ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಲೋಕದರ್ಶನ ವರದಿ

ಬೈಲಹೊಂಗಲ 07: ಪಟ್ಟಣದಲ್ಲಿ ಶತಮಾನ ಕಂಡ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಹಾಗೂ ಕಿತ್ತೂರು ಚನ್ನಮ್ಮ ಬಾಲಿಕೆಯರ ಪ್ರೌಢಶಾಲೆಯಲ್ಲಿ 1990-91ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹಿತರ ಸಮ್ಮೇಳನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಅರ್ಥಪೂರ್ಣವಾಗಿ ನಡೆಯಿತು.  ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸ್ನೇಹಿತರ ಬಳಗದವರೇ ಅತಿಥಿಗಳಾಗಿದ್ದು ವಿಶೇಷವಾಗಿತ್ತು. ಮುಖ್ಯ ಅತಿಥಿಗಳಾಗಿ ಮಹಾಂತೇಶ ಗುಂಡ್ಲೂರ, ಸುಭಾಸ ತುರಮರಿ, ಬಾಬು ನಾಗನೂರ, ವಿವೇಕಾನಂದ ಗೆಜ್ಜಿ, ರಮೇಶ ಬಾಗನವರ, ಸ್ನೇಹಲತಾ ಮುಪ್ಪಯ್ಯನವರಮಠ, ಶಕುಂತಲಾ ರುದ್ರಾಪೂರ, ಡಾ.ಸಾವಿತ್ರಿ ಬೆಟಗೇರಿ, ಆರತಿ ಚಿನಿವಾಲರ, ಶಾರದಾ ಕೊಪ್ಪದ ಆಗಮಿಸಿದ್ದರು.  

     ಹಿರಿಯ ಶಿಕ್ಷಕ ಎಂ.ಸಿ.ಹಂಗರಕಿ, ಗಣಿತ ತಜ್ಞ ಈಶ್ವರ ಹೋಟಿ ಮಾತನಾಡಿದರು. ಬಸವರಾಜ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ತಮಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದ ಆ ದಿನಗಳ ನೆನಪು ಹಂಚಿಕೊಂಡು, ಶಾಲೆಯ ಹಾಗೂ ಶಿಕ್ಷಕರ ಋಣ ಎಂದೆಂದಿಗೂ ಮರೆಯಲಾಗದು ಎಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದಕ್ಕೂ ಮೊದಲು ತಾವು ಕಲಿತ ಪ್ರೌಢಶಾಲೆಗಳಿಗೆ ತೆರಳಿ ಮುಖ್ಯಾಧ್ಯಾಪಕ ಎಂ.ವಿ.ನಾಗನೂರ, ಶಿಕ್ಷಕರಾದ ಎಸ್.ಎಸ್.ಬಳಿಗಾರ, ಕೆ.ಎಂ.ಸಂಗೊಳ್ಳಿ, ಎ.ಎಂ.ಕರ್ಕಿ  ಸೇರಿದಂತೆ ಎಲ್ಲ ಶಿಕ್ಷಕರ ಆಶೀರ್ವಾದ ಪಡೆದು ಮುಂದೆಯೂ ಮಾರ್ಗದರ್ಶನ ಮಾಡುವಂತೆ ವಿನಂತಿಸಿದರು. ಶಾಲಾ ತರಗತಿಗಳಲ್ಲಿ ಕುಳಿತು ಸವಿಸವಿ ನೆನಪು... ಸಾವಿರ ನೆನಪು ಮೆಲುಕು ಹಾಕಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶ್ರೀಶೈಲ ಯಡಳ್ಳಿ, ಬಸವರಾಜ ಯಕ್ಕುಂಡಿ, ವೀರಣ್ಣ ವಾಲಿ, ಸಂತೋಷ ಕೋಠಾರಿ, ಬಸವರಾಜ ಉಪ್ಪಿನ, ಶಿವನಗೌಡ ಪಾಟೀಲ, ಶಬ್ಬೀರ ಬಾಗವಾನ, ಗೀತಾ ದೇಶನೂರ, ಶೈಲಾ ಪಾಟೀಲ, ಸುಧಾ ಮಲ್ಲೂರ, ಭಾರತಿ ಅವಕ್ಕನವರ ಸೇರಿದಂತೆ 130ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎರಡೂ ಪ್ರೌಢಶಾಲೆಗಳಿಗೆ ಮೈಕ್ ಸೆಟ್ ನೀಡಲಾಯಿತು. ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡು ಊಟ ಸವಿದರು. ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಕುಣಿದಾಡಿ, ಆಟವಾಡಿದರು. ಸ್ನೇಹಿತರ ಬಳಗ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಸಮ್ಮೇಳನ 30 ವರ್ಷಗಳ ಹಿಂದಿನ ವಿದ್ಯಾರ್ಥಿ ಜೀವನದ ನೆನಪುಗಳ ಬುತ್ತಿ ಬಿಚ್ಚಿಡಲು ವೇದಿಕೆಯಾಗಿತ್ತು.ಹೇಮಾವತಿ ಧರ್ಮಣ್ಣವರ ಪ್ರಾರ್ಥಿಸಿದರು. ಚಂದ್ರಕಾಂತ ಹೊಸಮನಿ ಸ್ವಾಗತಿಸಿದರು. ರಾಜು ಹಕ್ಕಿ ನಿರೂಪಿಸಿದರು. ಗೀತಾ ತುರಮರಿ ವಂದಿಸಿದರು.