ಉ.ಕರ್ನಾ ಟಕ ಅಭಿವೃದ್ಧಿಗೆ ಹೋರಾಟ ನಡೆಸಬೇಕು : ಟೋಪಣ್ಣನವರ

ಬೆಳಗಾವಿ, 2: ಕರ್ನಾ ಟಕ ನವ ನಿರ್ಮಾ ಣ  ಸೇನೆ ಭಾಷೆ, ಸಮುದಾಯ ವಿರುದ್ಧವಾಗಿ ಹೋರಾಟ ಮಾಡುವುದಲ್ಲ. ಉತ್ತರ ಕರ್ನಾ ಟಕ ಅಭಿವೃದ್ಧಿ ಮುಂದಿಟ್ಟುಕೊಂಡು ಹೋರಾಟ ನಡೆಸಬೇಕು ಎಂದು ಕರ್ನಾ ಟಕ ನವ ನಿರ್ಮಾ ಣ  ಸೇನೆಯ ಸಂಸ್ಥಾಪಕ ರಾಜಕುಮಾರ್ ಟೋಪಣ್ಣನವರ ಹೇಳಿದರು.

ಅವರು ಶುಕ್ರವಾರ ಕ್ಲಬ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಕನರ್ಾಟಕ ನವ ನಿಮರ್ಾಣ ಸೇನೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರನ್ನಾಗಿ ಅಶೋಕ ಸತ್ತಿಗೌಡಾ ಪಾಟೀಲ ನೇಮಕ ಮಾಡಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವಂತಹ ಅಶೋಕ ಪಾಟೀಲರ ನೇತೃತ್ವದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಕನರ್ಾಟಕ ನವನಿರ್ಮಾ ಣ  ಸೇನೆ ಬರಿ ಭಾಷೆ, ಸಮುದಾಯ ವಿರುದ್ಧವಾಗಿ ಹೋರಾಟ ಮಾಡುವುದಲ್ಲ. ಉತ್ತರ ಕರ್ನಾ ಟಕ ಅಭಿವೃದ್ಧಿ ಮುಂದಿಟ್ಟುಕೊಂಡು ಹೋರಾಟ ನಡೆಸಬೇಕು. ಸರಕಾರ ಉತ್ತರ ಕರ್ನಾ ಟಕ ವನ್ನು ನಿರ್ಲಕ್ಷ್ಯ ಮಾಡುತ್ತಾನೆ ಬಂದಿದ್ದಾವೆ. ಆದ್ದರಿಂದ ಉತ್ತರ ಕನರ್ಾಟಕದ ಅಭಿವೃದ್ಧಿಗೆ ಮಹತ್ವ ನೀಡಬೇಕು. ಅಲ್ಲದೆ ಸಮಾಜದಲ್ಲಿ ಜನರಿಗೆ ಪರಿಸರ ಜಾಗೃತಿ, ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಸಂಘಟನೆ ಕೈಗೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಸಂಘಟನೆಯ ನೂತನ  ಚಿಕ್ಕೊಡಿಯ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ,  ಚಿಕ್ಕೋಡಿಯಲ್ಲಿ ಹಲವು ದಿನಗಳಿಂದ ಅಧ್ಯಕ್ಷ ಸ್ಥಾನ ವಹಿಸಿ ಮುನ್ನಡೆಯಬೇಕು ಎಂದು  ಕಾರ್ಯಕರ್ತರ ಒತ್ತಾಯವಾಗಿತ್ತು. ಈಗ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದು, ಸಂಘಟನೆಯ ಸಂಸ್ಥಾಪಕರ ಸಲಹೆಯಂತೆ ಮುನ್ನಡೆಯಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅರುಣ ತಕಣ್ಣನವರ, ಬಾಬುರಾವ್  ಐ.ಜಿ, ಎಂ.ರಾಮಣ್ಣಾ , ಪರಗೌಡಾ ಪಾಟೀಲ, ಸಂಜುಕುಮಾರ ತೆರದಾಲ, ಚಿದಾನಂದ ಪಾಟೀಲ, ಶಿವಾನಂದ ಪಾಟೀಲ, ಸದಾಶಿವ ತರಾಳ, ವಿನಾಯಕ ಪಾಟೀಲ, ಆನಂದ ಪಾಟೀಲ, ಕಿರಣ ಪಾಟೀಲ, ವಿಶಾಲ್ ಕಿತ್ತೂರ,  ಸಂತೋಷ ಭಮ್ಮನಾಳೆ, ಸಾಗರ , ಓಂಕಾರ ಚೌಗಲೇ, ಜಯಾನಂದ ಹೊನಕುಪ್ಪಿ, ಸುನೀಲ ಕೊಳ್ಳಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.