ಮಹಾತ್ಮ ಗಾಂಧಿ ವಿರುದ್ದ ಹೇಳಿಕೆ; ಅನಂತಕುಮಾರ ಹೆಗಡೆ ಕ್ಷಮೆಯಾಚನೆಗೆ ಬಿಜೆಪಿ ಆದೇಶ

ನವದೆಹಲಿ, ಫೆ೩ :      ರಾಷ್ಟ್ರಪಿತ ಮಹಾತ್ಮ ಗಾಂಧಿ ವಿರುದ್ಧ ಅನುಚಿತ ಹೇಳಿಕೆ ನೀಡಿರುವ  ಪಕ್ಷದ ಸಂಸದ,  ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ  ಅವರು   ಬೇಷರತ್   ಕ್ಷಮೆಯಾಚಿಸುವಂತೆ  ಭಾರತೀಯ ಜನತಾ ಪಕ್ಷದ (ಬಿಜೆಪಿ)  ವರಿಷ್ಠ   ನಾಯಕತ್ವ ಆದೇಶಿಸಿದೆ   ಎಂದು  ಉನ್ನತ ಮೂಲಗಳು ಹೇಳಿವೆ

ಬೆಂಗಳೂರಿನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ  ಪಕ್ಷದ ಹಿರಿಯ ಮುಖಂಡ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.   ಗಾಂಧಿಜೀ  ಅವರ  ನೇತೃತ್ವದಲ್ಲಿ  ನಡೆದ  ನಡೆದ ಸ್ವಾತಂತ್ರ್ಯ ಹೋರಾಟವನ್ನು  ಅವರು   ನಾಟಕ ಎಂದು ಬಣ್ಣಿಸಿದ್ದರು.

ಇತಿಹಾಸವನ್ನು ಓದುತ್ತಿದ್ದರೆ   ತಮ್ಮ   ರಕ್ತ ಕುದಿಯುತ್ತದೆ.  ಗಾಂಧಿ ಅವರನ್ನು ಮಹಾತ್ಮ ಎಂದು ಕರೆಯುವುದು ನಮ್ಮ  ದೌರ್ಭಾಗ್ಯವೆಂದು   ಹೆಗ್ಡೆ  ವಿಶ್ಲೇಷಿಸಿದ್ದರು.  ದೇಶದ ಸ್ವಾತಂತ್ರ್ಯ ಚಳುವಳಿ ಬ್ರಿಟಿಷರ ಸೂಚನೆಯಂತೆ  ನಡೆಯಿತು ಎಂಬ ಅವರ ಅಭಿಪ್ರಾಯ ವ್ಯಕ್ತಪಡಿಸಿದರು.  ಆದರೆ, ಹೆಗ್ಡೆ ಅವರ  ಹೇಳಿಕೆಗಳನ್ನು   ಬಿಜೆಪಿ ನಾಯಕತ್ವ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಅವರ ಅಭಿಪ್ರಾಯಗಳನ್ನು  ಒಪ್ಪಲು  ಸಾಧ್ಯವಿಲ್ಲ  ಎಂದು ಸ್ಪಷ್ಟಪಡಿಸಿದೆ.