ವಿದ್ಯಾರ್ಥಿಗಳು ದೇಶ ಪ್ರೇಮ ಅಳವಡಿಸಿಕೊಳ್ಳಿ: ಪೀರಜಾದೆ

ಲೋಕದರ್ಶನ ವರದಿ

ರಾಣೇಬೆನ್ನೂರು 31: ವಿದ್ಯಾರ್ಥಿಗಳು ದೇಶ ಪ್ರೇಮ ಬೆಳಸಿಕೊಂಡು ಬಾಲ್ಯದಿಂದಲೆ ಒಂದು ನಿರ್ಧಿಷ್ಟ ಗುರಿ ಇಟ್ಟುಕೊಂಡು ಸಾದನೆಯತ್ತ ಸಾಗಿದಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಿ ಬಾಳಲು ಸಾಧ್ಯವಾಗುವುದು ಎಂದು ಜಿಲ್ಲಾ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ.ಎಸ್.ಸಿ.ಪೀರಜಾದೆ  ಹೇಳಿದರು.

ಅವರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ, ವಿದ್ಯಾರ್ಥಿ ಸಂಘ, ಹಸಿರುಪಡೆ, ಭಾರತ್ ಸೇವಾದಳ ಚಟುವಟಿಕೆಗಳ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ತಂದೆ, ತಾಯಿ, ಗುರು-ಹಿರಿಯರು ಹಾಗೂ ನಾಡನ್ನು ಪ್ರೀತಿಸಿ ಗೌರವಿಸುವ ಮನೋಭಾವನೆ ಬೇಳಸಿಕೊಂಡು ಸ್ಥಳೀಯ ಐತಿಹಾಸಿಕ ಸ್ಥಳ ಹಾಗೂ ಅಗತ್ಯ ವಸ್ತುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.   ಇತಿಹಾಸ ಮರೆತರೆ ಮತ್ತೆ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಾರದು. ಅದಕ್ಕಾಗಿ ನಮ್ಮ ಐತಿಹಾಸಿಕ ಪರಂಪರೆ ಮತ್ತು ಸಂಸ್ಕೃತಿ ಉಳಿಸಿ-ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.  

ಸಮಾರೋಪ ಭಾಷಣ ಮಾಡಿದ ನಿವೃತ್ತ ಪ್ರಾಚಾರ್ಯ ಹೆಚ್.ಎ.ಭಿಕ್ಷಾವತರ್ಿಮಠ ಅವರು ಮಕ್ಕಳಿಗೆ ಓದಿಗಿಂತ ಕಲಿಕೆ ಬಹಳ ಮುಖ್ಯ ಕಲಿಯುತ್ತಾ ಕಲಿಯುತ್ತಾ ಓದಿದ ಜ್ಞಾನ ಹೆಚ್ಚಾಗಿ ವೃದ್ದಿಸುತ್ತದೆ ಇದಕ್ಕಾಗಿ ಸಾರ್ವತ್ರಿಕ ಭಾಷೆಯಾದ ಇಂಗ್ಲೀಷ್ ಭಾಷೆಯನ್ನು ಕಲಿಯಬೇಕು ಆದರೆ ಮಾತೃ ಭಾಷೆಯನ್ನು ಎಂದಿಗೂ ಮರೆಯಬಾರದು ವಿದ್ಯಾರ್ಥಿ ಗಳು ಮೌಲ್ಯಗಳನ್ನು ಹೇಳಿ ಕಲಿಯುವುದಕ್ಕಿಂತ ಮಕ್ಕಳು ನೋಡಿ ಕಲಿಯುವಂತೆ ಮಾಡಬೇಕು ಎಂದರು.

 ಮಕ್ಕಳ ಎದುರು ಹಿರಿಯರ ನಡುವಳಿಕೆಗಳು ಮೌಲ್ಯಯುತವಾಗಿರಬೇಕು, ಗ್ರಾಮೀಣ ವಿದ್ಯಾಥರ್ಿಗಳಲ್ಲಿ ಪ್ರತಿಭೆ ಇದ್ದೇ ಇರುತ್ತದೆ.  ಅದನ್ನು ಹೊರಸೂಸಲು ವೇದಿಕೆಗಳು ಬೇಕು.  ಅಂತಹ ವೇದಿಕೆಗಳು ಕಾಲೇಜಿನಲ್ಲಿಯೇ ವರ್ಷದುದ್ದಕ್ಕೂ ಅನೇಕ ಕಾರ್ಯಕ್ರಮಗಳ ಮೂಲಕ ಕಾಣಬಹುದು.  ಅಲ್ಲಿ ತಮ್ಮಲ್ಲಿರುವ ಸೂಕ್ತ ಪ್ರತಿಭೆ ಪ್ರದಶರ್ಿಸಿ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು. 

ಕಾಲೇಜು ಪ್ರಾಚಾರ್ಯ ಪಿ.ಮುನಿಯಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಯಾಡಗಿ ಶಾಸಕರ ಅಪ್ತ ಕಾರ್ಯದರ್ಶಿ ಬಸವರಾಜ್. ಕುಲಕರ್ಣಿ, ಉಪನ್ಯಾಸಕರಾದ ಹೆಚ್.ಶಿವಾನಂದ, ಎಂ, ಶಿವಕುಮಾರ ಎಂ.ಡಿ.ಹೊನ್ನಮ್ಮನವರ ಚನ್ನಬಸಪ್ಪ ಸಂಗಣ್ಣನವರ, ಬಿ.ವಿ ಕುಡಪಲಿ, ಆರ್.ಬಿ.ತೋಟಿಗೇರ, ಮಲ್ಲಿಕಾರ್ಜು ನ ಅರಳಿ, ವೀರಯ್ಯ ದೇವಗೀರಿಮಠ, ಸುಮಾ ಗಂಗಾಯಿಕೊಪ್ಪ, ಬಿ.ಎ.ವಿಜಯಕುಮಾರ, ಕೆ.ಜೆ.ಆಶಾ, ಎಸ್.ಎಸ್. ಬಡ್ನಿ, ಉಮೆ ಹಬೀಬಾ, ಆರ್.ಪ್ರವೀಣ್ಕುಮಾರ್, ಪ್ರಸನ್ನಕುಮಾರ, ಗಣೇಶ, ಶಂಕ್ರಪ್ಪಕರ್ಜಗಿ ಸಿ.ಜೈಪ್ರಕಾಶ, ಜಗದೀಶ ಬಣಕಾರ ನಾಗರಾಜ.ಸಿ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಗೌರವಿಸಲಾಯಿತು.