ವಿದ್ಯಾರ್ಥಿಗಳು ಪರಿಶ್ರಮದಿಂದ ಮಾತ್ರ ತಮ್ಮ ಜೀವನದ ಗುರಿ ತಲುಪಲು ಸಾಧ್ಯ : ಆರ್.ಎಸ್.ಮರಿಗೌಡರ
Students can achieve their goals in life only through hard work: R.S. Marigowda
ಯರಗಟ್ಟಿ 08 : ವಿದ್ಯಾರ್ಥಿಗಳು ಪರಿಶ್ರಮದಿಂದ ಮಾತ್ರ ತಮ್ಮ ಜೀವನದ ಗುರಿ ತಲುಪಲು ಸಾಧ್ಯ ಜೀವನ ನಿಂತ ನೀರಾಗದೆ ಹರಿಯುವ ನೀರಿನಂತಾಗಬೇಕು. ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಬೇಕು ಎಂದು ಯರಗಟ್ಟಿ ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೆಜಿನ ಪಾಚಾರ್ಯ ಆರ್.ಎಸ್.ಮರಿಗೌಡರ ಹೇಳಿದರು. ಸಮೀಪದ ತಲ್ಲೂರ ಗ್ರಾಮದ ಶ್ರೀ ಬಸವೇಶ್ವರ ಯುವಕ ಮಂಡಳ ಪ್ರೌಡ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನ ಶಕ್ತಿಯ ಜೊತೆಗೆ ಏಕಾಗ್ರತೆ ಎಂಬುವುದು ವಿದ್ಯಾರ್ಥಿಗಳಿಗೆ ಅವಶ್ಯವಿದೆ.
ಏಕಾಗ್ರತೆ ರೂಢಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದರು.ನಿವೃತ್ತ ಮುಖ್ಯ ಶಿಕ್ಷಕ ಸಿ.ವಿ.ಮಾಸ್ತಮರ್ಡಿ, ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ಯುವಕ ಮಂಡಳ ಕಾರ್ಯದರ್ಶಿ ಫಕೀರ್ಪ ಬಡಿಗೇರ ಮಾತನಾಡಿ, ಕೇವಲ ಶಿಕ್ಷಣ ಕಲಿಸಿದರೆ ಗುರುವಾಗುದಿಲ್ಲ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ತಂದೆ ತಾಯಿಯ ಸ್ವರೂಪದಲ್ಲಿ ನಿಂತು ಸಂಸ್ಕಾರವನ್ನು ಬಿತ್ತುವಂತಹ ಕಾರ್ಯ ಮಾಡಬೇಕು ಅಂದಾಗ ಮಕ್ಕಳಿಗೆ ಸೈಕ್ಷಣಿಕವಾಗಿ ಅಷ್ಟೆ ಅಲ್ಲದೇ ಸಂಸ್ಕಾರಯುತ ಬದುಕನ್ನು ರೂಪಿಸಿದಂತಾಗುತ್ತದೆ ಎಂದರು. ನಂತರ ವಿದ್ಯಾಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಮುಖ್ಯ ಶಿಕ್ಷಕ ಆರ್.ಪಿ.ದುಂಡನಕೊಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಸ್.ಆರ್.ಬೆನಕಟ್ಟಿ, ಯುವಕ ಮಂಡಳ ನಿರ್ದೇಶಕ, ಬಸಪ್ಪ ಭೋವಿ, ಪಂಚಪ್ಪ ದುಂಡನಕೊಪ್ಪ, ಮಲ್ಲಿಕಾರ್ಜುನ ಗಾಣಿಗೇರ, ಬಸಪ್ರಭು ಮಲಕನ್ನವರ, ಲತಾ ತಲ್ಲೂರ, ಬಿ.ಸಿ.ಕರಿಕಟ್ಟಿ, ಎಸ್.ಎಪ್.ಬಡಿಗೇರ, ಸಚೀನ ಹೋಳಿ, ಎ.ಜೆ.ಕಾಂಬಳೆ, ಜಿ.ಎ.ಕೊಟ್ರಶೆಟ್ಟಿ, ಎನ್‌ಜಿ..ಕತ್ತಿ, ಎಲ್.ವಿ.ಪಾಟೀಲ, ಎಸ್.ಎಂ.ಪಟೇಲ್, ಪಿ.ಸಿ.ಸುಣದೋಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 