ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿ : ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 03: ಕ್ಷೇತ್ರದ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿಸುವುದರ ಮೂಲಕ ನಮ್ಮ ಕ್ಷೇತ್ರದಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಆಗಲಿ ಎಂದು ಭಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿಯಲ್ಲಿ ಹಾವೇರಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಶಿಗ್ಗಾವಿ ತಾಲೂಕಿನ ನಿರ್ದೇಶಕರಾಗಿ ಆಯ್ಕೆಯಾದ ತಿಪ್ಪಣ್ಣಾ ಸಾತಣ್ಣವರಿಗೆ ಅಭಿನಂದಿಸಿ ಮಾತನಾಡಿದ ಅವರು ನಿಮಗೆ ಸಿಕ್ಕ ಈ ಸದವಕಾಶವನ್ನು ಸದ್ಭಳಕೆ ಮಾಡಿಕೊಂಡು ಕ್ಷೇತ್ರದಲ್ಲಿಯ ರೈತರ ಆರ್ಥಿಕ ಸ್ಥಿತಿ ದ್ವಿಗುಣಗೊಳ್ಳಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಗಮೇಶ ಕಂಬಾಳಿಮಠ, ರಮೇಶ ಸಾತಣ್ಣವರ, ನಾಗರಾಜ ಅದೃಷಪ್ಪನವರ ,ಶಂಕ್ರಣ್ಣ ಮುಂದಿನಮನಿ,ಚನ್ನಪ್ಪ ಕುಂದಗೋಳ ,ಈಶ್ವರ ಹರಕುಣಿ ಬರಮಜ್ಜ ದ್ಯಾವಣ್ಣವರ, ವಿರುಪಾಕ್ಷಪ್ಪ ಸಾತಣ್ಣವರ, ಗಂಗಾಧರ ಗೋರವರ, ವೀರನಗೌಡ ಪಾಟೀಲ, ಮಂಜುನಾಥ ಮತ್ತಿಗಟ್ಟಿ, ಸಂತೋಷ ಕುಲಕರ್ಣಿ,ಆಕಾಶ ವಂಜಾರೆ,ಗುರುನಾಥ ಅಣ್ಣಿಗೇರಿ ವಿಶ್ವನಾಥ ಗಾಣಗೇರ,ಶ್ರೀಕಾಂತ ಶಿಲೋಚನಮಠ,ಚೇತನ ಕಲಾಲ ಹಾಗೂ ಗ್ರಾಮದ ಹಿರಿಯರು , ಮುಖಂಡರು , ಯುವಕರು ಉಪಸ್ಥಿತರಿದ್ದರು.