ರಾಜ್ಯಮಟ್ಟದ 'ಅನುಸಂಧಾನ' ವಿಚಾರ ಸಂಕಿರಣ ಕಾರ್ಯಕ್ರಮ

ಲೋಕದಶ್ನ ವರದಿ

ವಿಜಯಪುರ 04: ಬಿ.ಎಲ್.ಡಿ.ಇ. ಎ.ವಿ.ಎಸ್. ಆಯುವರ್ೇದ ಮಹಾವಿದ್ಯಾಲಯದಲ್ಲಿ ಸಂಹಿತಾ ಮತ್ತು ಸಿದ್ಧಾಂತ ವಿಭಾಗದಿಂದ  ಪ್ರಥಮ ವರ್ಷದ ಸ್ನಾತಕೋತ್ತರ ಹಾಗೂ ಅಂತಿಮ ವರ್ಷದ ಬಿ.ಎ.ಎಂ.ಎಸ್. ವಿದ್ಯಾಥರ್ಿಗಳಿಗಾಗಿ ರಾಜ್ಯಮಟ್ಟದ 'ಅನುಸಂಧಾನ' ವಿಚಾರ ಸಂಕಿರಣ (ಸೆಮಿನಾರ್) ಇತ್ತೀಚೆಗೆ ಜರುಗಿತು. 

ಬಿ.ಎಲ್.ಡಿ.ಇ. ಎಸ್.ಎಸ್.ಎಂ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಎನ್.ವಿ.ಕಲ್ಯಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಚೀನ ಕಾಲದಿಂದಲೂ ಆಯುವರ್ೇದ ಔಷಧಿಗಳು ಬಳಕೆಯಲ್ಲಿದ್ದರೂ ಸಹ ಆಧಾರಸಹಿತವಾಗಿ ಅವುಗಳ ಪ್ರಭಾವವನ್ನು ಅಭಿವ್ಯಕ್ತಗೊಳಿಸಬೇಕಾಗುವುದು. ಪ್ರಸ್ತುತ ವಿಶ್ವದಾದ್ಯಂತ ಜನರು ಆಯುವರ್ೇದ ಹಾಗೂ ಯೋಗದ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವುದು ಸಂತೋಷದ ವಿಷಯ. ಅಮೇರಿಕದಂತಹ ರಾಷ್ಟ್ರಗಳೂ ಸಹ ಸಾಕಷ್ಟು ಆಯುವರ್ೇದ ಸಸ್ಯಗಳ ಪೇಟೆಂಟ್ ಪಡೆದ ಉದಾಹರಣೆಗಳಿವೆ. 

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸವಾಲೊಡ್ಡುತ್ತಿರುವ ಮಾರಕ ರೋಗಗಳು ಸಮಾಜಕ್ಕೆ ಕಂಟಕವಾಗಿದ್ದು, ಅವುಗಳ ನಿವಾರಣೆ ಹಾಗೂ ತಡೆಗಟ್ಟುವಿಕೆ ಆಯುವರ್ೇದ ವೈದ್ಯಶಾಸ್ತ್ರದಿಂದ ಮಾತ್ರ ಸಾಧ್ಯ, ಹಾಗಾಗಿ ಯುವ ಆಯುವರ್ೇದ ವೈದ್ಯ ವಿಜ್ಞಾನಿಗಳು ತಾವು ವಾಸಿಸುವ ಪ್ರದೇಶಗಳಲ್ಲಿ ಕಂಡುಬರುವ ಮಾರಕ ರೋಗಗಳಾದ ಕ್ಯಾನ್ಸರ್, ಡೆಂಗ್ಯೂ, ಚಿಕೂನ್ಗುನ್ಯಾದಂತಹ ರೋಗಗಳಿಗೆ ನಿಖರವಾದ ಆಯುವರ್ೇದ ಚಿಕಿತ್ಸೆಯನ್ನು ಸಂಶೋಧನೆಯ ಮೂಲಕ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕಾಗಿದ್ದು, ಇಂತಹ ವಿಚಾರ ಸಂಕಿರಣಗಳು ವೈದ್ಯ ವಿದ್ಯಾಥರ್ಿಗಳಿಗೆ ಸಹಕಾರಿಯಾಗಿವೆ ಎಂದು ಹೇಳಿದರು.

ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾಥರ್ಿಗಳು ಸಂಶೋಧನೆಗೆ ತೆಗೆದುಕೊಂಡ ವಿಷಯವನ್ನು ಪ್ರಸ್ತುತ ಪಡಿಸುವ ವಿಧಾನದ ಕುರಿತು, ಸಹಪ್ರಾಧ್ಯಾಪಕ ಡಾ.ಸತೀಶ.ಪಾಟೀಲ ಸಂಶೋಧನೆಗೆ ತೆಗೆದುಕೊಂಡ ವಿಷಯದ ಅಧ್ಯಯನ ಹಾಗೂ ಅಳವಡಿಕೆ, ಸಮುದಾಯ ಆರೋಗ್ಯ ವಿಭಾಗದ ಉಪನ್ಯಾಸಕಿ ಡಾ.ವಿಜಯಾ.ಸೋರಗಾಂವಿ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ವಿವಿಧ ವಿಧಾನಗಳ ಅಳವಡಿಕೆ ಹಾಗೂ ಎಸ್.ಎಸ್.ಎಂ. ಫಾರ್ಮಸಿ ವಿಭಾಗಮುಖ್ಯಸ್ಥ ಡಾ.ಆರ್.ಬಿ.ಕೊಟ್ನಾಳ ಸಂಶೋಧನೆಗೆ ಸಹಾಯಕವಾಗುವ ಆಧುನಿಕ ರಾಸಾಯನಿಕ ಉಪಕರಣಗಳ ಕುರಿತು ಪ್ರಬಂಧ ಮಂಡಿಸಿ, ಪ್ರತಿಯೊಂದು ಔಷಧಿಯ ಗುಣಮಟ್ಟ ಹಾಗೂ ಪ್ರಭಾವಗಳ ಪರೀಕ್ಷೆಯ ನಂತರವಷ್ಟೇ ಮಾರುಕಟ್ಟೆಗೆ ತರುವ ಅನಿವಾರ್ಯತೆಯಿದ್ದು, ಸ್ನಾತಕೋತ್ತರ ವಿದ್ಯಾಥರ್ಿಗಳು ಫಾರ್ಮಸಿ ಕಾಲೇಜಿನಲ್ಲಿ ಲಭ್ಯವಿರುವ ಅತ್ಯಾಧುನಿಕ ರಾಸಾಯನಿಕ ಉಪಕರಣಗಳ ಸೇವೆಯ ಸದುಪಯೋಗವನ್ನು ತಮ್ಮ ಸಂಶೋಧನೆಯಲ್ಲಿ ಪಡೆಯಲು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಈ ವಿಚಾರ ಸಂಕಿರಣವು ವೈದ್ಯ ವಿದ್ಯಾಥರ್ಿಗಳಿಗೆ ಸ್ನಾತಕೋತ್ತರ ವಿಷಯದ ಸಂಶೋಧನೆಯಲ್ಲಿ ತುಂಬ ಸಹಕಾರಿಯಾಗಿದ್ದು, ಸ್ನಾತಕೋತ್ತರ ವಿದ್ಯಾಥರ್ಿಗಳು ಉಪಯುಕ್ತ ಹಾಗೂ ಅವಶ್ಯಕ ವಿಷಯಗಳಲ್ಲಿ ಸಂಶೋಧನೆಯನ್ನು ಕೈಗೊಂಡು ಆಯುವರ್ೇದ ಶಾಸ್ತ್ರದ ಶ್ರೇಷ್ಠತೆಯನ್ನು ತಿಳಿಸಿಕೊಡುವಲ್ಲಿ ಶ್ರಮಿಸಬೇಕೆಂದು ಹೇಳಿದರು. 

ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆ ಡಾ. ರೇಣುಕಾ ತೆನಹಳ್ಳಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತ್ಸ್ನಾ ಬರಗಿ ವಂದಿಸಿದರು. ಸಹ ಪ್ರಾಧ್ಯಾಫಕಿ ಡಾ. ಅಶ್ವಿನಿ ನಿಂಬಾಳ ಕಾರ್ಯಕ್ರಮ ನಿರೂಪಿಸಿದರು. ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಆಯುವರ್ೇದ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.