ನೂತನ ಪದಾಧಿಕಾರಿಗಳ ಪದಗೃಹಣ


ಲೋಕದರ್ಶನ ವರದಿ

ವಿಜಯಪುರ 30:  ನಗರದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳ ಪದಗೃಹಣ ಕಾರ್ಯಕ್ರಮ ಜರುಗಿತು.

ಅಧ್ಯಕ್ಷರಾಗಿ ವಿ.ಎಸ್. ಕೋಟೆನ್ನವರ (ವಕೀಲರು) ಉಪಾಧ್ಯಕ್ಷರಾಗಿ ಭರತೇಶ ಕಲಗೊಂಡ ಕಾರ್ಯದಶರ್ಿಯಾಗಿ ಶಿವನಗೌಡ ಪಾಟೀಲ ಖಜಾಂಚಿಯಾಗಿ ಎಸ್.ಎನ್. ಬಿರಾದಾರ  ಪದಗೃಹಣ ಮಾಡಿದರು. ಇವರೊಂದಿಗೆ  10 ಜನ ಕಾರ್ಯಕಾರಿ ಸಮಿತಿ ಸದಸ್ಯರು ಕೂಡ ಪದಗೃಹಣ ಮಾಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಪ.ಪೂ. ಶಂಭುಲಿಂಗ ಮಹಾಸ್ವಾಮಿಗಳು ಶಿವಬಸವಮಠ ವಿಜಯಪುರ ಅವರು ಸಮಾದಜಲ್ಲಿ ಎಲ್ಲರೂ ಪರಸ್ಪರ ಪೂರಕರಾಗಿರಬೇಕು. 'ನೀ ನನಗಾದರೆ ನಾ ನಿನಗೆ ಎಂಬ  ತತ್ವದಡಿ ಎಲ್ಲರೂ ಬದುಕಬೆಕು. ಎಲ್ಲರ ಆತ್ಮದಲ್ಲೂ ದೇವರಿದ್ದಾರೆ. ಅದಕ್ಕಾಗಿ ಎಲ್ಲ ಜೀವಿಗಳನ್ನು ಗೌರವಿಸಬೇಕೆಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಸವರಾಜ ಜಿರಾಳೆ (ವಕೀಲರು) ಅಧ್ಯಕ್ಷರು ರೋಟರಿ ಕ್ಲಬ್ ವಿಜಯಪುರ ಅವರು, ಎಲ್ಲರೂ ಸಮಾಜಮುಖಿಯಾಗಿರಬೇಕು. ಇಂಥ ಸಂಘ ಸಂಸ್ಥೆಗಳಲ್ಲಿ ಒಂದಾಗಿ ಬೆರೆತು. ಸತ್ಸಂಗದಲ್ಲಿ ಸದಾ ತೊಡಗಿರಬೇಕೆಂದು ಹೇಳಿದರು.

ವಿ.ಎಸ್. ಕೊಟೆನ್ನವರ (ವಕೀಲರು) ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಹಿರಿಯ ಸದಸ್ಯರೆಲ್ಲರ ಆಶೀವರ್ಾದ ಸಹಕಾರ ಇದ್ದರೆ ಉತ್ತಮವಾದ ಕಾರ್ಯಗಳನ್ನು ಮಾಡಬಹುದು ಎಂದು ಹೇಳಿದರು.

ಜಿ.ಏ. ರೂಗಿ ಮತ್ತು ಬಿ.ಎಸ್. ಉಪ್ಪಿನ ಪ್ರಾಥರ್ಿಸಿದರು. ಶಿವನಗೌಡ ಪಾಟೀಲ ಸ್ವಾಗತಿಸಿದರು. ಭರತೇಶ ಕಲಗೊಂಡ  ವಂದಿಸಿದರು. ಡಾ. ಎಸ್.ಎಸ್. ಅನಂತಪುರ ನಿರೂಪಿಸಿದರು. ಸಭೆಯಲ್ಲಿ ಪ್ರೊ. ಕೆ.ಎಸ್. ಪಾಟೀಲ, ಪ್ರೊ. ಎಸ್.ಜಿ. ಇಜೇರಿ,ಪ್ರೊ. ವಿ.ವಿ.ಬೆಂಡಿಗೇರಿ, ಬಸಪ್ಪ ಇಜೇರಿ, ಎಸ್.ಡಿ. ನಂದಿಕೋಲ ಎ.ಬಿ. ಕಂಠಿ, ಬಿ.ಎಸ್. ಅಂಗಡಿ, ಆರ್.ಎ. ಗುಡಿ, ಎಲ್.ಎಂ. ಕವಟಗಿ, ಎಂಎಂ. ಸಜ್ಜನ, ಆಯ್.ಎಂ. ಶೆಟಗಾರ, ರವಿ ಉಪ್ಪಿನ, ಡಿ.ಬಿ. ಅಂಕಲಗಿ, ಆರ್.ಎಚ್. ಕುಲಕಣರ್ಿ, ಕೆ.ಬಿ. ಶೆಟಗಾರ  ಎಸ್.ಎಸ್. ಬಣಜಿಗೇರ ಎಸ್.ಎಚ್. ಕಣಬೂರ  ಮುಂತಾದವರು ಹಾಜರಿದ್ದರು.