ಹಾವೇರಿ07:ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಯುವ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಡಯಟ್ ಪ್ರಾಂಶುಪಾಲ ಜಿ.ಎಮ್ ಬಸವಲಿಂಗಪ್ಪ ಅವರು ಹೇಳಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ನಲ್ಲಿ ಶುಕ್ರವಾರ ರಾಜ್ಯಮಟ್ಟದ ಇನ್ಸ್ಪೈರ್ ಅವಾಡರ್್ಗೆ ಆಯ್ಕೆಯಾದ ಜಿಲ್ಲೆಯ 54 ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಮಂಡ್ಯದಲ್ಲಿ ಫೆ.14 ಮತ್ತು 15 ರಂದು ನಡೆಯುವ ರಾಜ್ಯಮಟ್ಟದ ಇನ್ಸ್ಪೈರ್ ಅವಾಡರ್್ ಕಾರ್ಯಕ್ರಮ ಜರುಗಲಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ 54 ವಿದ್ಯಾರ್ಥಿಗಳು ಸಿದ್ದಪಡಿಸಿರುವ ಮಾದರಿಗಳಲ್ಲಿನ ನ್ಯೂನತೆ, ಮಾದರಿಯಲ್ಲಿನ ಸಂಪೂರ್ಣ ಸಾರಾಂಶವನ್ನು ತಿಳಿದುಕೊಂಡು ಲೋಪದೋಷಗಳು ಸರಿಪಡಿಸುವ ಉದ್ದೇಶದಿಂದ ಅನಭವಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರ ಆಯೋಜಿಸಲಾಗಿದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಮನುಷ್ಯನ ಜೀವನದಲ್ಲಿ ವಿಜ್ಞಾನದ ಅವಶ್ಯಕತೆ ಇದೆ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಗಳನ್ನು ಮಾಡುವ ಮೂಲಕ ದೇಶಕ್ಕೆ ಕೀತರ್ಿ ತರುವ ಕೆಲಸವನ್ನು ಯುವ ವಿಜ್ಞಾನಿಗಳು ಮಾಡಬೇಕು ಎಂದು ಹೇಳಿದರು.
ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಹಾಗೂ ಸುಂದರ ಹಾಗೂ ಸ್ವಚ್ಛ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಬೇಕು. ವಿಜ್ಞಾನದಲ್ಲಿ ಧನಾತ್ಮಕ ವಿಚಾರ ಮೂಡಿಸಬೇಕು ಎಂದು ಸೂಚಿಸಿದರು.
ಪ್ರಾಧ್ಯಾಪಕ ಡಾ. ಶಂಕರ ಮಡಿವಾಳರ ಮಾತನಾಡಿ, ಜಿಲ್ಲಾ ಹಂತದಲ್ಲಿ ಪ್ರದರ್ಶನಗೊಂಡ ವಿದ್ಯಾಥರ್ಿಗಳ ಮಾದರಿಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮಾದರಿಗಳಾಗಿದ್ದವು. ರಾಜ್ಯಮಟ್ಟದ ಪ್ರದರ್ಶನದಲ್ಲಿ ಮಾದರಿಗಳಲ್ಲಿ ಬದಲಾವಣೆ ಮಾಡಿಕೊಂಡು ಉತ್ತಮ ಆವಿಷ್ಕಾರಗಳ ಮೂಲಕ ಯುವ ವಿಜ್ಞಾನಿಗಳಾಗಿ ದೇಶಕ್ಕೆ ಕೀತರ್ಿ ತರಬೇಕು. ಪಾಲಕರು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಹೇಳಿದರು,
ಉಪನ್ಯಾಸಕ ಕೆ.ಎಚ್ ಬ್ಯಾಡಗಿವಿದ್ಯಾರ್ಥಿಗಳಿಗೆ ಅವರ ಮಾದರಿಗಳ ಕುರಿತು ತರಬೇತಿ ನೀಡಿದರು. ಕಾರ್ಯಗಾರದಲ್ಲಿ ನೋಡೆಲ್ ಅಧಿಕಾರಿ ಶ್ರೀಮತಿ ಲತಾಮಣಿ.ಟಿ.ಎಮ್, ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.