ಕೈಗೆ ಕಪ್ಪು ಬಟ್ಟೆ ಧರಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

Strike of village administrative officers wearing black clothes

ಇಂಡಿ 10: ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಇಂಡಿ ಹಾಗೂ ಚಡಚಣ ಘಟಕ ವತಿಯಿಂದ ಕೈಗೆ ಕಪ್ಪು ಬಟ್ಟೆ ಧರಿಸಿ ರಾಜ್ಯ ಸರ್ಕಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. 

ಬೆಳೆಗೆ ಹತ್ತು ಗಂಟೆಗೆ ಮಾಹಾತ್ಮ ಗಾಂಧಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರೆ​‍್ಣ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು. 

ಈ  ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಕರ್ನಾಟಕ ರಾಜ್ಯ ನೌಕರರ ಸಂಘದ  ಇಂಡಿ ಘಟಕ ಅಧ್ಯಕ್ಷರಾದ ಬಸವರಾಜ ರಾವೂರ ಅವರು ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಮೂಲ ಬೂತ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿಗಳಿಲ್ಲ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಅಲ್ಮೆರಾ ಗಳಿಲ್ಲ, ಅತ್ಯುತ್ತಮ ಗುಣಮಟ್ಟದ ಮೋಬೈಲ್ ಪೋನ್, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್ ಹಾಗೂ ಪ್ರೀಂಟರ ಮತ್ತು ಸ್ಕ್ಯಾನರ್ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. 

ಇಂಡಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ವಾಯ್ ಎಲ್ ಪೂಜಾರಿ ಮಾತನಾಡಿ ಮೋಬೈಲ್ ಪೋನ್ ಮೂಲಕ ಸುಮಾರು ಇಪ್ಪತ್ತೊಂದು ಆಪ್ಯಗಳ ಮೂಲಕ ದೈನಂದಿನ ಕೆಲಸ ಮಾಡಲು ತೊಂದರೆಯಾಗುತ್ತಿದೆ. ವಂಶವೃಕ್ಷ, ಜಾತಿ ಪ್ರಮಾಣ ಪತ್ರ, ಇತರೆ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ,ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಎಫ್ ಐ ಆರ್ ದಾಖಲಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.  

ಚಡಚಣ ತಾಲೂಕು ಗ್ರಾಮ ಆಡಳಿತ ನೌಕರರ ಸಂಘದ ಅಧ್ಯಕ್ಷ ಎಮ್ ಎಸ್ ಹೊಸೂರು ಅವರು ಮಾತನಾಡಿ ಸುಮಾರು 30 ವರ್ಷಗಳ ಮೇಲ್ಪಟ್ಟು ಪದೋನ್ನತಿಯನ್ನು ನಿವೃತ್ತಿ ಅಂಚಿನಲ್ಲಿ ಪಡೆಯುತ್ತಿರುವುದರಿಂದ ರಾಜ್ಯಾದಲ್ಲಿನ 1196 ಗ್ರೇಡ್ -1 ಗ್ರಾಮ ಪಂಚಾಯತ್ ಹಾಗೂ 304 ಕಸಬಾ ಹೋಬಳಿ ವೃತ್ತಿಗಳನ್ನು "ಗ್ರೇಡ್ -1 ಗ್ರಾಮ ಆಡಳಿತ ಅಧಿಕಾರಿ " ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನೀರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರೇಡ್ -1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರೀಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿಯನ್ನು ನೀಡಬೇಕು ಎಂದು ಆಗ್ರಹಿಸಿದರು. 

ಶೀರಸ್ತೇದಾರ ಆರ್ ಬಿ ಮೂಗಿ, ಕಂದಾಯ ನೀರೀಕ್ಷಕ ಎಚ್ ಎಚ್ ಗುನ್ನಾಪೂರ, ಬಸವರಾಜ ಅವಜಿ, ಗ್ರಾಮ ಆಡಳಿತ ಅಧಿಕಾರಿಗಳ ಉಪಾಧ್ಯಕ್ಷ ಎಸ್ ಎಸ್ ಲಾಳಸಂಗಿ, ಹಾಗೂ ಎಸ್ ಎಸ್ ಮೋದಿ, ಮಾಹಾತೇಂಶ ಗುರುಬೆಟ್ಟಿ, ಎಮ್ ಆರ್ ರಾಠೋಡ, ಸಿದ್ದು ಪೂಜಾರಿ, ವಿ ಎಮ್ ಕೊಳಿ, ಜೆ ಕೆ ಪಾಯಪ್ಪಗೋಳ, ಶಿವಾನಂದ ವಾಲಿಕಾರ, ಜಿ ಎಮ್ ಬಿರಾದಾರ, ಸಿದ್ದು ಪೂಜಾರಿ, ಪ್ರಕಾಶ್ ಚವಡಿಹಾಳ, ಮಹೇಶ್ ರಾಠೋಡ, ಮಸ್ತಾನ ನಧಾಪ್, ವಿದ್ಯಾ ಸರಸಂಬಿ, ಕವಿತಾ ಕರಜಗಿ, ಈರಮ್ಮ ಜೋಗುರ, ಶ್ವೇತಾ ಹಚಡದ, ಭೂಮಿಕಾ ಅವರಾದಿ ಸೇರಿದಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.