ಸಿಎಎ ಜಾರಿ ಬಿಟ್ಟು ರಾಜ್ಯಗಳಿಗೆ ಬೇರೆ ಮಾರ್ಗವಿಲ್ಲ : ಸಿಬಲ್

ಕೋಜಿಕೋಡ್, ಜ19:      ಸಂಸತ್ತಿನಲ್ಲಿ ಅಂಗೀಕರಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು  ಅನುಷ್ಠಾನಗೊಳಿಸದೆ ರಾಜ್ಯಗಳಿಗೆ  ಬೇರೆ ದಾರಿ, ಮಾರ್ಗ ಇಲ್ಲ  ಎಂದು ಕಾಂಗ್ರೆಸ್ ನಾಯಕ, ಮಾಜಿ ಕಾನೂನು ಸಚಿವ  ಕಪಿಲ್ ಸಿಬಲ್ ಸ್ಪಷ್ಟಪಡಿಸಿದ್ದಾರೆ.

ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು  ಇದನ್ನು  ನಿರಾಕರಿಸುವುದು ಅಸಂವಿಧಾನಿಕ ಕ್ರಮವಾಗಲಿದೆ ಎಂದರು.  

ನೀವು ಸಿಎಎನ್ನು ವಿರೋಧಿಸಬಹುದು, ನೀವು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲೂಬಹುದು  ಅದನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೇಳಬಹುದು. ಆದರೆ ಅಂಗೀಕರಿಸಲಾದ ಸಿಎಎನ್ನು ಯಾವುದೇ ರಾಜ್ಯ  ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಲಾಗದು ಹಾಗೆ ಮಾಡುವುದು ಅಸಂವಿಧಾನಿಕ ಕ್ರಮವಾಗಲಿದೆ ಎಂದರು .

ಈಗಾಗಲೆ ಕೇರಳ ಸರ್ಕಾರ ಸಿಎಎ ವಿರುದ್ಧ ಸುಪ್ರೀಂ ಕೋಟ್ರ್ನ ಮೊರೆ ಹೋಗಿದ್ದು, ಇದನ್ನು "ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ತತ್ವಗಳ ಸ್ಪಷ್ಟ ಉಲ್ಲಂಘನೆ ಎಂದು ಬಲವಾಗಿ ಅಪಾದಿಸಿದೆ .

ಬಂಗಾಳ  ಸರ್ಕಾರ ಇದನ್ನು ಜಾರಿ ಮಾಡುವುದಿಲ್ಲ ಎನ್ನುತ್ತಿದೆ ಪಂಜಾಬ್ ಸಹ ಿದೆ ಹಾದಿಯಲ್ಲಿ ಇ ಹೋಗುವುದಾಗಿ  ಹೇಳುತ್ತಿದೆ. ಮೇಲಾಗಿ ದೇಶದ  ಉದ್ದಲಕ್ಕು  ಕಾಂಗ್ರೆಸ್ ಸಿಎಎ ವಿರೋಧಿಸಿ ಪ್ರತಿಭಟನೆ  ಮಾಡುತ್ತಿದೆ.ಇಂತಹ ಸಮಯದಲ್ಲೆ ಕಾಂಗ್ರೆಸ್ ನಾಯಕರ   ಹೇಳಿಕೆ ರಾಜಕೀಯವಾಗಿ ಬಹಳ  ಮಹತ್ವ ಪಡೆದುಕೊಂಡಿದೆ.

ಈ ಕಾಯ್ದೆಯನ್ನು ಪ್ರಶ್ನಿಸಿ, ಮತ್ತು ವಿಧಾನಸಭೆಯಲ್ಲಿ ಕಾನೂನಿನ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲನೆಯ ರಾಜ್ಯ ಕೇರಳವಾಗಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯ ಸಕರ್ಾರಗಳು ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆಸರ್ಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಬಗ್ಗೆ ತಮ್ಮದೆ ಆದ ವಿಬಿನ್ನ ಅಭಿಪ್ರಾಯ ವ್ಯಕ್ತಪಡಿಸಿ, ಜಾರಿ  ಮಾಡುವುದಿಲ್ಲ ಎಂಬ ನಿಲವು ಹೊಂದಿವೆ.