ್.ಪಾಟೀಲ, ಲಂಬಾಣಿ, ಬಸಮ್ಮನವರ ಸುರಳಿಕರ, ವಿವಿಧ ಶಾಲೆಯ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಳೆದ ಎರಡು ವರ್ಷಗಳಿಂದ ಹಾವೇರಿ ಜಿಲ್ಲೆ ರಾಜ್ಯದಲ್ಲಿ ಇನ್ಸ್ಪೈರ್ ಅವಾಡರ್್ನ್ನು ಪ್ರಥಮ ಸ್ಥಾನದಲ್ಲಿ ತನ್ನದಾಗಿಸಿಕೊಂಡಿದೆ. ಇದು ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ಮಾಡಿ ಮಕ್ಕಳ ಪ್ರತಿಭೆ ಹೊರತರಲು ಪ್ರಯತ್ನಿಸುತ್ತಿದ್ದಾರೆ.