ಬ್ಯಾಂಕ್ಕಾಂಕ್ನಲ್ಲಿ ಸ್ಟ್ರೆಂಥ್ ಲಿಪ್ಟಿಂಗ್: ಅಂತಾರಾಷ್ಟ್ರಮಟ್ಟದ ಸ್ಪರ್ಧೆ ಸಚಿನ್ ಹೆಮ್ಮಾಡಿ.

ರಾಣೇಬೆನ್ನೂರು03:ಸರ್ಕಾರಗಳು ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಮುಂದೆ ಬಂದಾಗ ಮಾತ್ರ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಂಡ ಕ್ರೀಡಾಪಟುಗಳು ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಈ ನಾಡಿನ ಕ್ರೀಡಾ ಪರಂಪರೆಯನ್ನು ಉನ್ನತಮಟ್ಟಕ್ಕೆ ಹೆಚ್ಚಿಸಲು ಸಾಧ್ಯವಾಗುವುದು ಎಂದು ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದ ಸ್ಟ್ರೆಂಥ್ ಲಿಫ್ಟ್ರ್ ಸಚಿನ ಹೆಮ್ಮಾಡಿ ಹೇಳಿದರು. 

ಅವರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.  ಕಠಿಣ ಪರಿಶ್ರಮ, ತಾಳ್ಮೆ, ಸಮಯ ಮತ್ತು ಶಿಸ್ತನ್ನು ಅಳವಡಿಸಿಕೊಂಡು ತಾವು ನಾಡಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಏಕೈಕ ಗುರಿಹೊಂದಿ ಈ ಕ್ಷೇತ್ರದಲ್ಲಿ ನೆಲೆ ನಿಂತಿದ್ದೇನೆ.  ಸ್ಟ್ರೆಂಥ್ ಲಿಫ್ಟಿಂಗ್ನಲ್ಲಿ ರಾಜ್ಯಮಟ್ಟದಲ್ಲಿ 75ಕೆಜಿ ವಿಭಾಗದಲ್ಲಿ ಪ್ರಥಮ ಮತ್ತು 120ಕೆಜಿ ವಿಭಾಗದಲ್ಲಿ 4ನೇಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದೇನೆ ಎಂದರು. 

ಆರ್ಥಿಕ  ಸಮಸ್ಯೆ ಎಲ್ಲ ಸಮಸ್ಯೆಗಿಂತಲೂ ಬಹುದೊಡ್ಡದು.  ಕ್ರೀಡಾ ಇಲಾಖೆ ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ಧನ ನೀಡುತ್ತದೆ.  ಇದೇ ಫೆಬ್ರುವರಿ 14ರಂದು ಥೈಲ್ಯಾಂಡ್ ದೇಶದ ಬ್ಯಾಂಕ್ಕಾಂಕ್ನಲ್ಲಿ ಸ್ಟ್ರೆಥ್ ಲಿಪ್ಟಿಂಗ್ ಸ್ಪರ್ಧೆ  ನಡೆಯಲಿದೆ.  ಭಾರತ ದೇಶದ ಪ್ರತಿನಿಧಿಯಾಗಿ ತಾವು ಭಾಗವಹಿಸಲಿದ್ದೇವೆ.  ಇದಕ್ಕೆ ಸಂಘ-ಸಂಸ್ಥೆಗಳು ಸ್ಥಳೀಯ ನಗರಸಭೆ ಮತ್ತು ಗಣ್ಯರು ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಸಚಿನ್ ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರರ ಶಶಿ ಚವ್ಹಾಣ, ಗಣೇಶ ಶ್ಯಾವಿ, ಮಂಜುನಾಥ ಹಿರೇಮಠ, ರಾಜು ಬಣಕಾರ, ಮಲ್ಲಿಕಾರ್ಜುನ  ರೊಡ್ಡನವರ, ಎಸ್.ವಿ.ಶ್ರೇಯಸ್ ಮೊದಲಾದವರು ಇದ್ದರು.