ಬಾಗಲಕೋಟೆ: ಮತದಾರರ ಪಟ್ಟಿಯಲ್ಲಿ 18 ರಿಂದ 19 ವಯಸ್ಸಿನ ವಿವಿದ್ಯಾರ್ಥಿಗಳು ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನವರಿ 6 ರಿಂದ 8 ವರೆಗೆ ಹಮ್ಮಿಕೊಂಡ ಮತದಾರರ ಮಿಂಚಿನ ನೋಂದಣಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಚಾಲನೆ ನೀಡಿದರು.
ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ ಮಿಂಚಿನ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗದ ನಿದರ್ೇಶನದ ಹಿನ್ನಲೆಯಲ್ಲಿ ವಿಶೇಷ ನೊಂದಣಿ ಕಾರ್ಯ ನಡೆಸಲಾಗುತ್ತಿದ್ದು, ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜನವರಿ 1, 2020ಕ್ಕೆ 18 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡು ಚುನಾವಣೆ ಸಂದರ್ಭದಲ್ಲಿ ತಮ್ಮ ಹಕ್ಕನ್ನು ಚಲಾಯಿಸುವಂತಾಗಬೇಕು ಎಂದರು.
ನಮೂನೆ 6 ನ್ನು ಪಡೆದುಕೊಂಡು ಭತ್ರಿಮಾಡಿ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ಆಯಾ ತಹಶೀಲ್ದಾರ ಮತ್ತು ಬಿ.ಎಲ್.ಓಗಳಿಗೆ ಸಲ್ಲಿಸಬೇಕು. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರ ಹಾಗೂ ಹೋಬಳಿ ಮಟ್ಟದಲ್ಲಿ ಬಿ.ಎಲ್.ಓಗಳಿಗೆ ಅಜರ್ಿ ಸಲ್ಲಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾಲೇಜು ವಿದ್ಯಾಥರ್ಿಗಳಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯುವ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕಾಲೇಜುಗಳ ಪ್ರಾಚಾರ್ಯರು ಜನವರಿ 1ಕ್ಕೆ 18 ವರ್ಷ ಪೂರೈಸಿದ ಪ್ರತಿ ವಿದ್ಯಾಥರ್ಿಗೆ ಹೊಸ ಮತದಾರ ಸೇರ್ಪಡೆಯ ನಮೂನೆ 6ನ್ನು ನೀಡಿ ಅವರಿಂದ ಭತರ್ಿ ಮಾಡಿಸಿ ಭಾವಚಿತ್ರ, ಪೂರಕ ದಾಖಲೆಗಳ ಸಹಿತ ಅಜರ್ಿಗಳನ್ನು ಸಂಗ್ರಹಿಸಬೇಕು. ಸಂಗ್ರಹಿಸಿದ ಅಜರ್ಿಗಳ ಪಟ್ಟಿ ಮಾಡಿ ಅಜರ್ಿ ಮತ್ತು ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ತಹಶೀಲ್ದಾರ ಕಚೇರಿಗೆ ನೀಡಿ ಸ್ವೀಕೃತಿ ಪಡೆಯಬೇಕು ಎಂದು ತಿಳಿಸಿದರು.
ನಂತರ ನವನಗರದ ವ್ಯಾಪ್ತಿಯಲ್ಲಿ ಮಿಂಚಿನ ನೋಂದಣಿ ಕುರಿತು ಜಾಥಾ ನಡೆಸಲಾಯಿತು. ಜಾಥಾದಲ್ಲಿ 400 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಪಾಲ್ಗೊಂಡು ಜಾಗೃತಿ ಪೋಸ್ಟಗಳನ್ನು ಪ್ರದಶರ್ಿಸುವ ಮೂಲಕ ಜಾಗೃತಿ ಮೂಡಿಸಿದರು. ಜಾಥಾದಲ್ಲ್ಲಿ ತಹಶೀಲ್ದಾರ ಗುರುಬಸಯ್ಯ ಹಿರೇಮಠ, ಜಿಲ್ಲಾ ವಾತರ್ಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.