ವಿದ್ಯಾರ್ಥಿಗಳ ರಜತ ಮಹೋತ್ಸವ - ಗುರುಗಳಿಗೆ ಸನ್ಮಾನ
ಬಳ್ಳಾರಿ 12 : ಸ್ಥಳೀಯ ಕಂಟೋನ್ ಮೆಂಟ್ ಪ್ರದೇಶದಲ್ಲಿರುವ ಕಿರಿಯ ತಾಂತ್ರಿಕ ಶಾಲೆಯ 2000-2001ರಸಾಲಿನ ವಿದ್ಯಾರ್ಥಿಗಳು ತಮ್ಮ ರಜತ ಮಹೋತ್ಸವನ್ನು ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದು ಗುರುಗಳಿಗೆ ಗೌರವಿಸಿ ಸನ್ಮಾನಿಸಿದರು. ಶಿಕ್ಷಕರಾದ ಶ್ರೀರಾಮದಾಸ್, ಶಿವಶಂಕರ, ತಿಪ್ಪೇಸ್ವಾಮಿ, ಶಿಕ್ಷಕಿಯರಾದ ಸುಮಾ, ಗಿರಿಜಾ ಅವರುಗಳು ಉಪಸ್ಥಿತರಿದ್ದು ಹಳೆಯ ವಿದ್ಯಾಥಿ9ಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.ಕಾಯ9ಕ್ರಮದಲ್ಲಿ 2000-01ರ ಸಾಲಿನ ವಿದ್ಯಾರ್ಥಿಗಳಾದ ಕೆಂಚಪ್ಪಬಾಬು, ಸಂಗಮೇಶ್ವರ, ರಾಜಶೇಖರ, ರವಿಕುಮಾರ್, ಪ್ರದೀಪ, ಹಯಾತ್, ಅಶೋಕ, ಶಿವಲಿಂಗ ಸ್ವಾಮಿ, ಸರಸ್ವತಿ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು