ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: ಬಾಗಲಕೋಟ ತಂಡಕ್ಕೆ ಪ್ರಥಮ ಬಹುಮಾನ

State level kabaddi tournament: Bagalkot team wins first prize

ತಾಳಿಕೋಟೆ 07: ತಾಲ್ಲೂಕಿನ ಮೂಕಿಹಾಳ ಗ್ರಾಮದಲ್ಲಿನ ಹಜರತ್ ಅಲ್ಲಾವುದ್ದಿನ್ ಅನ್ಸಾರಿ ಉರ್ಫ ಲಾಡ್ಲೇ ಮಶ್ಯಾಕ್ ದರ್ಗಾ ಜಾತ್ರಾ ಮಹೋತ್ಸವ ಕಾರ್ಯಕ್ರಮದಂಗವಾಗಿ ಭಾನುವಾರ ನಡೆದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗಲಕೋಟೆಯ ಬಸವೇಶ್ವರ ಸ್ಪೋರ್ಟ್ಸ ಕ್ಲಬ್ ಜಾನಮಟ್ಟಿ ತಂಡವು 50100 ರೂಪಾಯಿ ಪ್ರಥಮ ಬಹುಮಾನ ಗಳಿಸಿದರೆ ಮುದ್ದೇಬಿಹಾಳ ತಾಲ್ಲೂಕಿನ ಸಂಗಮೇಶ್ವರ ಸ್ಪೋರ್ಟ್ಸ ಕ್ಲಬ್ ಬಿದರಕುಂದಿ ತಂಡವು 30100 ರೂಪಾಯಿ ದ್ವಿತೀಯ ಬಹುಮಾನಕ್ಕೆ ಮುತ್ತಿಕ್ಕಿತು.  

ವಿಜಯಪುರದ ಪಟೇಲ್ ಬಾಯ್ಸ್‌ 20100 ತೃತೀಯ ಬಹುಮಾನ ಪಡೆದರೆ, ಧಾರವಾಡದ ಮಮ್ಮಿ ಕಟ್ಟಿ ತಂಡ 10100 ರೂಪಾಯಿ ಚತುರ್ಥ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಜಾತ್ರಾ ಕಮಿಟಿಯ ಅಧ್ಯಕ್ಷ ಕಾಸಿಮಪಟೇಲ ಪಾಟೀಲ ಪ್ರಥಮ ಬಹುಮಾನದ ಪ್ರಾಯೋಜಕತ್ವ ನೀಡಿದ ಕೊಣ್ಣೂರ ಅಸ್ಕಿ ಫೌಂಡೇಶನ್ ನ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ ಎರಡನೆಯ ನಗದು ಬಹುಮಾನದ ಪ್ರಾಯೋಜಕತ್ವ ನೀಡಿದ ಮಿಣಜಗಿಯ ಯುವ ಉದ್ಯಮಿ ವೀರೇಶಗೌಡ ಪಾಟೀಲ, ಮೂರನೆಯ ಬಹುಮಾನದ ಪ್ರಾಯೋಜಕತ್ವ ನೀಡಿದ ಪ್ರಥಮ ದರ್ಜೆ ಗುತ್ತಿಗೆದಾರ ಎಚ್‌.ಎಮ್‌. ನಾಯಕ,ನಾಲ್ಕನೆ ಬಹುಮಾನ ಪ್ರಾಯೋಜಕರಾದ ಎಂ.ಐ.ಅವಟಿ ಶಿಕ್ಷಕರ ಬಳಗ, ತಾಳಿಕೋಟೆ ಎಸ್‌.ಎಸ್‌.ವಿದ್ಯಾಸಂಸ್ಥೆ ಅಧ್ಯಕ್ಷ ಎಚ್ ಎಸ್ ಪಾಟೀಲ್‌. ಪ್ರಮುಖರಾದ ಮಹದೇವಪ್ಪ ಕುಂಬಾರ, ಹುಮಾಯೂನ್ ಬಿರಾದಾರ, ವಿಶ್ವನಾಥ ಗಣಾಚಾರಿ, ಶಿವರಾಜ್ ಗುಂಡಕನಾಳ ಮೊದಲಾದವರಿದ್ದರು. ರಾತ್ರಿ 09.30ಕ್ಕೆ ಕೊತಬಾಳ ಅರುಣೋದಯ ಜಾನಪದ ಕಲಾ ತಂಡದಿಂದ ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 

ಸೋಮವಾರದಂದು ಸಂಜೆ ಟಗರಿನ ಕಾಳಗ ಜರುಗಿತು. ರಾತ್ರಿ ಜಮಖಂಡಿ ತಾಲ್ಲೂಕು ಬಂಡಿಗನೂರನ ಬಸವೇಶ್ವರ ನಾಟ್ಯ ಸಂಘದ ವತಿಯಿಂದ ‘ದೇಸಾಯರ ದರ್ಬಾರು’ ನಾಟಕ ಪ್ರದರ್ಶನ ಮಾಡಿದರು.