ಕಾಂಗ್ರೆಸ್ ಅಭ್ಯಥರ್ಿಗಳ ಗೆಲುವಿಗೆ ಶ್ರಮಿಸಿ


ಲೋಕದರ್ಶನ ವರದಿ

ಹಾವೇರಿ: ಇದೇ ತಿಂಗಳು 29ರಂದು ನಡೆಯುವ ಹಾವೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥರ್ಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಮತ್ತೆ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸನ್ನದ್ಧರಾಗಬೇಕಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಕರೆ ನೀಡಿದರು.

  ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕಳೆದ ಐದು ವರ್ಷ ನಗರಸಭೆಯಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದ ನಗರಸೇವಕರು ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ 50 ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದರಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ. ಅವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. 

ಸ್ಥಳೀಯ ಸಂಸ್ಥೆ ಚುನಾವಣೆಗೆ ಬೂತ್ ಮಟ್ಟದ ಸಂಘಟನೆ ಅವಶ್ಯ. ಪಕ್ಷ ಗುರುತಿಸಿದ ಅಭ್ಯಥರ್ಿಗಳಿಗೆ ವೈಮನಸ್ಸು ಬಿಟ್ಟು ಬೆಂಬಲಿಸಬೇಕಿದೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಗುರುತಿಸಿ ಉಮೇದುವಾರಿಕೆ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಗುಂಪುಗಾರಿಕೆ, ವೃಥಾ ಆರೋಪ ಹಾಗೂ ನಿಂದನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಮುಗಿಸಲಾಗುತ್ತದೆ ಎಂದರು. 

    ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಹಾವೇರಿ ನಗರದ ಅಭಿವೃದ್ಧಿಗೆ ಕಾಳಜಿ ಇರುವ ಪ್ರಾಮಾಣಿಕ ಅಭ್ಯಥರ್ಿಗಳನ್ನು ಗುರುತಿಸಬೇಕು. ವಾಡರ್್ವಾರು ಸಮಿತಿ ರಚನೆ, ಪಕ್ಷದ ಮುಖಂಡರ ಹಾಗೂ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು. ಜನರ ಕಷ್ಟ ಸುಖಗಳಿಗೆ ಸ್ಪಂಧಿಸುವ ಅಭ್ಯಥರ್ಿಗಳನ್ನು ಗುರುತಿಸಿ ಟೀಕೆಟ್ ನೀಡಿದರೆ ಪಕ್ಷದ ಗೆಲುವು ಸಾಧ್ಯ. ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ಅಭ್ಯಥರ್ಿಯನ್ನು ಗೆಲ್ಲಿಸಿ ನಗರಸಭೆ ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಬೇಕು ಎಂದರು.

     ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿದ್ದ ವಿಶೇಷ ಅನುದಾನಗಳನ್ನು ಹಾವೇರಿ ನಗರದ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. 50 ಕೋಟಿ ರೂ. ವಿಶೇಷ ಅನುದಾನ ಅಷ್ಟೇ ಅಲ್ಲದೇ 30 ಕೋಟಿ ರೂ.ಗಳ ಪೈಕಿ 28 ಕೋಟಿ ರೂ.ಗಳಲ್ಲಿ ರಸ್ತೆ, ಚರಂಡಿ ನಿಮರ್ಾಣ, 5.40 ಲಕ್ಷ ರೂ.ಗಳ ವೆಚ್ಚದಲ್ಲಿ ನಗರಸಭೆಗೆ ಸುಸಜ್ಜಿತ ಕಟ್ಟಡ ನಿಮರ್ಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಆತ್ಮಸಾಕ್ಷಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

      ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಪಕ್ಷದ ಮುಖಂಡರಾದ ಎಂ.ಎಂ. ಹಿರೇಮಠ, ರತ್ನಕ್ಕ ಭೀಮಕ್ಕನವರ, ಬಸವರಾಜ ಪೇಲನವರ, ಮಾದೇಗೌಡ ಗಾಜಿಗೌಡ್ರ, ಪರಶುರಾಮ ಅಡಕಿ, ಜಗದೀಶ ಬಸೇಗಣ್ಣಿ, ಪ್ರಭು ಬಿಷ್ಟನಗೌಡ್ರ, ಜಗದೀಶ ಬೆಟಗೇರಿ, ಅಡಿವೆಪ್ಪ ಡೊಳ್ಳಿನ, ಐ.ಯು. ಪಠಾಣ, ಶ್ವೇತಾ ವರಗೇರಿ, ಸುಜಾತಪ್ಪ ಚನ್ನೂರ, ಅಪ್ಪಾಲಾಲ್ ಯಾದವಾಡ, ಪ್ರಕಾಶ ಹಂದ್ರಾಳ ಉಪಸ್ಥಿತರಿದ್ದರು.