ವಿಜಯಪುರ 10: ಸ್ಮಾರ್ಟಫೋನ್‌ಗಳ ಬಳಕೆಯಿಂದ ಇಡೀ ಜಗತ್ತು ಇಂದು ಬೆರಳ ತುದಿಯ ಮೇಲೆ ನಿಂತಿದೆ. ಇದು ವಿವಿಧ ಮಾಧ್ಯಮಗಳ ಮೂಲಕ ಡಿಜಿಟಲ್ ಜಾಹೀರಾತು, ಸಾಮಾಜಿಕ ಮಾಧ್ಯಮಗಳು, ವೈಯಕ್ತಿಕ ಮಾರ್ಕೆಟಿಂಗ್, ಸೃಜನಾತ್ಮಕ ತಂತ್ರಗಳು, ಶ್ರವಣ ಮತ್ತು ದೃಶ್ಯ ಜಾಹೀರಾತು ಮಾಧ್ಯಮಗಳನ್ನು ಬಳಸಿಕೊಂಡು ಗ್ರಾಹಕರಿಗೆ 24*7 ನಿರಂತರ ಸೇವೆಗಳನ್ನು ನೀಡುತ್ತಿದೆ. ನವೀನ ತಂತ್ರಜ್ಞಾನ, ಸಂಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಇಂಟರನೆಟ್ ಆಫ್ ಥಿಂಗ್ಸ್ ಮತ್ತು ದೊಡ್ಡ ಡೇಟಾ ವಿಶ್ಲೇಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನದಿಂದ ಇಡೀ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಡಿಜಿಟಲೀಕರಣದ ಪ್ರಭಾವದಿಂದಾಗಿ 2040 ರ ವೇಳೆಗೆ ಭಾರತದಲ್ಲಿ ಇ-ಕಾಮರ್ಸ ಸಂಸ್ಥೆಗಳ ಒಟ್ಟಾರೆ ವ್ಯವಹಾರದ ಪ್ರಮಾಣವು ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ 95ಅ ರಷ್ಟು ಆನಲೈನ್‌ನಲ್ಲಿ ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಕೊಂಡುಕೊಳ್ಳಲಿದ್ದಾರೆ. ಜಾಗತಿಕವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಅಮೂಲಾಗ್ರವಾದ ಸುಧಾರಣೆಗಳನ್ನು ತಂದು ತನ್ಮೂಲಕ ನೇರವಾಗಿ ಗ್ರಾಹಕರಿಗೆ ಅಗ್ಗದ ದರದಲ್ಲಿ ಉತ್ಕೃಷ್ಟದ ಗುಣಮಟ್ಟ ವಸ್ತು, ಉತ್ತಮ ವಿತರಣಾ ವ್ಯವಸ್ಥೆ ಮತ್ತು ಗ್ರಾಹಕ ಸಂತೃಪ್ತಿಯೊಂದಿಗೆ ಮಾರಾಟ ಮಾಡಲು ಇ-ಕಾಮರ್ಸ ಪ್ರಯೋಜನಕಾರಿಯಾಗಿದೆ ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಝಳಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳ ಸಹಯೋಗದಡಿಯಲ್ಲಿ “ಎಮರ್ಜಿಂಗ್ ಟ್ರೆಂಡ್ಸ್ ಇನ್ ಇ-ಕಾಮರ್ಸ” ವಿಷಯ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಇಂದು ಇ-ಕಾಮರ್ಸ ವಿಶ್ವದ್ಯಾದಂತ ನೇರ ಮತ್ತು ಪ್ರಥಮ ದರ್ಜೆಯ ವಿತರಣಾ ಚಾನೆಲ್ ಆಗಿ ಮಾರ್ಪಟಟಿದೆ. ದೇಶದಲ್ಲಿ ಹೆಚ್ಚುತ್ತಿರುವ ತಂತ್ರಜ್ಞಾನ, ಡಿಜಿಟಲೀಕರಣ, ಇಂಟರ್‌ನೆಟ್ ಮತ್ತು ಸ್ಮಾರ್ಟಪೋನಗಳಿಂದ ಜನರು ಇ-ಕಾಮರ್ಸ, ಆನಲೈನ್ ಮತ್ತು ನೆಟವರ್ಕ ಮಾರ್ಕೆಟಿಂಗ್ ಪ್ಲಾಟ್‌ಫಾರಂಗಳ ಮೂಲಕ ಸರಕು ಮತ್ತು ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಒಟ್ಟು ಖರೀದಿ ಮತ್ತು ಮಾರಾಟ ವ್ಯವಹಾರಗಳ ಪ್ರಮಾಣದಲ್ಲಿ ಶೇ25ಅ ರಷ್ಟು ಸಂಘಟಿತ ಚಿಲ್ಲರೆ ಮಾರುಕಟ್ಟೆಯಲ್ಲಿ ಇ-ಕಾಮರ್ಸ ಮೂಲಕ ವ್ಯವಹರಿಸಲ್ಪಡುತ್ತಿವೆ. 2030 ರ ವೇಳೆಗೆ ಇದರ ವ್ಯವಹಾರಗಳಲ್ಲಿ ಶೇ.37ಅ ರಷ್ಟು ಬೆಳವಣಿಗೆಯಾಗಲಿದೆ ಹಾಗೂ 2040 ರ ವೇಳೆಗೆ ಅಮೇರಿಕಾ ದೇಶವನ್ನು ಹಿಂದಿಕ್ಕಿ ಜಗತ್ತಿನಲ್ಲಿಯೇ ಎರಡನೇಯ ದೊಡ್ಡ ರಾಷ್ಟ್ರವಾಗಲಿದೆ ಎಂಬ ಅಂಶ ಕಂಡುಬಂದಿದೆ.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ವಿವೇಕಾನಂದ ಉಘಡೆ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪರಿಪೂರ್ಣ ಪೈಪೋಟಿ ಮಾರುಕಟ್ಟೆಯಲ್ಲಿ ಇ-ಕಾಮರ್ಸ ಕ್ಷೇತ್ರವು ಬಹುಬಗೆಯ ಬ್ರ್ಯಾಂಡೆಂಡ್ ವಸ್ತಗಳನ್ನು ಗ್ರಾಹಕರಿಗೆ ಅವರ ಆಸಕ್ತಿ, ಅಭಿರುಚಿ, ಆಶೋತ್ತರ ಮತ್ತು ಬೇಡಿಕೆ ಮತ್ತು ಕೊಳ್ಳುವ ಸಾಮರ್ಥ್ಯಗನುಗುಣವಾಗಿ ಸರಕುಗಳನ್ನು ಕೊಂಡುಕೊಳ್ಳಲು ಪೂರಕವಾದ ಮಾರುಕಟ್ಟೆಯನ್ನು ಒದಗಿಸುತ್ತದೆ. ಆದರೆ ತಂತ್ರಜ್ಞಾನದಲ್ಲಿರುವ ನ್ಯೂನ್ಯತೆಗಳಿಂದ ಹಣ ಪಾವತಿಯ ಸಂದರ್ಭದಲ್ಲಿ ಸೈಬರ್ ಸುರಕ್ಷತೆಯ ಯಕ್ಷ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ. ಇದರಿಂದ ಗ್ರಾಹಕರಲ್ಲಿ ಹಣ ಕಳೆದುಕೊಳ್ಳುವ ಭೀತಿಯಿಂದ ಗ್ರಾಹಕರು ವ್ಯವಹಾರಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವಿವೇಕಾನಂದ ಉಘಡೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಶಾ ಕೋಶ ಘಟಕದ ಸಂಚಾಲಕ ಡಾ. ಸಂತೋಷ ದಂಡ್ಯಾಗೋಳ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಸಚಿನ ಮಂಚಲಕರ, ಪ್ರೊ. ತಾಜ್ ಬಾಬಾ, ಶಿವಾನಂದ ಸಿಂಹಾಸನಮಠ, ಶಿವಶಂಕರ ಸಿ.ಕೆ., ಇನ್ನಿತರು ವೇದಿಕೆ ಮೇಲಿದ್ದರು. ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬಿ.ಕಾಂ ವಿಭಾಗದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.