ವಿವಿಧ ಬೇಡಿಕೆ ಈಡೇರಿಕೆಗಾಗಿ ಹೊರಗುತ್ತಿಗೆ ನೌಕರರಿಂದ ಮುಷ್ಕರ

ಲೋಕದರ್ಶನವರದಿ

ಬಳ್ಳಾರಿ.ಜೂ.02: ಆರೋಗ್ಯವಿಮೆ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ಹದಿನಾಲ್ಕು ಬೇಡಿಕೆಗಳ ಈಡೇರಿಕೆಗಾಗಿ ಕನರ್ಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ನಿರ್ಲಕ್ಷ ಮತ್ತು ತಾರತಮ್ಯವನ್ನು ಖಂಡಿಸಿ ಜೂ. 04. ರಿಂದ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೂ ಅನಿಧರ್ಿಷ್ಟಾವದಿ ಮುಷ್ಕರ (ಅಸಹಕಾರ ಚಳುವಳಿಯನ್ನು) ವನ್ನು ನಡೆಸಲು ಮುಂದಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಹೆಚ್.ಬಿ ರವರು ತಿಳಿಸಿರುತ್ತಾರೆ.  

    ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀನದ ಹಂಗು ತೊರೆದು ಸೇವೆ ಮಾಡಿದ್ದೇವೆ. ಆದರೂ ನಮ್ಮ ಸೇವೆಯನ್ನು ಸಂಬಂಧಿಸಿದ ಇಲಾಖೆಗಳು ಪರಿಗಣಿಸುತ್ತಿಲ್ಲ. ಹಾಗೆ ನೋಡಿದರೆ ನಮ್ಮ ಸೇವೆ ಎರಡೂ ಇಲಾಖೆಗಳಿಗೆ ಅಗತ್ಯತೆ ಮತ್ತು ಅಪಾರವಾಗಿದೆ. ಮತ್ತು ಹವಾರು ವರ್ಷಗಳಿಂದ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿ ಯಾವುದೇ ಉದ್ಯೋಗ ಭದ್ರತೆ, ವಿಮೆ, ಖಾಂಯಾತಿ ಇಲ್ಲದೆ ನಾವುಗಳು ಹಗಲಿರುಳು ದುಡಿಯುತ್ತಿದ್ದೇವೆ. ನಮ್ಮ ಸೇವಾ ಮತ್ತು ಉದ್ಯೋಗ ಭದ್ರತೆ ಸೇರಿದಂತೆ ಸುಮಾರು 14 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿ ಸಕರ್ಾರದ ಅವಧಿಯಲ್ಲಿ ಕೇಳುತ್ತಾ ಬಂದರೂ ಸಕರ್ಾರಗಳು ಮತ್ತು ಸಂಬಂಧಿಸಿದ ಇಲಾಖೆಗಳು ಜಾಣ ಕಿವುಡು ಮತ್ತು ಜಾಣ ಮರೆವನ್ನು ತೋರುತ್ತಿವೆ. 

      ಬೇಡಿಕೆಗಳನ್ನು ಈಡೇರಿಸುವಂತೆ ಇದೇ ತಿಂಗಳ ಜೂ.04 ರಿಂದ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಜ್ಯದ ಎಲ್ಲಾ ರೀತಿಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಸಕರ್ಾರದ ಗಮನವನ್ನು ಸೆಳೆಯಲು ರಾಜ್ಯವ್ಯಾಪಿ ಮುಷ್ಕರವನ್ನು ನಡೆಸಲಾಗುವುದು. ಅದೇ ರೀತಿಯಲ್ಲಿ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗು ಹೊರಗುತ್ತಿಗೆ ನೌಕರರಿಂದ ಅದೇ ದಿನದಂದು ಮುಷ್ಕರವನ್ನು ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಹೆಚ್.ಬಿ, ಜಿಲ್ಲಾ ಉಪಾಧ್ಯಕ್ಷರಾದ ಮೇಘರಾಜ್, ಪ್ರಧಾನ ಕಾರ್ಯದಶರ್ಿ ಗಳಾದ ಮಹೇಂದ್ರಕುಮಾರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಣ್ಣ ಕೇಶವ, ದುರ್ಗಪ್ಪ ಮಾಚನೂರ್, ಸುರೇಶ್ ಟಿ, ಮದನ್ಕುಮಾರ್, ಮುದಿಮಲ್ಲಯ್ಯ, ಮನೋಹರ್, ಕಿರಣ್ಕುಮಾರ್, ಉದಯ್ಕುಮಾರ್ ತಿಳಿಸಿದರು.