ಯೋಜನೆಗಳ ಜಾಗೃತಿಗೆ ಬೀದಿನಾಟಕ ಕಾರ್ಯಕ್ರಮ

ಹಾವೇರಿ೧೦: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಗ್ರಾಮ ಸಂಪರ್ಕ ಕಾರ್ಯದಡಿ  ಶಿಗ್ಗಾಂವ ತಾಲೂಕಿನ  ಮಮದಾಪೂರ ಗ್ರಾಮದಲ್ಲಿ ಶುಕ್ರವಾರ ಬೆಳೆಗ್ಗೆ ಜನಪದ ಹಾಡು ಬೀದಿನಾಟಕ ಪ್ರದರ್ಶನ ಮಾಡುವುದರ ಮೂಲಕ ಸರ್ಕಾರದ  ಯೋಜನೆಗಳನ್ನು  ಅರಿವು ಮೂಡಿಸಲಾಯಿತು. 

    ಗ್ರಾಮ ಪಂಚಾಯತಿಯ ಸದಸ್ಯರಾದ ಚಂದ್ರಪ್ಪ ನಾಯ್ಕ, ಈರವ್ವ ಚವ್ಹಾಣ, ಊರಿನ ಹಿರಿಯರಾದ ನೇಮಣ್ಣಾ ನಾಯ್ಕ, ಕಂಠೆಪ್ಪ ಲಮಾಣಿ, ಹನುಮಂತಪ್ಪ ಕಾರಬಾರಿ, ತಿಪ್ಪಣ್ಣ, ಕ್ರಿಷ್ಣಪ್ಪ ಮತ್ತಿತರರು   ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

      ಶ್ರೀಮಲ್ಲಿಕಾಜರ್ುನ ಕಲಾ ತಂಡದ ಗುರುನಾಥ ಹುಬ್ಬಳ್ಳಿ ಹಾಗೂ ತಂಡದವರು ಬೀದಿನಾಟಕ ಪ್ರದಶರ್ಿಸಿದರು, ವಿರೇಶ ಸಂಕಿನಮಠ ಜನಪದ ಕಲಾತಂಡ ಜಾಗೃತಗೀತೆ, ರೈತಗೀತೆ ಹಾಡಿದರು. ಶಾಲಾ ಮಕ್ಕಳು ಗ್ರಾಮಸ್ಥರು ಭಾಗವಹಿಸಿದ್ದರು.