ತಂಬಾಕು ರಹಿತ ಶಾಲಾ ಪರಿಸರಕ್ಕೆ ಶ್ರಮಿಸಿ

ತಂಬಾಕು ರಹಿತ ಶಾಲಾ ಪರಿಸರಕ್ಕೆ ಶ್ರಮಿಸಿ

ಬೆಳಗಾವಿ 6: ಜಿಲ್ಲೆಯಲ್ಲಿ ಇರುವ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಕಾರ್ಯಲಯಗಳನ್ನು ತಂಬಾಕು ಮುಕ್ತ ಪ್ರದೇಶಗಳಾಗಿ ಮಾಡಿ ತಂಬಾಕು ನಿಷೇಧಿತ ಪ್ರದೇಶ  ಎಂಬ ಫಲಕಗಳನ್ನು ಅಳವಡಿಸಬೇಕು. ಅದೇ ರೀತಿ ಎಲ್ಲ ಶಾಲೆಗಳ ಸುತ್ತಮುತ್ತಲಿನ ಪ್ರದೇಶವನ್ನು ತಂಬಾಕು ರಹಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ

ಶುಕ್ರವಾರ ( ಮಾ.6 ) ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋಟ್ಟಾ ಕಾಯ್ದೆಯ 3ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏಪ್ರಿಲ್ 10ರ ಒಳಗಾಗಿ ಜಿಲ್ಲೆಯಲ್ಲಿ ಇರುವ ಎಲ್ಲಾ ಶಾಲೆಯಗಳನ್ನು ತಂಬಾಕು ರಹಿತ  ಪ್ರದೇಶವಾಗಿ ಮಾಡಬೇಕು.ಅದಕ್ಕೆ ಬೇಕಾಗುವ ಅಗತ್ಯ ಕ್ರಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು.  

ತಂಬಾಕು ರಹಿತ ಶಾಲೆಗಳ ಮತ್ತು ಕಾಯರ್ಾಲಯಗಳ ಮಾಹಿತಿಯನ್ನು ಫೋಟೊಗಳ ಸಮೇತ ಜಿಲ್ಲಾಧಿಕಾರಿಗಳ ಕಾರ್ಯಲಯ ಮತ್ತು ಜಿಲ್ಲಾಪಂಚಾಯತ ಕಾಯರ್ಾಲಯಗಳಿಗೆ ಕಳುಹಿಸಿ ಕೊಡಬೇಕು. ನಿಯಮ ಬಾಹಿರವಾಗಿ ಯಾರಾದರು ತಂಬಾಕು ಮಾರಾಟ ಮಾಡುತ್ತಿದ್ದರೆ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ದಂಡ ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ತಿಳಿಸಿದರು.

ಬಳಿಕ ಜಿಲ್ಲಾಪಂಚಾಯತ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ತಂಬಾಕು ಅಂಗಡಿಗಳು ಮಕ್ಕಳಿಗೆ ಸಿಗರೇಟ್ ಅಥವಾ ತಂಬಾಕು ಮಾರಾಟ ಮಾಡುತ್ತಾರೆ ಎಂಬುದನ್ನು ಸ್ವತಃ ಮಕ್ಕಳಿಗೆ ತಂಬಾಕು ಅಂಗಡಿಗಳಿಗೆ ಕಳುಹಿಸಿ  ಪರೀಕ್ಷೆ ಮಾಡಿ ನೋಡಿ, ಒಂದು ವೇಳೆ ಮಕ್ಕಳಿಗೆ ತಂಬಾಕು ಅಂಗಡಿಯವರು ಮಾರಾಟ ಮಾಡಿದರೆ ಅವರಿಗೆ ದಂಡ ಹಾಕಿ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ ಕೆ.ಎಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ,  ಬಿಮ್ಸ್ ನಿದರ್ೇಶಕ ಡಾ. ವಿನಯ ದಾಸ್ತಿಕೊಪ್ಪ, ಜಿಲ್ಲಾ ಸವರ್ೇಕ್ಷಣಾ ಅಧಿಕಾರಿ ಡಾ. ಬಿ.ಎನ್. ತುಕ್ಕಾರ ಸೇರಿದಂತೆ ಶಿಕ್ಷಣ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.