ವಿದ್ಯಾರ್ಥಿಗಳ ಸೆಮಿಸ್ಟರ ಫಲಿತಾಂಶ ಬಿಡುಗಡೆ ಭರವಸೆ

Student Semester Result release assured

ವಿದ್ಯಾರ್ಥಿಗಳ ಸೆಮಿಸ್ಟರ ಫಲಿತಾಂಶ ಬಿಡುಗಡೆ ಭರವಸೆ  

ಶಿಗ್ಗಾಂವಿ  25: ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಸೆಮಿಸ್ಟರ್ ಫಲಿತಾಂಶ ಹಾಗೂ ಅಂಕಪಟ್ಟಿ ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಒತ್ತಾಯಿಸಿ ಎಸ್‌ಎಫ್‌ಐ ಘಟಕ ನೇತೃತ್ವದಲ್ಲಿ ಸಭೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ತೀರ್ಮಾನಿಸಿದರು. ಕಜಾವಿವಿದ ಎಲ್ಲಾ ವಿಭಾಗದ ವಿದ್ಯಾರ್ಥಿಗಳ ಪ್ರಥಮ, ದ್ವೀತಿಯ, ತೃತೀಯ ಸೆಮಿಸ್ಟರ್ ಫಲಿತಾಂಶ ಬಿಡುಗಡೆಗಾಗಿ ಹಾಗೂ ಮುದ್ರಿತ ಅಂಕಪಟ್ಟಿ ಸೇರಿದಂತೆ ವಿದ್ಯಾರ್ಥಿಗಳ ಅನೇಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕುಲಸಚಿವರಾದ ಪ್ರೊ. ಸಿ.ಟಿ.ಗುರುಪ್ರಸಾದ್ ಅವರಿಗೆ ಜನವರಿ 16 ರಂದು ಮನವಿ ಪತ್ರ ಸಲ್ಲಿಸಿದರು.   

ಅದರ ಪರಿಣಾಮವಾಗಿ ಎಸ್‌ಎಫ್‌ಐ ಮಧ್ಯೆ ಪ್ರವೇಶದಿಂದ ಪ್ರಥಮ, ದ್ವೀತಿಯ ಸೆಮಿಸ್ಟರ್ ಫಲಿತಾಂಶ ಬಿಡುಗಡೆ ಮಾಡಿದ್ದಾರೆ. ಆದರೆ ತೃತೀಯ ಸೆಮಿಸ್ಟರ್ ಫಲಿತಾಂಶ ಹಾಗೂ ಅಂಕಪಟ್ಟಿಯ ಕುರಿತು ಯಾವುದೇ ಸಂದೇಶ ಬಂದಿಲ್ಲ. ಈಗಾಗಲೇ ಪರೀಕ್ಷೆ ಬರೆದ ತೃತೀಯ ಸೆಮಿಸ್ಟರ್ ಫಲಿತಾಂಶ ಬಿಟ್ಟರೆ ಮಾತ್ರ ಮುಂದಿನ ಸೆಮಿಸ್ಟರ್ ಪರೀಕ್ಷೆ ಹಾಜರಾಗುತ್ತೇವೆ ಇಲ್ಲವಾದರೆ ಪರೀಕ್ಷೆಯನ್ನು ಬಹಿಷ್ಕಾರಿಸುತ್ತೇವೆ. ದಿನಾಂಕ:27.01.2025 ಸೋಮವಾರ ರಂದು ಫಲಿತಾಂಶ ಬಿಡುಗಡೆಗಾಗಿ ಕುಲಪತಿಗಳು ಭರವಸೆ ನೀಡಿದ್ದರು ಅಲ್ಲಿಯವರೆಗೆ ಕಾಯುತ್ತೇವೆ. ಒಂದು ವೇಳೆ ಭರವಸೆ ಹುಸಿಯಾದರೆ ವಿವಿ ಎದರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಎಸ್‌ಎಫ್‌ಐ ಘಟಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಭೆ ನಡೆಸಿ ತೀರ್ಮಾನಿಸಿದರು ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಕಜಾವಿವಿ ಘಟಕ ಅಧ್ಯಕ್ಷ ಅರುಣ್ ಪಾಂಡೆ, ಕಾರ್ಯದರ್ಶಿ ಸೌಭಾಗ್ಯ ಕೋಳಿವಾಡ ಪತ್ರಿಕಾ ಪ್ರಕಟಣೆ ಮೂಲಕ ವಿವಿಗೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಘಟಕ ಉಪಾಧ್ಯಕ್ಷರಾದ ಕಾವ್ಯ ಎಮ್ ಕೆ, ಪ್ರತಿಭಾ ಪಿ ಬಿ, ಬಸವರಾಜ ಬಡಿಗೇರ್, ಚನ್ನಪ್ಪ, ಸಹ ಕಾರ್ಯದರ್ಶಿ ಗೀತಾ ಕೆ, ಶಿಲ್ಪಾ ಎಸ್, ವಿನೋದಕುಮಾರ್ ಡಿ, ಉಮೇಶ್ ಟಿ, ಪ್ರಶಾಂತ, ಸಂಜಯ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.