ವಿದ್ಯಾರ್ಥಿ ಗಳು ಆರೋಗ್ಯದ ಕಡೆ ಗಮನ ಹರಿಸಿ: ಉದಪುಡಿ

Students focus on health: Udapudi

ರನ್ನ ಬೆಳಗಲಿ 09-03  ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿ-ಯಲ್ಲಿವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ, ತಾಯಂದಿರ ಸಭೆ, ಹೃದಯ ಸ್ಪರ್ಶಿ ತಾಯಂದಿರ ಪಾದಪೂಜೆ   ನೆರವೇರಿತು.ತೊಟ್ಟಿಲನ್ನು ತೂಗುವ ಕೈಗಳು, ಜಗತ್ತನ್ನೇ ತೂಗುತ್ತವೆ.ಮಹಿಳೆಯರು ಮನಸ್ಸು ಮಾಡಿದರೆ ಖಂಡಿತಾ ಏನೆಲ್ಲಾ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸುತ್ತಾಳೆ, ಎಂದು ಮುಖ್ಯ ಅತಿಥಿ ಸ್ಥಾನವಹಿಸಿದ, ಪಿ.ಕೆ.ಪವಾರ. ಗುರುಮಾತೆಯರು ಮಾತನಾಡಿದರು.

ಆಕಾಶ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ,ಬೆಳಕನಿಟ್ಟು ತೂಗಿದಾಕೆ ,ನಿನಗೆ ಬೇರೆ ಹೆಸರು ಬೇಕೆ, ಸ್ತ್ರೀ ಎಂದರೆ  ಅಷ್ಟೇ ಬೇಕೆ, ಎಂದು ಜಿಎಸ್ ಶಿವರುದ್ರ​‍್ಪ ಅವರು ಹೇಳಿದ್ದಾರೆ. ಜಗತ್ತಿಗೆ ನಾವು ಕಣ್ಣು ಬಿಟ್ಟಾಗ ಮೊದಲು ನೋಡುವದು ತಾಯಿಯನ್ನು ಮಾತ್ರ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು, ನೂರು ದೇವರನ್ನು ಸುತ್ತುವದಕ್ಕಿಂತ ಜನ್ಮದಾತರನ್ನು ಸುತ್ತುವುದು ಲೇಸು, ವಿದ್ಯೆಗೆ ಅದಿದೇವನಾದ ಗಣಪತಿಯು ಕೂಡ ತಂದೆ ತಾಯಿರನ್ನು ಪ್ರದಕ್ಷಿಣ ಹಾಕಿದ್ದಾನೆ. ವಿದ್ಯಾರ್ಥಿಯ ಬದುಕಿನಲ್ಲಿ 10ನೇ ತರಗತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪಾಲಕರು ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಿದ್ದಾರೆ ಎಂಬ ಪ್ರಶ್ನೆ ಬರಬೇಕು. ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ ಇಲ್ಲ, ಪಾಲಕರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಸಾಧ್ಯವಾದಷ್ಟು ಮಕ್ಕಳಿಗೆ ಮೊಬೈಲ್ ಟಿವಿ ದೃಶ್ಯ ಮಾಧ್ಯಮಗಳಿಂದ ದೂರವಿರಲು ಪ್ರಯತ್ನಿಸಿ 10ನೇ ತರಗತಿ ಪರೀಕ್ಷೆಗೆ ಸಮಯ ತುಂಬಾ ಕಡಿಮೆ ಇರುತ್ತದೆ. ಇದ್ದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಬಂಗಾರವನ್ನು ಕೊಳ್ಳಬಹುದು ಸಮಯವನ್ನು ಕೊಳ್ಳಲಿಕ್ಕೆ ಆಗುವುದಿಲ್ಲ, ಹಾಗೆ ವಿದ್ಯಾರ್ಥಿಗಳು ಆರೋಗ್ಯದ ಕಡೆಗೂ ಗಮನಹರಿಸಬೇಕು. ಆರೋಗ್ಯ ಸರಿ ಇದ್ದರೆ ಪರೀಕ್ಷೆಯನ್ನು ಉತ್ತಮವಾಗಿ ಬರೆಯಬಹುದು ಎಂದು, ಶಾಲಾ ಮುಖ್ಯ ಗುರು ಮಾತೆ, ಎಸ್ ಎಸ್ ಉದಪುಡಿ ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಆಡಿದರು.  

ಇದೇ ಸಂದರ್ಭದಲ್ಲಿ ತಾಯಂದಿರ ಪಾದಪೂಜೆಯ ಮಕ್ಕಳಿಂದ ಹೃದಯಸ್ಪರ್ಶಿ ಕಾರ್ಯಕ್ರಮ ನೆರವೇರಿತು. ಎಲ್ ಎಮ್ ಶಾಸ್ತ್ರಿ. ಎಸ್‌ಎಂ ಮೇಗಾಡಿ. ಶ್ರೀಶೈಲ್ ಕಾಡದೇವರ ಮಠ. ಅಲ್ಲಪ್ಪ ಕುಂಬಾಳಿ. ಅಮಿತ್ ತಳಗೇರಿ. ಕಿರಣ್ ಪವಾರ. ವಿಕಾಸ ಕೊನ್ನೂರ. ತಾಯಂದಿರು ಪಾಲ್ಗೊಂಡಿದ್ದರು. ಬಾಲಕೃಷ್ಣ ಚೋಪಡೆ .ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.