ಹಾವೇರಿ14: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯದಡಿ ಶಿಗ್ಗಾಂವ ತಾಲೂಕಿನ ಹುನಗುಂದ ಹಾಗೂ ಚಂದಾಪೂರ ಗ್ರಾಮಗಳಲ್ಲಿ ಮಂಗಳವಾರ ಜನಪದ ಹಾಡು ಹಾಗೂ ಬೀದಿನಾಟಕ ಪ್ರದರ್ಶನ ಮಾಡುವುದರ ಮೂಲಕ ಸರಕಾರದ ಯೋಜನೆಗಳನ್ನು ಅರಿವು ಮೂಡಿಸಲಾಯಿತು.
ರೈತರಿಗೆ ರೈತಕೇಂದ್ರದಿಂದ ದೊರೆಯುವ ಸೌಲಭ್ಯಗಳು ಮತ್ತು ಸ್ವಚ್ಛತೆ, ಶೌಚಾಲಯ ಬಳಕೆ, ಮಕ್ಕಳ ಶಿಕ್ಷಣ ವಿವಿಧ ವಿಷಯದ ಕುರಿತು ಜನಪದ ಗೀತೆ ಮತ್ತು ಬೀದಿನಾಟಕದ ಮೂಲಕ ಮಾಹಿತಿ ನೀಡಲಾಯಿತು.
ಶ್ರೀಮಲ್ಲಿಕಾರ್ಜುನ ಕಲಾ ತಂಡದ ಗುರುನಾಥ ಹುಬ್ಬಳ್ಳಿ ಹಾಗೂ ತಂಡದವರು ಬೀದಿನಾಟಕ ಪ್ರದರ್ಶಸಿದರು, ವಿರೇಶ ಸಂಕಿನಮಠ ಜನಪದ ಕಲಾತಂಡ ಕಲಾವಿದರು ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶೋರಣ್ಣ ಬಂಡಿವಡ್ಡರ. ಉಪಾಧ್ಯಕ್ಷರಾದ ಶೇಬೀನಾ ಬುಡ್ಡಣ್ಣನವರ, ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂದಿಪ್ ಎಸ್.ಡಿ., ಗ್ರಾಮಸ್ಥರಾದ ರಾಮಣ್ಣ ಮೂಲಿಮನಿ. ರವಿ ಕೊಡಗಿ, ಶಿವಪ್ಪ ಗೋವಿಂದಪ್ಪನವರ ಉಪಸ್ಥಿತರಿದ್ದರು.