ಮುನವಳ್ಳಿ: ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಲೋಕದರ್ಶನ ವರದಿ

ಮುನವಳ್ಳಿ 10: ಪಟ್ಟಣದ ಪ್ರಾರ್ಥನಾ ಎಜ್ಯುಕೇಶನ್ ಡೆವಲಪ್ಮೆಂಟ ಫೌಂಡೇಶನ್ ಸಂಚಾಲಿತ ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ  ಸ್ವಾಗತ, ಪಾಲಕರ ಪಾದಪೂಜೆ ಹಾಘೂ ಪಠ್ಯ-ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಈಚೆಗೆ ಜರುಗಿತು.

    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅಕ್ಕನ ಬಳಗದ ಸದಸ್ಯೆ ಸುರೇಖಾ ಗೋಪಶೆಟ್ಟಿ ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿ ಹೆಚ್ಚಿಸುವಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಜೊತೆಗೆ ಪಾಲಕರು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಿ ಸದೃಢರನ್ನಾಗಿಸಬೇಕು ಎಂದರು.

     ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಂದ ತಂದೆ ತಾಯಿಗಳ ಪಾದಪೂಜೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಗೌರಿ ಜಾವೂರ, ಪುರಸಭೆ ಸದಸ್ಯೆ ಸವಿತಾ ಹಂಜಿ, ಸುಧಾ ಭಂಡಾರಿ, ಲಕ್ಷ್ಮೀ ಅತ್ತಿಮರದ, ರೂಪಾ ಕಲಾಲ, ಸುರೇಶ ಜಾವೂರ, ಶ್ರೀಶೈಲ ಹಂಜಿ, ಕೇಶವ ಭಂಡಾರಿ, ನಾರಾಯಣ ಕಲಾಲ ಇತರರು ಇದ್ದರು. ಬಾಳು ಹೊಸಮನಿ ನಿರೂಪಿಸಿದರು.