ಕಾರವಾರ 12: ಕೊಂಕಣ ರೇಲ್ವೆ ನಿಲ್ದಾಣದಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಅನುಕೂಲವಾಗಲೆಂದು ಕಾರವಾರ ರೋಟರಿ ಕ್ಲಬ್ ಸದಸ್ಯರು ತಮ್ಮ ಸ್ವಂತ ದೇಣಿಗೆ ಮುಖಾಂತರ ಒಂದು ಸ್ಟೀಲ್ ವ್ಹೀಲ್ ಚೇರ್‌ನ್ನು ಹಸ್ತಾಂತರಿಸಿದರು.
ವ್ಹೀಲ್ ಚೇರ್ ಸ್ವೀಕರಿಸಿದ ಕೊಂಕಣ ರೇಲ್ವೆ ಪ್ರಾದೇಶಿಕ ವಿತ್ತೀಯ ಅಧಿಕಾರಿ ಚಿತ್ತರಂಜನ್ ಜೈಸವಾಲ ಕಾರವಾರ ರೋಟರಿ ಕ್ಲಬ್ ಸದಸ್ಯರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು
ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಎಮ್. ಪಿ. ಕಾಮತ ಮಾತನಾಡಿ ರೋಟರಿ ಸಂಸ್ಥೆಯ ಸದಸ್ಯರು ಹಲವಾರು ಸಮುದಾಯ ಸೇವೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ರೇಲ್ವೆ ನಿಲ್ದಾಣಕ್ಕೆ ನೀಡಿದ ವ್ಹೀಲ್ ಚೇರ್ ಕೊಡುಗೆ ಒಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೋಂಕಣ ರೇಲ್ವೆ ಇಲಾಖೆಯ ಅಧಿಕಾರಿಗಳಾದ ವಿತ್ತೀಯ ಅಧಿಕಾರಿ, ಉಪೇಂದ್ರ, ಹಿರಿಯ ಸ್ಟೇಷನ್ ಮಾಸ್ಟರ್, ಉದಯ ಸಾರಂಗ, ಕಂಪ್ಯೂಟರ್ ಸಿಸ್ಟೆಮ್ ಎನಾಲಿಸ್ಟ ಗೀರೀಶ ಜುಮ್ನಲ್ಕರ್, ಹಿರಿಯ ವಿಭಾಗೀಯ ಅಭಿಯಂತ ಕುಮಾರಸ್ವಾಮಿ, ರೆಲ್ವೇ ಅಧಿಕಾರಿ ಅನಿಲ ತಳೇಕರ ಹಾಗು ಇತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕೋಷಾಧ್ಯಕ್ಷ ಗುರು ಹೆಗ್ಡೆ, ನಾಗರಾಜ ಜೋಷಿ, ಪ್ರಸನ್ನಾ ತೆಂಡೂಲ್ಕರ್, ಅಮರನಾಥ ಶೆಟ್ಟಿ, ಮೋಹನ ನಾಯ್ಕ, ಪಾಂಡುರಂಗ್ ಎಸ್ ನಾಯ್ಕ, ಮುರಲಿ ಗೋವೇಕರ್, ವಿನೋದ್ ಕೊಠಾರ‌್ಕರ್, ಉಪಸ್ಥಿತರಿದ್ದರು.