ದೃಢ ಸಂಕಲ್ಪ, ಸತತ ಪ್ರಯತ್ನ ಪರಿಶ್ರಮಗಳೇ ಯಶಸ್ವಿಗೆ ದಾರಿ: ಪ್ರೊ.ಬಿ.ಜಿ.ಪತ್ತಾರ

Strong determination, persistent efforts are the way to success: Prof. B. G. Pattara

ದೇವರಹಿಪ್ಪರಗಿ 29 :ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳೂ ಸಹ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ದೃಢ ಸಂಕಲ್ಪ, ಸತತ ಪ್ರಯತ್ನ ಪರಿಶ್ರಮಗಳೇ ಯಶಸ್ವಿಗೆ ದಾರಿ ಆಗಲಿದೆ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಬಿ.ಜಿ.ಪತ್ತಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ , ರೆಡ್ ಕ್ರಾಸ್ ಮತ್ತು ಸ್ಕೌಟ್ಸ್‌ ಹಾಗೂ ಗೈಡ್ಸ್‌ ಯೋಜನೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ,ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ತಮ್ಮ ಗುರಿಸಾಧನೆಗೆ ಪ್ರಯತ್ನ ಪಡಬೇಕು. ಯಾವುದೇ ಕಾರಣಕ್ಕೂ ತಂದೆ ತಾಯಿಗಳಿಗೆ ಅಗೌರವ ತೋರದೆ ಮಾರ್ಗದರ್ಶನದಂತೆ ಮನೆಯಲ್ಲಿ ಗುರುಗಳ ಮಾರ್ಗದರ್ಶನದಂತೆ ಸಮಾಜದಲ್ಲಿ ಉತ್ತಮ ಜೀವನ ನಡೆಸಬೇಕು" ಎಂದು ಅನೇಕ ಸಾಧಕರ ಉದಾಹರಣೆಗಳನ್ನು ನೀಡುತ್ತಾ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಹಿಂದಿನ ವರ್ಷದ ಪ್ರವೇಶಾತಿಗಿಂತ ಈ ವರ್ಷದ ಪ್ರವೇಶ ಪ್ರಮಾಣ ಹೆಚ್ಚಾಗಿದ್ದು ಕಾಲೇಜಿನ ಉತ್ತಮ ಫಲಿತಾಂಶವೇ ಇದಕ್ಕೆ ಕಾರಣವಾಗಿದೆ. ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಸೂಕ್ತ ಅನುದಾನವನ್ನು ನೀಡುವ ಮೂಲಕ ಮುಂದಿನ ಶೈಕ್ಷಣಿಕ ಸಾಲಿನ ಒಳಗಾಗಿ ನೂತನ ಕಟ್ಟಡವನ್ನು ಪೂರ್ಣಗೊಳಿಸಿ, ಮುಂದಿನ ವರ್ಷದಲ್ಲಿ ನೂತನ ಕಟ್ಟಡದಲ್ಲಿ ಕಾಲೇಜು ಪ್ರಾರಂಭಿಸಲಾಗುವುದು". ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಸತ್ಪ್ರಜೆಗಳಾಗಿ ಹೊರ ಹೊಮ್ಮ ಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಪ್ರಾಧ್ಯಾಪಕರಾದ ಡಾ.ಪಿ.ಎಂ.ಪಾರಗೊಂಡ ಕಾರ್ಯಕ್ರಮದ ಉದ್ದೇಶಗಳನ್ನು ಕುರಿತು ಪ್ರಾಸ್ತಾವೀಕವಾಗಿ ಮಾತನಾಡಿದರು.ಕಾಲೇಜಿಗೆ ಹೊಸದಾಗಿ ಬಂದ ಪ್ರಾಧ್ಯಾಪಕರನ್ನು ಪ್ರಾಚಾರ್ಯರು ಸನ್ಮಾನಿಸಿ ಸ್ವಾಗತಿಸಿದರು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ. ವಿದ್ಯಾರ್ಥಿನಿಯರನ್ನು ಕೂಡ ಪುಷ್ಪ ನೀಡುವ ಮೂಲಕ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು.ಕಾರ್ಯಕ್ರಮದಲ್ಲಿ ಪ್ರೊ.ಎಮ್‌.ಎಮ್‌. ಲಕ್ಷ್ಮೀಶ ಸ್ವಾಗತಿಸಿದರು.ಪ್ರೊ.ಎಂ.ಎಸ್‌. ಶಿವಶರಣ ನಿರೂಪಿಸಿದರು. ಪ್ರೊ.ಎಸ್‌.ಬಿ.ಜಾಲವಾದಿ ವಂದಿಸಿದರು.