ಮುಂಬೈ,
ಡಿ 28, ಸಾಲ ವಸೂಲಾತಿಯನ್ನು ತ್ವರಿತಗೊಳಿಸಿ ಅನುತ್ಪಾದಕ ಆಸ್ತಿಗೆ ತಡೆ ಹಾಕುವ ಮತ್ತು ಆರ್ಥಿಕ ಸಮಸ್ಯೆಗಳಿಗೆ
ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲ ಪಡೆದಿರುವವರ ವಿವರಗಳನ್ನು
ದೊಡ್ಡ ಸಾಲಗಳ ಮಾಹಿತಿಯ ಕೇಂದ್ರೀಯ ಭಂಡಾರ-ಸಿಆರ್‌ಐಎಲ್‌ಸಿಗೆ ಸಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್
ಸೂಚಿಸಿದೆ.ಆರ್.ಬಿ.ಐ ದೊಡ್ಡ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು, ಭಾರತೀಯ ಹಣಕಾಸು ಸಂಸ್ಥೆಗಳು
ಮತ್ತು ಕೆಲವು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗಾಗಿ ಆರ್‌ಬಿಐ ಸಿಆರ್‌ಐಎಲ್‌ಸಿ ಸೃಷ್ಟಿಸಿದೆ.
ಆ ಮೂಲಕ ಆರ್ಥಿಕ ಸಂಕಷ್ಟಗಳನ್ನು ಮುಂಚಿತವಾಗಿಯೇ ಗುರುತಿಸಿ ಅವುಗಳ ಮೇಲೆ ನಿಗಾವಹಿಸಿ, ಅಂತಹ ಸಾಲಗಳ
ವಸೂಲಿ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುವುದು ಇದರ ಉದ್ದೇಶವಾಗಿದೆ.ಆರ್,ಬಿ.ಐ ಇತ್ತೀಚೆಗೆ ತನ್ನ
ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್‌ಬಿಐ, ೫೦೦ ಕೋಟಿ ರೂಪಾಯಿ ಮತ್ತು ಅದಕ್ಕೂಅಧಿಕ ಅಸ್ತಿ
ಹೊಂದಿರುವ ಬ್ಯಾಂಕುಗಳನ್ನು ಸಿಆರ್‌ಐಎಲ್‌ಸಿ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಕಟಿಸಿತ್ತು.