ವಿದ್ಯಾರ್ಥಿಗಳು ಸಚ್ಚಾರಿತ್ರ್ಯರಾಗಿ ವಿದ್ಯಾರ್ಜನೆ ಪೂರೈಸಿದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ: ಡಾ. ಅಜಿತ್ ಪ್ರಸಾದ

ವಿದ್ಯಾರ್ಥಿಗಳು ಸಚ್ಚಾರಿತ್ರ್ಯರಾಗಿ ವಿದ್ಯಾರ್ಜನೆ ಪೂರೈಸಿದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ:  ಡಾ. ಅಜಿತ್ ಪ್ರಸಾದ Students can be successful in life only when they complete their education with integrity: Dr. Ajit

ಧಾರವಾಡ 26: ವಿದ್ಯಾರ್ಥಿಗಳು ಸಚ್ಚಾರಿತ್ರ್ಯರಾಗಿ ವಿದ್ಯಾರ್ಜನೆ ಪೂರೈಸಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಇಂದು ರಾಷ್ಟ್ರ ಮತ್ತು ವಿದೇಶಗಳ ಅನೇಕ ಕ್ಷೇತ್ರಗಳ ಉನ್ನತ ಸ್ಥಾನಮಾನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿದ್ದು, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ನೀಡುತ್ತಿರುವ ಹೆಚ್ಚಿನ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ್ ಪ್ರಸಾದ ರವರು ಅವರು ಹೆಮ್ಮೆಯಿಂದ ಹೇಳಿದರು. 

ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕೆ.ಎಚ್‌. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಇಂದು ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗಗಳ ಉದ್ಘಾಟನಾ ಸಮಾರಂಭ ಹಾಗೂ ಅಭಿಯಂತರರ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಜೆ.ಎಸ್‌.ಎಸ್ ಆಡಳಿತ ಅಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ ಅವರು ಮಾತನಾಡಿ ಬೇರೆಯವರಿಗಿಂತ ನಮಗೆ ನಾವೇ ಸ್ಪರ್ಧಾಳುಗಳಾಗಿ, ಸಂಸ್ಥೆಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾರ್ಯ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಸುಧೀರ ಫಿಡ್ಡಿ ಅಸಿಸ್ಟೆಂಟ್ ಪ್ರೋಗ್ರಾಮ್ ಮ್ಯಾನೇಜರ್, ಬಾಷ್ ಇಂಡಿಯಾ ಫೌಂಡೇಶನ್ ಬೆಂಗಳೂರು. ಅವರು ಮಾತನಾಡಿ ಬಾಸ್ ಕಂಪನಿಯ ಹಾಗೂ ಜೆ.ಎಸ್‌.ಎಸ್ ದೃಷ್ಟಿಕೋನಗಳು ಒಂದಕ್ಕೊಂದು ಸಾಮ್ಯತೆ ಹೊಂದಿದ್ದು ಈ ನಿಟ್ಟಿನಲ್ಲಿ ಜೆ.ಎಸ್‌.ಎಸ್ ಜೊತೆಗೆ ಕಾರ್ಯನಿರ್ವಸಲು ಅತ್ಯಂತ ಉತ್ಸುಕ ವಾಗಿದ್ದು, ವಿದ್ಯಾರ್ಥಿಗಳು ಜೀವನ ಕೌಶಲ್ಯ ಹಾಗೂ ತಾಂತ್ರಿಕ ಕೌಶಲ್ಯ ಹಾಗೂ ಹೊಸ ಕಾರ್ಯಪದ್ಧತಿಗಳಿಗೆ ಹೊಂದಿಕೊಳ್ಳುವ ನಾವಿನ್ಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು, ಕರೆ ನೀಡಿದರು ಹಾಗೂ   ಅರ್ಚನಾ ಕೊಂಗಿ, ಚೀಫ್ ಜನರಲ್ ಮ್ಯಾನೇಜರ್ ಆರ್‌. ಎನ್‌. ಎಸ್ ಮೋಟಾರ್ಸ್‌, ಹುಬ್ಬಳ್ಳಿ- ಧಾರವಾಡ ಅವರು ಆಗಮಿಸಿದ್ದರು.  

ವೇದಿಕೆ ಮೇಲೆ ಸಂಸ್ಥೆಯ ಪ್ರಾಚಾರ್ಯೆ ವೇದಾವತಿ ಆರ್‌. ತಿವಾರಿ, ಸಂಸ್ಥೆಯ ಸಂಯೋಜಕರಾದ ವೀರಭದ್ರ ಕೆ. ಭರಣಿ, ಪ್ರಾಕ್ಟರ್ ಪಿ. ಉಷಾದೇವಿ ಅವರು ಉಪಸ್ಥಿತರಿದ್ದರು. ಕುಮಾರಿ ಚೈತ್ರಾ ಬಮ್ಮಿಗಟ್ಟಿ ಪ್ರಾರ್ಥಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ  ವಸಂತ ಐಹೊಳಿ ಸ್ವಾಗತಿದರು. ಉಪನ್ಯಾಸಕಿಯರಾದ ನಯನಾ ದೇಸಾಯಿ ಅವರು ವಂದಿಸಿದರು. ಕುಮಾರಿ ಪ್ರತಿಕ್ಷಾ, ಕುಮಾರಿ ಚೆನ್ನಮ್ಮ, ಚೆನ್ನಯ್ಯ ಸಾಲಿಮಠ, ಕುಮಾರಿ ಕೀರ್ತನಾ ಹಾಗೂ ಕುಮಾರ ಅನುದೀಪ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.