ರಾಣೇಬೆನ್ನೂರು 17: ತಾಲೂಕು ಮೆಡ್ಲೇರಿ ಗ್ರಾಮದ ಮಾದರಿ ಕೇಂದ್ರ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಪದ್ಮಾವತಿ ಆರ್ ಪಾಟೀಲ ಇವರು ಕರ್ನಾಟಕ ರಾಜ್ಯಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಪಂಜಾಬ್ ನ ಚಂಡಿಗಡ್ ನಲ್ಲಿ ಇದೇ ಫೆಬ್ರವರಿ 19 ರಿಂದ 21 ರವರೆಗೆ ನಡೆಯುತ್ತಿರುವ ರಾಷ್ಟ್ರಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸಾಧಕ ಶಿಕ್ಷಕಿಯರಿಗೆ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಜೇಶ್ವರಿ ಪಾಟೀಲ, ತಾಲೂಕ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ಗಾಯತ್ರಮ್ಮ ಕುರುವತ್ತಿ ಹಾಗೂ ಪದಾಧಿಕಾರಿಗಳು, ಶಾಲೆಯ ಪ್ರಧಾನ ಗುರುಮಾತೆಯರು, ಶಿಕ್ಷಕ ವೃಂದದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.