ಲೋಕದರ್ಶನ ವರದಿ
ಬೆಳಗಾವಿ: ಸರಕಾರ ನೀಡುವ ಲ್ಯಾಪಟಾಪ್ ಯೋಜನೆಯನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು, ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ, ಶಿವಾನಂದ ಹೊಸಮನಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಶನಿವಾರ 08 ರಂದು ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು,
ಪ್ರಸುತ ದಿನಮಾನಗಳಲ್ಲಿ ಜಾಗತಿಕ ಹಳ್ಳಿ ಎಂಬ ಪರಿಕಲ್ಪನೆ ಹಾಗೂ ಡಿಜಿಟಲ್ಇಂಡಿಯಾ ಎಂಬ ಪರಿಕಲ್ಪನೆ ಸರಕಾರ ಜನ ಸಮೂದಾಯಕ್ಕೆ ಯೋಜಿತವಾಗಿ ಪ್ರಚಾರ ಮಾಡುತ್ತಿದೆ.
ಆ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಈ ಲ್ಯಾಪ್ಟಾಪ್ ಮೂಲಕ ಜಾಗತಿಕ ಹಳ್ಳಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಗ್ರಾಮ ಸಮೂದಾಯಕ್ಕೆ ತಿಳಿಸಬೇಕೆಂದು ಕುಲಪತಿಗಳು ಅಭಿಪ್ರಾಯ ವ್ಯಕ್ತಪಡಿದರು.
ಸರಕಾರದ ಎಸ್ಸಿಪಿ/ ಟಿಎಸ್ಪಿ ಯೋಜನೆಯಲ್ಲಿ 266 ಪರಿಶಿಷ್ಟ ಜ್ಯಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥಿಗಳಿಗೆ ಲಾಪ್ಟಾಪ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಸಿದ್ದು ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ. ರಂಗರಾಜ ವನದುರ್ಗ, ಪ.ಜಾ/ಪ.ಪಂ ವಿಶೇಷ ಅಧಿಕಾರಿ ಪ್ರೊ. ವಿ ಎಸ್.ಶೀಗಿಹಳ್ಳಿ, ಪ್ರೊ. ಎಸ್. ಸಿ. ಪಾಟೀಲ, ವಿದ್ಯರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರು ಡಾ. ಕೆ. ಬಿ. ಚಂದ್ರಿಕಾ, ಡಾಗಜಾನನ ನಾಯಕ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.