ಸಣ್ಣ ಧರ್ಮಿಯರ ವಧು ವರರ ಶೋಧನೆ ಕಷ್ಟದಾಯಕವಾಗಿದೆ: ಕರೆಪ್ಪಗೋಳ

Student life is very important: Junnura

ಜಮಖಂಡಿ 17: ಇಂದಿನ ದಿನಮಾನಗಳಲ್ಲಿ ಪಾಲಕರಿಗೆ ವಧು ವರರನ್ನು ಹುಡಕುವದು ಕಷ್ಟಕರವಾಗಿದೆ. ಮತ್ತು ದಿನನಿತ್ಯ ಸಾವಿರಾರು ಹಣ ಖರ್ಚುಮಾಡಿ ಊರಿಂದ ಊರಿಗೆ ವಧು ವರ ಶೋಧನೆಗೆ ಹೋಗುತ್ತಿರುವದು ಸಾಮಾನ್ಯವಾಗಿದೆ. ಇದರ ಮಧ್ಯೆ ಮದ್ಯವರ್ತಿಗಳು ಇದನ್ನು ಉದ್ಯೋಗವಾಗಿ ಮಾಡಿಕೊಂಡಿರುವದು  ಪಾಲಕರಿಗೆ ತಲೆನೋವಾಗಿದೆ ಎಂದು ಗೋಕಾಕದ ನಿವೃತ್ತ ಸೈನಿಕ ಶ್ರೀವಿಶ್ವಗುರು ವಧು ವರ ಮಾಹಿತಿ ಕೇಂದ್ರದ ಮುಖ್ಯ ಕಚೇರಿಯ ಅಧ್ಯಕ್ಷ ಪ್ರಕಾಶ ಕರೆಪ್ಪಗೋಳ ಹೇಳಿದರು.  

ನಗರದ ಗವಳಿಗಲ್ಲಿಯಲ್ಲಿ ಶ್ರೀ ವಿಶ್ವಗುರು ವಧುವರರ ಮಾಹಿತಿ ಕೇಂದ್ರದ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಾತಿಗೊಂದು ವಧು ವರರ ವೇದಿಕೆಯಾಗಿರುವದರಿಂದ ಸಣ್ಣ ಧರ್ಮಿಯರ ವಧು ವರರ ಶೋಧನೆ ಕಷ್ಟದಾಯಕವಾಗಿದೆ. ಆದ್ದರಿಂದ ಶ್ರೀವಿಶ್ವಗುರು ವಧುವರರ ಮಾಹಿತಿ ಕೇಂದ್ರದಲ್ಲಿ ಎಲ್ಲ ಸಮಾಜದ ವಧುವರರ ಮಾಹಿತಿಯನ್ನು ಸಂಗ್ರಹಿಸಿ ಅವರ ವಿದ್ಯಾರ್ಹತೆ ವಯಸ್ಸು ಉದ್ಯೋಗಕನುಸಾರವಾಗಿ ಅವರವರ ವಾಟ್ಸಸ್ ಯ್ಯಾಪ್ ಗ್ರೂಪಿಗೆ ಮಾಹಿತಿಯನ್ನು ನೀಡಲಾಗುವದು ಇದರಿಂದ ಪಾಲಕರಿಗೆ ವಧು ವರರಿಗೆ ಬಹಳಷ್ಟು ಅನುಕೂಲಕರವಾಗಿದೆ. ಸೇವಾ ಮನೋಭಾವನೆಯಿಂದ ಮತ್ತು ಯಾವುದೆ ಆಸೆ ಆಮಿಷಗಳಿಗೆ ಅವಕಾಶವಿಲ್ಲದೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.  

ವಿ.ಪ ಮಾಜಿ ಸದಸ್ಯ ಜಿ,ಎಸ್, ನ್ಯಾಮಗೌಡ ಹಾಗೂ ಮುಖಂಡ ಉಮೇಶ ಮಹಾಬಳಶೆಟ್ಟಿ ಮಾಹಿತಿ ಕೇಂದ್ರದ ಗಣಕಯಂತ್ರವನ್ನು ಉದ್ಘಾಟಿಸಿದರು.  

ಜಮಖಂಡಿ ಶಾಖಾ ಅಧ್ಯಕ್ಷ ಬಸವರಾಜ ಬಳಗಾರ ಮಾತನಾಡಿ, ಉಪ ಪಂಗಡಗಳ ವಧು-ವರರ ಮಾಹಿತಿ ಮಾರ್ಗದರ್ಶಿ ಕೇಂದ್ರವನ್ನು ಆರಂಭಿಸಲಾಗಿದ್ದು, ಇಲ್ಲಿ ವಧು-ವರರ ಮಾಹಿತಿ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಲಾಗುತಿದೆ. ಹೆಚ್ಚಿನ ಮಾಹಿತಿಗೆ ಶ್ರೀವಿಶ್ವಗುರು ವಧು-ವರರ ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಬೇಕು ಎಂದು ತಿಳಿಸಿದರು.  

ಮುತ್ತಿನಕಂತಿ ಹಿರೇಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಓಲೇಮಠದ  ಆನಂದ ದೇವರು ಜಕನೂರ - ಕುಂಚನೂರ ಕಮರಿಮಠದ ಸಿದ್ದಲಿಂಗೇಶ್ವರ ಶ್ರೀಗಳು ಆಲಗೂರ ದರಿದೇವರಮಠದ ಶಾಂತಮೂರ್ತಿ  ಲಕ್ಷ್ಮಣ ಮುತ್ಯಾ ಬಸವರಾಜ ಶಾಸ್ತ್ರಿಗಳು ಲಿಂಗರಾಜ ಪಾಟೀಲ ಪ್ರಕಾಶ ಪಾಟೀಲ ಸದಾನಂದ ಬಾಗೇವಾಡಿ ಕಾಡು ಗಡಾದ ಎಸ್, ಬಿ, ಜಾಮಗೊಂಡ ಮಹೇಶ ಬಾಂಗಿ ಇತರರು ಇದ್ದರು. ಸುನೀತಾ ಬಳಗಾರ ಸ್ವಾಗತಿಸಿದರು. ಶಿವಾನಂದ ಕೊಣ್ಣೂರ ವಂದಿಸಿದರು.