ಲೋಕದರ್ಶನವರದಿ
ರಾಣೇಬೆನ್ನೂರು: ಪ್ರತಿಯೊಬ್ಬ ವ್ಯಕ್ತಿಯು ತನ್ನ ವಿದ್ಯಾಥರ್ಿ ಜೀವನದಲ್ಲಿ ಸ್ಕೌಟ್ಸ್-ಗೈಡ್ಸ್ ಶಿಕ್ಷಣವನ್ನು ಪಡೆದಲ್ಲಿ ಯಾವುದೇ ಸಂದೇಹವಿಲ್ಲದೇ ಒಳ್ಳೆಯ ನಾಗರಿಕರಾಗಿ ಉತ್ತಮ ಸಮಾಜ ನಿಮರ್ಾಣ ಮಾಡಲು ಸಹಕಾರಿಯಾಗಿದೆ ಎಂದು ಭಾರತ್ ಸ್ಕೌಟ್ಸ್- ಗೈಡ್ಸ್ ತಾಲೂಕ ಸಹಕಾರ್ಯದಶರ್ಿ ಅನ್ನಪೂರ್ಣ ಕಟಗಿ ಹೇಳಿದರು.
ನಗರ ಹೊರವಲಯ ಹುಣಸಿಕಟ್ಟಿ ರಸ್ತೆಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ರೇಂಜರ್ಸ್ ಘಟಕವು ಆಯೋಜಿಸಿದ 'ವಿಶೇಷ ಉಪನ್ಯಾಸ ಹಾಗೂ ದೀಕ್ಷಾ ಸಮಾರಂಭ' ಉದ್ಘಾಟಿಸಿ, ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಗೈಡಿಂಗ್ ತರಬೇತಿ ಶಿಕ್ಷಣ ಹಿಂದೆಂದಿಗಿಂತಲೂ ಇಂದು ಹೆಚ್ಚು ಅತ್ಯವಶ್ಯಕವಾಗಿದೆ. ಅವಳು ತನ್ನ ಶಿಕ್ಷಣದ ಜೊತೆಗೆ ಭವಿಷ್ಯದ ಬದುಕಿನಲ್ಲಿ ಧೈರ್ಯ, ಸಾಹಸ, ಆತ್ಮವಿಶ್ವಾಸದಿಂದ ಅತ್ಯಂತ ಸರಳವಾಗಿ ಮತ್ತು ಸಮಾಜಮುಖಿಯಾಗಿ ಬದುಕನ್ನು ಸಾಗಿಸಲು ಸಾಧ್ಯವಾಗುವುದು ಎಂದ ಅವರು ಇಂದಿನ ವಿದ್ಯಾಥರ್ಿಗಳು ಆತ್ಮಸ್ಥೈರ್ಯದಿಂದಿರಲು ನಾಯಕತ್ವದ ಗುಣಗಳನ್ನು ಇಲ್ಲಿಂದಲೇ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಮಾತನಾಡಿದ ರೇಂಜರ್ಸ್ ಲೀಡರ್ ಡಾ|| ಸಿದ್ಧಲಿಂಗಮ್ಮ ಬಿ.ಜಿ. ಅವರು ಘಟಕದ ಧ್ಯೇಯೋದ್ದೇಶಗಳು, ಸ್ಕೌಟ್-ಗೈಡ್ ಶಿಕ್ಷಣದ ಉಪಯೋಗ ಕುರಿತು ವಿವರಿಸಿದರು. ವಿದ್ಯಾಥರ್ಿಗಳು ಸಾಮೂಹಿಕ ಪ್ರಾರ್ಥನೆ ನಡೆಸಿದರು, ಬಸಮ್ಮ ಸ್ವಾಗತಿಸಿದರು. ಪ್ರಭಾವತಿ ನಿರೂಪಿಸಿ, ಹೀನಾ ವಂದಿಸಿದರು.