ಸಿಎಂ ಭರವಸೆ ಹುಸಿ.. ಈಗ ಶಿಕ್ಷಕರ ಹೋರಾಟದ ಬಿಸಿ: ಅ.12 ರಿಂದ ಶಿಕ್ಷಕರ ಸೇವಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ: ನುಗ್ಗಲಿ

ಸಿಎಂ ಭರವಸೆ ಹುಸಿ.. ಈಗ ಶಿಕ್ಷಕರ ಹೋರಾಟದ ಬಿಸಿ: ಅ.12 ರಿಂದ ಶಿಕ್ಷಕರ ಸೇವಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ: ನುಗ್ಗಲಿ Struggle demanding fulfillment of teachers' service demands from October 12 said Nuggali

ಆಲಮಟ್ಟಿ 11:  ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಹಾಗೂ ಇನ್ನಿತರ ಸೇವಾ ಬೇಡಿಕೆಗಳಿಗೆ ಸಂಬಂಧಿಸಿದಂತೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಅಗಸ್ಟ್‌ 12 ರಿಂದ ರಾಜ್ಯ ವ್ಯಾಪಿ ವಿವಿಧ ಹಂತದ ಹೋರಾಟ ನಡೆಯಲಿದೆ.      

ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ಕೂಡಲೇ ಅನುಮೋದನೆ ನೀಡುವಂತೆ ಹಾಗೂ ಶಿಕ್ಷಕರ ಹಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗ ಕಳೆದ ವರ್ಷ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರ​‍್ಪ ನವರಿಗೆ ಮನವಿ ಮಾಡಿಕೊಂಡಿತ್ತು. ಸಿಎಂ ಹಾಗೂ ಶಿಕ್ಷಣ ಸಚಿವರ ನೇತೃತ್ವದಲ್ಲಿ ಅಂದು 04-09-2024 ರಂದು ಸುದೀರ್ಘವಾದ ಸಭೆ ನಡೆಸಿ ಒಂದು ಸಮಿತಿಯನ್ನು ರಚಿಸಿ 30 ದಿನಗಳಲ್ಲಿ ಸಮಿತಿಯಿಂದ ವರದಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅಗಿರುವ ಅನ್ಯಾಯವನ್ನು ಸರಿಪಡಿಸಿ ಶಿಕ್ಷಕರ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಸ್ಪಷ್ಟತೆಯುಳ್ಳ ಭರವಸೆಯನ್ನು ಸಿಎಂ ನೀಡಿದ್ದರು. ಶಿಕ್ಷಕರ ಇನ್ನಿತರೆ ಸೇವಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ತೀರ್ಮಾನ ಕೈಗೊಳ್ಳುವದಾಗಿ ನೀಡಿದ ಭರವಸೆ ಇಂದು ಹಾಗೆಯೇ ಕನಸಿನ ಭರವಸೆಯಾಗಿ ನಿಸ್ತೇಜನಗೊಂಡಿದೆ. ಇಲ್ಲಿಯವರೆಗೂ ಅಂದಿನ ಆ ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿದೆ. ಸಿಎಂ ಅವರ 1 ತಿಂಗಳ ಭರವಸೆಗೆ ಈಗ ಬರೋಬ್ಬರಿ 11 ತಿಂಗಳಾಗಿವೆ. ಇದರಿಂದ ಶಿಕ್ಷಕ ವೃಂದಕ್ಕೆ ನೋವಾಗಿದೆ. ಇದರಿಂದಾಗಿ ಪುನಃ ಇದೀಗ ಅನಿವಾರ್ಯವಾಗಿ ಹಂತ ಹಂತದ ಹೋರಾಟದ ಹಾದಿಗೆ ಶಿಕ್ಷಕರ ಸಂಘ ಪ್ರಸ್ತುತ ಇಳಿಯಬೇಕಾಗಿರುವ ಪರಿಸ್ಥಿತಿ ಬಂದಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್‌.ಎಸ್‌. ಜಂಟಿಯಾಗಿ ತಿಳಿಸಿದ್ದಾರೆ.       

2017 ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿದ ಬಳಿಕ ಸೇವಾ ನಿಯಮಗಳನ್ನು ಪೂರ್ವಾನ್ವಯವಾಗುವಂತೆ ಅನುಷ್ಟಾನಗೊಳಿಸಬಾರದು. ಪದವೀಧರರಾಗಿರುವ ಸುಮಾರು 40 ಸಾವಿರಕ್ಕೂ ಹೆಚ್ಚಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು. ನೇಮಕಾತಿ 7 ನೇ ತರಗತಿವರೆಗೆ ಎಂದು ಹೇಳಿ ಈಗ 5 ನೇ ತರಗತಿವರೆಗೆ ಎಂದು ಹಿಂಬಡ್ತಿ ನೀಡಲಾಗಿದೆ. ಅಯಾ ಜಿಲ್ಲಾ ನೇಮಕಾತಿ ಸಮಿತಿಯ ಮಟ್ಟದಲ್ಲಿ ಮುಖ್ಯೋಪಾಧ್ಯಾಯ ಹುದ್ದೆಗಳಿಗೆ ಈ ಮೊದಲು ಮುಂಬಡ್ತಿ ನೀಡಲಾಗುತ್ಕಿತ್ತು. ಅದನ್ನು ಕಳೃದ ಮೂರು ವರ್ಷಗಳಿಂದ ನಿಲ್ಲಿಸಲಾಗಿದೆ. ಇದನ್ನು ಮುಂದುವರೆಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಯಲ್ಲಿ,ಮುಂಬಡ್ತಿ ಹುದ್ದೆಗಳನ್ನು ಶೇ,50 ರಷ್ಟು ನಿಗದಿಪಡಿಸಬೇಕು. ಮುಂಬಡಹ ಸಂದರ್ಭದಲ್ಲಿ ಸೇವಾ  ಜೇಷ್ಟತೆಯನ್ನು ಪರಿಗಣಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂದು ಸಿಎಂ ಹಾಗೂ ಶಿಕ್ಷಣ ಸಚಿವರ ಎದುರುಗಿಟ್ಟಾಗ ಅಧಿಕಾರಿಗಳೊಂದಿಗೆ ಕಾನೂನು ತೊಡಕು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಿ ಪ್ರಾಥಮಿಕ ಶಿಕ್ಷಕರ ಮುಂಬಡ್ತಿ ಹಾಗೂ ಇನ್ನಿತರ ಸೇವಾ ಬೇಡಿಕೆಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳೊಳಗೆ ಸೂಕ್ತ ನಿಧಾ9ರವನ್ನು ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೊಗದೊಂದಿಗೆ ನಡೆಸದ ಸುದೀರ್ಘ ಚರ್ಚೆಯಲ್ಲಿ ಸಿಎಂ, ಶಿಕ್ಷಣ ಸಚಿವರು, ಸಿಎಂ ರವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ವಿಪ ಸದಸ್ಯರಾದ ಕೆ.ಎಸ್‌.ಪುಟ್ಟಣ್ಣ, ಸಾಹಿತಿ ಬರಗೂರ ರಾಮಚಂದ್ರ​‍್ಪ, ಡಾ, ನಿರಂಜನಾರಾಧ್ಯ ಮೊದಲಾದ ಮಹನೀಯರು ಉಪಸ್ಥಿತರಿದ್ದರು ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದರು.      

ಶಿಕ್ಷಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಈ ಕಡತಗಳಿಗೆ ಈಗಾಗಲೇ ಕಾನೂನು ಇಲಾಖೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಎರಡು ಬಾರಿ ನೀಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೂ ಕೂಡಾ ತಮ್ಮ ಅಭಿಪ್ರಾಯ ನೀಡಿದೆ. ಈಗ ಆರ್ಥಿಕ ಇಲಾಖೆ ತಮ್ಮ ಅಭಿಪ್ರಾಯ ನೀಡಬೇಕಿದೆ. ತಕ್ಷಣ ಈ ಇಲಾಖೆಗಳಿಂದ ಅಭಿಪ್ರಾಯವನ್ನು ಪಡೆದು ಸಚಿವ ಸಂಪುಟದ ಅನುಮೋದನೆ ನೀಡಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇದೇ 2025 ರ ಅಗಸ್ಟ್‌ 25 ರೊಳಗಾಗಿ ನ್ಯಾಯ ಒದಗಿಸಿ ಕೊಡದಿದ್ದರೆ ಮುಂಬರುವ ದಿನಗಳಲ್ಲಿ ಶಿಕ್ಷಕರ ಸಂಘ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್‌.ಎಸ್ ಎಚ್ಚರಿಸಿದಿದ್ದಾರೆ.  

ಪ್ರಮುಖ ಬೇಡಿಕೆಗಳು : 2017 ರವರೆಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7 ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. ಉಲ್ಲೇಖ (1) ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು.2017 ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ಯಾವುದೇ ಕಾರಣಕ್ಕೂ 2016 ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪದವೀಧರ ಶಿಕ್ಷಕರೆಂದು ಪೂವಾ9ನ್ವಯಗೊಳಿಸಬಾರದು. ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಟತೆಯೊಂದಿಗೆ ಪದನಾಮೀಕರಿಸುವುದು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಟತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ಅನ್ಯ ಕಾರ್ಯಗಳಿಂದ ಹಾಗೂ ಆನ್‌ಲೈನ್ ಕೆಲಸಗಳಿಂದ ಶಿಕ್ಷಕರ ಮೇಲೆ ಆಗುತ್ತಿರುವ ತೀವ್ರತರವಾದ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳು ಶಿಕ್ಷಕರ ಸಂಘದ ಪ್ರಮುಖ ಬೇಡಿಕೆಗಳಾಗಿದ್ದು ಇವುಗಳೆಲ್ಲ ಈಡೇರಿಕೆಗೆ ಸಕಾ9ರಕ್ಕೆ ಒತ್ತಾಯಿಸಿದೆ.       

ಅಗಸ್ಟ್‌ 8 ರಂದು ನಡೆದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಗೂಗಲ್ ಮೀಟ್ ಸಭೆಯಲ್ಲಿ ಮುಂದಿನ ಹೋರಾಟದ ರೂಪರೇಷೆಗಳನ್ನು ಚರ್ಚಿಸಿ ಒಮ್ಮತದ ನಿಧಾ9ರ ಕೈಗೊಳ್ಳಲಾಯಿತು. ಮೊದಲೇ ಹಂತದಲ್ಲಿ ಅಗಸ್ಟ್‌ 12 ರಂದು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಎಚ್ಚರಿಸುವ ಕಾರ್ಯ ಮಾಡಲಾಗುವುದು. ಅಂದು ಅಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹಾಗೂ ಉಪನಿದೇರ್ಶಕರ ಮೂಲಕ ಮುಖ್ಯ ಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಬೇಡಿಕೆ ಈಡೇರಿಸುವಂತೆ ಹಕ್ಕೊತ್ತಾಯ ಹಾಗೂ ಹೋರಾಟ ನಡೆಸುವ ಕುರಿತು ಪತ್ರ ಸಲ್ಲಿಸಲಾಗುವುದು.    ್ವ 

ಅಗಸ್ಟ್‌ 25 ರೊಳಗಾಗಿ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುವುದು. ಅಗಸ್ಟ್‌ 26 ರಂದು ಸಕಾ9ರಕ್ಕೆ ಮತ್ತು ಇಲಾಖೆಗೆ ಹೋರಾಟದ ಕುರಿತು ಪತ್ರ ಸಲ್ಲಿಸಲಾಗುವುದು.ಹಂತ 2 : ಇದೇ ಅಗಸ್ಟ್‌ 27 ರೊಳಗಾಗಿ ಬೇಡಿಕೆ ಈಡೇರದಿದ್ದಲ್ಲಿ ಬರುವ ಸಪ್ಟೆಂಬರ್ 3 ರಂದು ರಾಜ್ಯದ ಶಿಕ್ಷಕರೊಡಗೂಡಿ ಎಲ್ಲಾ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಚುನಾಯಿತ ಪದಾಧಿಕಾರಿ,ಪ್ರತಿನಿಧಿಗಳು, ನಾಮನಿರ್ದೇಶನ ಸದಸ್ಯರೊಳಗೊಂಡು ಎಲ್ಲಾ ಶಿಕ್ಷಕರು ಸಾಂದಭಿ9ಕ ರಜೆ ಹಾಕಿ ರಾಜ್ಯ ಮಟ್ಟದ ಬೃಹತ್ ಅಂತಿಮ ಹೋರಾಟಕ್ಕೆ ಅಣಿಯಾಗಲು " ಫ್ರೀಡಂಪಾರ್ಕ್‌ ಚಲೋ" ಕಾರ್ಯಕ್ರಮ ಹಮ್ಮಿಕೊಂಡು ಹೋರಾಟಕ್ಕಿಳಿಯಲಾಗುವುದು. ಅಂದು 6 , 8 ನೇ ತರಗತಿಗಳ ಪಾಠ ಬೋಧನೆ ಬಹಿಷ್ಕರಿಸಲಾಗುವುದು.ಹಂತ 3: ಸೆಪ್ಟೆಂಬರ್ 3 ರೊಳಗಾಗಿ ಯಾವುದೇ ನಿರ್ಣಯ ಸರ್ಕಾರ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಎಲ್ಲ ತಾಲೂಕು,ಜಿಲ್ಲಾ, ರಾಜ್ಯ ಮಟ್ಟದ ಚುನಾಯಿತ ಪದಾಧಿಕಾರಿ, ಪ್ರತಿನಿಧಿಗಳು, ನಾಮನಿರ್ದೇಶಿತ ಸದಸ್ಯರೊಡಗೂಡಿ ಸೆಪ್ಟೆಂಬರ್ 4 ರಿಂದ 5 ರವರೆಗೆ ಒಂದು ದಿನ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಅದರಂತೆ ನಾಲ್ಕನೇ ಹಂತದಲ್ಲಿ  ಹೋರಾಟದ ಭಾಗವಾಗಿ ಸೆಪ್ಟೆಂಬರ್ 5 ರಂದು " ಬೆಂಗಳೂರಿನ ಫ್ರೀಡಂಪಾರ್ಕ್‌" ನಲ್ಲಿಯೇ ಎಲ್ಲ ಪದಾಧಿಕಾರಿಗಳ, ಪ್ರತಿನಿಧಿಗಳ ನೇತೃತ್ವದಲ್ಲಿ "ಶಿಕ್ಷಕರ ದಿನಾಚರಣೆ" ಆಚರಿಸುವುದರೊಂದಿಗೆ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರೆಸಲಾಗುವುದು. ಪದವೀಧರ ಶಿಕ್ಷಕರಿಗೆ ನ್ಯಾಯ ದೊರಕುವರೆಗೂ ನಿರಂತರವಾಗಿ ಹಂತ ಹಂತದ ಹೋರಾಟ ಸಂಘದಿಂದ ನಡೆಯಲ್ಲಿದ್ದು ಎಲ್ಲರ ಬೆಂಬಲ, ಪ್ರೋತ್ಸಾಹ, ಸಹಕಾರಕ್ಕೆ ಚಂದ್ರಶೇಖರ ನುಗ್ಗಲಿ, ಚೇತನ್ ಹೆಚ್‌.ಎಸ್ ಮನವಿ ಮಾಡಿಕೊಂಡಿದ್ದಾರೆ.