ಬತ್ತಿದ ಭೀಮೆ: ಕುಡಿಯುವ ನೀರಿಗೂ ಹಾಹಾಕಾರ

ಚಡಚಣ27: ಕನರ್ಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಅಂಚಿನಲ್ಲಿರುವ ಭೀಮಾ ನದಿಗೆ ಅಡ್ಡಲಗಿ ನಿಮರ್ಿಸಿರುವ ಸುಮರು 5 ಬಾಂದಾರ್ ಕಮ್ ಬ್ಯಾರೇಜ್ ಸಂಪೂರ್ಣವಾಗಿ ಬತ್ತಿರುವದರಿಂದ ಪಟ್ಟಣವೂ ಸೇರಿದಂತೆ ನದಿ ತೀರದ ಗ್ರಾಮಗಳಾದ ಉಮರಾಣಿ, ಹೊಳೆಸಂಖ, ದಸೂರ ಸೇರಿದಂತರ ಪಟ್ಟಣದಲ್ಲಿಯೂ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ.

ಕುಡಿಯುವ ನೀರಿಗೆ ಅವಲಂಬಿತವಾದ ಭೀಮಾ ನದಿ ಕಳೆದ ಒಂದು ವಾರದಿಂದ ಬತ್ತಿರುವದರಿಂದ ಪಟ್ಟಣಕ್ಕೆ ನೀರು ಪುರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಜನರು ನಿತ್ಯ ಪರದಾಡುವಂತಾಗಿದೆ. ಜನರು ಕೊಳವೆ ಬಾವಿ,ತೆರದ ಬಾವಿಗಳಿಗೆ ಮೊರೆ ಹೋಗಿದ್ದರೂ ಸಮರ್ಪಕ ನೀರು ದೊರೆಯುತ್ತಿಲ್ಲ. ನೀರಿಗಾಗಿ ದಿನವಿಡಿ ಅಲೆದಾಡುತ್ತಿರುವ ಗ್ರಾಮಸ್ಥರು  ಖಾಸಗಿಯವರ ಬೊರ್ವೆಲ್ ಹಾಗೂ ಬಾವಿಗಳತ್ತ ಮುಖ ಮಾಡಿರುವದು ಸಾಮಾನ್ಯವಾಗಿದೆ. ಪಟ್ಟಣ ಪಂಚಾಯ್ತಿ ಅಧೀನದಲ್ಲಿರುವ ಬಾವಿಗಳೂ ಬರಿದಾಗಿರುವದರಿಂದ ನೀರು ಪುರೈಕೆ ದೊಡ್ಡ ಸಮಸ್ಯೆಯಾಗಿದೆ. ಮಳೆಗಾಲದಲ್ಲಿಯೇ ಈ ಸ್ಥಿತಿ ನಿಮರ್ಾಣವಾದರೆ ಇನ್ನು ಬೇಸಿಗೆಯ ಪರಸ್ಥಿತಿ ಏನು ಎಂಬ ಚಿಂತೆ ಗ್ರಾಮಸ್ಥರಲ್ಲಿ ಮೂಡಿದೆ. ಇನ್ನೂ ನದಿ ಬತ್ತಿರುವದರಿಂದ ನದಿ ತೀರದ ಗ್ರಾಮಳಲ್ಲೂ ಪರಸ್ಥಿತಿ ಭಿನ್ನವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.ಈ ಕುರಿತು ಮಾತನಾಡಿದ "ಉಮರಾಣಿ ಗ್ರಾಮದ ರೈತ ಜಗದೇವ ಬೈರಗೊಂಡ, ಸೊನ್ನಪಸಪ ಚಿಂಚೊಳ್ಳಿ, ನದಿ ಬತ್ತಿರುವದರಿಂದ ಬೆಳೆಗಳು ಒಣಗುತ್ತಿದ್ದು, ಕನಿಷ್ಠ ಪಕ್ಷ ಜನ ಹಾಗೂ ಜಾನುವಾರುಗಳಿಗಾದರೂ ನೀರು ಸಿಕ್ಕರೆ ಸಾಕು ಎನ್ನುವ ಸ್ಥಿತಿ ನಿಮರ್ಾಣವಾಗಿದೆ" ಎನ್ನುತ್ತಾರೆ.

ಈ ಬಗ್ಗೆ ಜಿಲ್ಲಾ ಅಡಳಿತ ಹಾಗೂ ಜನನಪ್ರತಿನಿಧಿಗಳು ಭೀಮಾ ನದಿಗೆ ಉಜನಿ ಜಲಾಶಯದಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾದರೆ,  ಪಟ್ಟಣಕ್ಕೆ ನೀರು ಪುರೈಸುವ ಅಗತ್ಯ ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯ್ತಿ  ಮುಂದಾಗಬೇಕು ಎಂಬುದು ಚಡಚಣ ಗ್ರಾಮಸ್ಥರ ಆಗ್ರಹವಾಗಿದೆ.