ಲೋಕಲ್ಯಾಣಕ್ಕಾಗಿ ವಿದ್ಯಾರ್ಥಿನಿಯಿಂದ 108 ಪ್ರದಕ್ಷಣೆ

ಲೋಕಲ್ಯಾಣಕ್ಕಾಗಿ ವಿದ್ಯಾರ್ಥಿನಿಯಿಂದ 108 ಪ್ರದಕ್ಷಣೆ  Student performs 108 rounds of circumambulation for public welfare

ಲೋಕದರ್ಶನ ವರದಿ 

ಮಹಾಯಜ್ಞದಲ್ಲಿ ಸಿ.ಸಿ.ಪಾಟೀಲ ಅವರು ಕುಟುಂಬ 


ಗದಗ  15; ನಗರದಲ್ಲಿ ನಡೆಯುತ್ತಿರುವ ಅತಿ ರುದ್ರ ಮಹಾಯಾಗ ಕಾರ್ಯಕ್ರಮಕ್ಕೆ ಮಾಜಿ ಸಚಿವರು ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಅವರು ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮ ವೀಕ್ಷಿಸಿ, ನಾಗಾಸಾಧುಗಳ ದರ್ಶನ ಭಾಗ್ಯ ಪಡೆದರು. 

  

ಲೋಕಲ್ಯಾಣಕ್ಕಾಗಿ ವಿದ್ಯಾರ್ಥಿನಿಯಿಂದ 108 ಪ್ರದಕ್ಷಣೆ  


ಗದಗ : ನಗರದಲ್ಲಿ ಅತಿರುದ್ರ  ಮಹಾಯಜ್ಞ ನಡೆಯುವ ಪರಿಸರದಲ್ಲಿ ಯಜ್ಞ ಶಾಲಾ ಪರಿಕ್ರಮ ಪ್ರದಕ್ಷಣೆಯನ್ನು ವಿದ್ಯಾರ್ಥಿನಿಯಾದ ಕುಮಾರಿ ವಿನಲ್ ಖಟವಟೆ ಸುಮಾರು 108 ಪ್ರದಕ್ಷಣೆ ಹಾಕಿ ಲೋಕಕಲ್ಯಾಣದ ಯಜ್ಞಗೆ ಭಕ್ತಿಭಾವವನ್ನು ಪ್ರದರ್ಶಿಸಿದರು. ಈ ಭಕ್ತಿ ಭಾವವನ್ನು ಗಮನಿಸಿದ ನಾಗಾಸಾಧು ಸಹದೇವಾನಂದ ಗಿರಿ ಗುರೂಜಿ ಮಹಾರಾಜ ವಿನಲ್ ಕಟವಟೆ ಅವರಿಗೆ ಸನ್ಮಾನಿಸಿ ಆಶೀರ್ವದಿಸಿದರು. 


 ಈ ಸಂದರ್ಭದಲ್ಲಿ ಮಾಜಿ ಸಚಿವರು, ನರಗುಂದ ಶಾಸಕರು,ಅತಿರುದ್ರ ಮಹಾಯಜ್ಞ ಸಮಿತಿ ಗೌರವ ಅಧ್ಯಕ್ಷರಾದ  ಸಿ. ಸಿ. ಪಾಟೀಲ ಹಾಗೂ ಅತಿರುದ್ರ ಮಹಾಯಜ್ಞ ಸಮಿತಿ ಅಧ್ಯಕ್ಷರು  ಕಿರಣ ಭೂಮಾ, ರಾಜು ಕುರುಡಗಿ, ಎಸ್‌. ಎಚ್‌. ಶಿವನಗೌಡ್ರ, ರವಿ ಗುಂಜಿಕರ, ರಮೇಶ ಸಜ್ಜಗಾರ,  ರವಿ ಮಾನ್ವಿ, ಪ್ರಶಾಂತ ನಾಯಕರ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.  

ಆತಿರುದ್ರ ಮಹಾಯಜ್ಞಕ್ಕೆ ಹರಿದು ಬರುತ್ತಿರುವ ಜನಸಾಗರ 



ಗದಗ :  ​‍್ರ​‍್ರಥಮ ಬಾರಿಗೆ ನಗರದ ವಿದ್ಯಾದಾನ ಸಮಿತಿಯ ಆವರಣದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯ ಅಡಿಯಲ್ಲಿ ನಾಗಾಸಾದು ಶ್ರೀ ಸಹಾದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದಲ್ಲಿ  ವಿಶೇಷ ಹೋಮ-ಹವನ ಪೂಜೆ ಕಾರ್ಯಕ್ರಮಗಳು ವೀಕ್ಷಿಸಿ ಶಿವಲಿಂಗುವಿನ  ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ. 

ಲೋಕ ಕಲ್ಯಾಣಕ್ಕಾಗಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಮತ್ತು ಹಲವು ವಿಶೇಷತೆಯಿಂದ ಕೂಡಿದ ಈ ಧಾರ್ಮಿಕ ಕಾರ್ಯಕ್ರಮವನ್ನು ನೋಡುವುದೇ ಒಂದು ಭಾಗ್ಯವಾಗಿದೆ. 


   

ಮಹಾಯಾಗಕ್ಕೆ ಆಗಮಿಸಿದ ನಾಗಾಸಾಧುಗಳು 


ಗದಗ : ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಅತಿರುದ್ರ ಮಹಾಯಜ್ಞ ಸಮಿತಿಯಿಂದ ನಡೆಯುತ್ತಿರುವ ಅತಿರುದ್ರ  ಮಹಾಯಾಗ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ನಾಗಸಾಧುಗಳು ಗದುಗಿನ ಜನತೆಗೆ ಆಶೀರ್ವದಿಸಿದರು. ನಾಗಸಾಧುಗಳನ್ನು  ನಗರದ ಜನತೆ ಬಹಳ ಉತ್ಸಾಹದಿಂದ ಕಣ್ಣು ತುಂಬಿಕೊಂಡರು.