ಲೋಕದರ್ಶನ ವರದಿ
ಬೈಲಹೊಂಗಲ 27: ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಹೊರಹೊಮ್ಮಿ ದೇಶವನ್ನು ಮುನ್ನಡೆಸಿಕೊಂಡು ಹೊಗುವುದು ಮಹತ್ತರ ಜವಾಬ್ದಾರಿ ತಮ್ಮ ಮೇಲಿೆದೆಯೆಂದು ಬೈಲಹೊಂಗಲದ ಮೂರುಸಾವಿರ ಮಠದ ಪ್ರಭು ನೀಲಕಂಠ ಮಹಾಸ್ವಾಮಿಗಳು ಹೇಳಿದರು.
ಬುಧವಾರ ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಗಣಾಚಾರಿ ಶಿಕ್ಷಣ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು.
ಮಾಜಿ ಶಾಸಕ ಡಾ ವಿಶ್ವನಾಥ.ಆಯ್.ಪಾಟೀಲ ಮಾತನಾಡಿ, ವಿದ್ಯಾಥರ್ಿಗಳು ದುಶ್ಚಟಗಳಿಂದ ದೂರವಿದ್ದು ಸರಿಯಾದ ವಿದ್ಯಾಬ್ಯಾಸ ಮಾಡಿತಮ್ಮಕುಟುಂಬದಆಥರ್ಿಕ ಪರಿಸ್ಥಿಯನ್ನು ಸುಧಾರಿಸಿಕೊಳ್ಳಲು ಪೂಜ್ಯಡಾ ವಿರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಪ್ರೇರಣೆಯಾಗಿವೆಯೆಂದರು. ಯೋಜನೆಯ ಜಿಲ್ಲಾ ನಿದರ್ೇಶಕ ಚಂದ್ರಶೇಖರ.ಕೆ ಮಾತನಾಡಿ, ಯೋಜನೆಯಿಂದ ವಿದ್ಯಾಥರ್ಿಗಳಿಗೆ ಹಲವಾರು ಜಾಗೃತಿ ಕಾರ್ಯಕ್ರಮಗಳ ಮುಖಾಂತರ ಅವರಿಗೆ ಒಳ್ಳೆಯ ಬದುಕು ರೂಪಿಸಲು ಹೆಗ್ಗಡೆಯವರು ಸಂಕಲ್ಪ ಆಗಿದೆಯೆಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ಸಿ.ಬಿ.ಗಣಾಚಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಸಿ.ಅಡಕಿ, ಉಮೇಶ ಮುಪ್ಪಯ್ಯನವರಮಠ, ಜಗದೀಶಜಕ್ಕಪ್ಪನವರ, ಎಮ್.ಎಸ್.ಪೆಂಟೇದ ಮುಂತಾದವರು ಉಪಸ್ಥಿತರಿದ್ದರು. ಯೋಜನಾಧಿಕಾರಿ ಪುರುಷೋತ್ತಮ.ಕೆ ಸ್ವಾಗತಿಸಿದರು. ನಾಗೇಶ ಬೆಣ್ಣಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಮ್.ರೊಟ್ಟಿ ವಂದಿಸಿದರು.