ಚಂಡೀಗಡ, ಆಗಸ್ಟ್ 10 370 ನೇ ವಿಧಿ ರದ್ದುಗೊಳಿಸಿ, ಜಮ್ಮು - ಕಾಶ್ಮೀರದ ರಾಜ್ಯ ಸ್ಥಾನಮಾನ ಮೊಟಕುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರೀಯ ಆಡಳಿತ ಪ್ರದೇಶಗಳನ್ನಾಗಿಸಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದೆ.
ಕಾಶ್ಮೀರ ಕಣಿವೆಯಲ್ಲಿ ಈಗ ನಿರ್ಬಂಧಗಳು ಸಡಿಲಗೊಳ್ಳುತ್ತಿವೆ. ಇನ್ನೂ ಜವಾಬ್ದಾರಿಯುತ ಜನಪ್ರತಿನಿಧಿ ಸ್ಥಾನಗಳನ್ನು ಹೊಂದಿರುವ ವ್ಯಕ್ತಿಗಳು ಅತ್ಯುತ್ಸಾಹದ ಹೇಳಿಕೆ ನೀಡುವ ತೀವ್ರ ಟೀಕೆ ಗೊಳಗಾಗುತ್ತಿದ್ದಾರೆ. " ಇನ್ನೂ ಸುಂದರವಾದ ಕಾಶ್ಮೀರಿ ಕನ್ಯೆಯರನ್ನು ವಿವಾಹವಾಗಬಹುದು " ಎಂಬ ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಮ್ ಸೈನಿ ನೀಡಿದ್ದ ವಿವಾದಾತ್ಮಾಕ ಹೇಳಿಕೆ ಜನರಮನದಿಂದ ಮಾಸುವ ಮುನ್ನವೇ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ನನ್ನ ಸಂಪುಟದ ಕೆಲವು ಸಚಿವರು ಬಿಹಾರದಿಂದ ಸೊಸೆಯರನ್ನು ತಂದು ಕೊಳ್ಳಲಿದ್ದೇವೆ ಎಂದು ಹೇಳುತ್ತಿದ್ದರು. ಇನ್ನೂ ಮುಂದೆ ಅವರಿಗೆ ಅಂತಹ ಪರಿಸ್ಥಿತಿ ಉದ್ಬವಿಸುವುದಿಲ್ಲ, ಕಾರಣ ... ಇನ್ನೂ ಎಲ್ಲರ ದೃಷ್ಟಿ ಕಾಶ್ಮೀರ ಹುಡುಗಿಯರ ಮೇಲೆ ಬೀಳಲಿದೆ ಎಂದು ಹೇಳಿದ್ದಾರೆ. 370 ರದ್ಧತಿಯಿಂದ ಇದು ಸಾಧ್ಯವಾಗಲಿದೆ, ಎಲ್ಲರೂ ಕಾಶ್ಮೀರಿ ಯುವತಿಯರನ್ನು ಸೊಸೆಯನ್ನಾಗಿ ಪತ್ನಿಯನ್ನಾಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ "ಬೇಟಿ ಬಚಾವೊ ಬೇಟಿ" ಬಚಾವೊ ಕಾರ್ಯಕ್ರಮ ಯಶಸ್ವಿಯಾಗಿದೆ. ಬೇಟಿ ಬಚಾವೊ ಬೇಟಿ ಪಡಾವೊ ಕಾರ್ಯಕ್ರಮದ ಮೂಲಕ ಹರಿಯಾಣದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವಣ ಲಿಂಗಾನುಪಾತ ಪ್ರಮಾಣ ತಗ್ಗಿದೆ. ಈ ಕಾರ್ಯಕ್ರಮ ಅನುಷ್ಟಾನಕ್ಕೆ ಮುನ್ನ ರಾಜ್ಯದಲ್ಲಿ ಲಿಂಗಾನುಪಾತ ಪ್ರಮಾಣ ಕೆಟ್ಟ ಸ್ಥಿತಿಯಲ್ಲಿತ್ತು. 1000 ಮಕ್ಕಳಿಗೆ ಕೇವಲ 850 ರಿಂದ 933 ಹೆಣ್ಣುಮಕ್ಕಳು ಇದ್ದರು ಎಂಬುದನ್ನು ಸ್ಮರಿಸಿದ್ದಾರೆ.