ಬೆಳಗಾವಿ, 13: ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ದೊಡ್ಡ ಕನಸು ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಬೆಳಗಾವಿ ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕಣರ್ಿ ಹೇಳಿದರು.
ನಗರದ ಭರತೇಶ ಹೋಮಿ ಯೋಪತಿಕ್ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ವಿದ್ಯಾಪೋಷಕ ಸಂಸ್ಥೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಧನ ಸಹಾಯ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಸಮಯಪ್ರಜ್ಞೆ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ಆ ಅವಧಿಯನ್ನು ವ್ಯರ್ಥಗೊಳಿಸದೇ ದೊಡ್ಡ ಸಾಧನೆಯ ಕನಸು ಕಾಣಬೇಕು ಎಂದರು.
ವಿದ್ಯಾಪೋಷಕ ಸಂಸ್ಥೆಯ ಧನಸಹಾಯ ಪಡೆದು ಸದ್ಯ ಧಾರವಾಡದಲ್ಲಿ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಭೀಮಪ್ಪ ಲಾಳಿ ಮಾತನಾಡಿ, ಭವಿಷ್ಯದಲ್ಲಿ ನೀವು ಮಾಡುವ ಉದ್ಯೋಗದಲ್ಲಿ ಶ್ರದ್ದೆಯಿಟ್ಟು ಕೆಲಸ ಮಾಡಿ ಎಂದರು.
ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ರಾಜೀವ ದೊಡ್ಡಣ್ಣವರ ಮಾತನಾಡಿ, ಇಂದು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣದತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಇದರೊಂದಿಗೆ ನಾಗರಿಕ ಸೇವಾ ಪರೀಕ್ಷೆ ಬರೆಯುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಭರತೇಶ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶ್ರೀಕಾಂತ ಕೊಂಕಣಿ, ದಾನಿಗಳಾದ ಮಡಿವಾಳಪ್ಪ ಮೆಳವಂಕಿ, ರಮೇಶ ಗಂಗೂರ, ದಯಾನಂದ ಗಂಗೂರ ಉಪಸ್ಥಿತರಿದ್ದರು.
ಧನಸಹಾಯ ಪಡೆದ ಅನಿಲ್, ಸುಕನ್ಯಾ, ಪ್ರಿಯಾಂಕಾ ಅನಿಸಿಕೆ ಹಂಚಿಕೊಂಡರು.
ವಿದ್ಯಾ ಹಾಗೂ ಸಂಗಡಿಗರು ಪ್ರಾರ್ಥಿ ಸಿದರು.
ರತ್ನಾ ಪಾಟೀಲ, ಪ್ರಸನ್ನ ಪಾಶ್ಚಾಪುರ ನಿರೂಪಿಸಿದರು. ಗೌರಿ ಕಾಂಬಳೆ ವಂದಿಸಿದರು.