ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಸಾನ್ವಿ ಪ್ರಥಮ
ನೇಸರಗಿ 11: ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನಮನಹಟ್ಟಿ ವಿದ್ಯಾರ್ಥಿನಿಯರಾದ ಸಾನ್ವಿ ಯಲ್ಲಪ್ಪ ಬನ್ನೆಪ್ಪಗೋಳ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ರೋಹಿಣಿ ಬಸಯ್ಯ ಪೂಜೇರಿ ಅಭಿನಯ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿನಿಯರಿಗೆ ಬಿಇಓ ಎ ಎನ್. ಪ್ಯಾಟಿ, ಸಿಆರ್‌ಪಿ ರಾಜು ಹಕ್ಕಿ, ಗುರುಮಾತೆ ಎಮ್ ಎಸ್ ಪಾಟೀಲ, ಶಾಲೆಯ ಎಸ್ಡಿಎಂಸಿ ಹಾಗೂ ಶಿಕ್ಷಕ ವರ್ಗ ಅಭಿನಂದಿಸಿದ್ದಾರೆ.