ನಾಳೆ ರಾಜ್ಯಮಟ್ಟದ ಛಲವಾದಿ ವಧು ವರರ ಸಮ್ಮೇಳನ : ಕನಕಮೂರ್ತಿ ಛಲವಾದಿ
State-level Chalavadi bride and groom conference tomorrow: Kanakamurthy Chalavadi
ಕೊಪ್ಪಳ 20: ಜಿಲ್ಲಾ ಛಲವಾದಿ ಸಮಾಜದ ಚಿಂತಕರ ವೇದಿಕೆ, ಕೊಪ್ಪಳ ಜಿಲ್ಲಾ ಛಲವಾದಿ, ಮಹಾಸಭಾ ದೇವಿಂದ್ರನಾಂ ಪ್ರೀಯ ಸಾಮ್ರಾಟ್ ಅಶೋಕ್ ಸಂಸ್ಕೃತಿಕ ಕಲಾ, ಶಿಕ್ಷಣ ಮಹಾ ಸಂಸ್ಥೆ ಕೊಪ್ಪಳ,ಎಐಜಿ ಫೌಂಡೇಶನ್ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ದಿ.22 ರಂದು ಭಾನುವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 4 ರವರೆಗೆ ಭಾಗ್ಯನಗರ ಕೊಪ್ಪಳ ರಸ್ತೆಯ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ಛಲವಾದಿ ವಧು ವರರ ಸಮ್ಮೇಳನ ಜರುಗುವುದು ಎಂದು ಛಲವಾದಿ ಸಮಾಜದ ಮುಖಂಡ ಕನಕಮೂರ್ತಿ ಛಲವಾದಿ ಹೇಳಿದರು.
ಅವರು ಶುಕ್ರವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ವಧು ವರರ ಸಮ್ಮೇಳನದ ಉದ್ಘಾಟನೆಯನ್ನು ಉದ್ಯಮಿದಾರ ಎಐಜಿ ಫೌಂಡೇಶನ್ ಚಿಕ್ಕೋಡಿ ಅರವಿಂದ್ ಈ.ಫಟ್ಟಿ ನೆರವೇರಿಸುವರು, ನೀರಾವರಿ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಆರ್.ರುದ್ರಯ್ಯ ಜ್ಯೋತಿ ಬೆಳಗಿಸುವರು. ಕೋಲಾರ ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವವರು, ಸಮ್ಮೇಳನದ ಅಧ್ಯಕ್ಷತೆಯನ್ನು ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಬೆಲ್ಲದ್ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಕೃಷ್ಣ ಇಟ್ಟಂಗಿ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿದ್ದು ಮ್ಯಾಗೇರಿ, ನಗರಸಭೆ ಮಾಜಿ ಸದಸ್ಯ ಮುತ್ತು ಕುಷ್ಟಗಿ, ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಸರಸ್ವತಿ ಇಟ್ಟಂಗಿ, ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಹೊಸಮನಿ, ಉಪನ್ಯಾಸಕ ವೆಂಕಟೇಶ್ ಮೂರ್ತಿ ಕುಷ್ಟಗಿ, ಗಂಗಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗರಾಜ ನಂದಾಪುರ,
ಕನಕಗಿರಿಯ ಗರುಡ ಬ್ಯಾಂಕ್ ಅಧ್ಯಕ್ಷ ಸಣ್ಣ ಕನಕಪ್ಪ ಛಲವಾದಿ, ನಗರಸಭೆ ಮಾಜಿ ಸದಸ್ಯ ರಾಧ ಕನಕಮೂರ್ತಿ ಛಲವಾದಿ, ರಾಜ್ಯ ಸೋಷಿತರ ಸಮುದಾಯಗಳ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಬೇಗಾರ, ಮಲ್ಲಿಕಾರ್ಜುನ್ ತೊಂಡೆಹಾಳ, ಸುರೇಶ್ ಬಳಗಾನೂರು ಸೇರಿದಂತೆ ಸಮಾಜದ ಹಿರಿಯ ಮುಖಂಡರು ಪದಾಧಿಕಾರಿಗಳು ಪಾಲ್ಗೊಳ್ಳುವರು ಈ ಕಾರ್ಯಕ್ರಮಕ್ಕೆ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ವಿಶೇಷ ಸೂಚನೆ ವಧು-ವರರು ಭಾವಚಿತ್ರ ಹಾಗೂ ಬಯೋಡಾಟದೊಂದಿಗೆ ದಿ.22 ಭಾನುವಾರ ಬೆಳಿಗ್ಗೆ 10 ಗಂಟೆ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು, ಮರು ವಿವಾಹ ಮಾಡಿಕೊಳ್ಳುವರಿಗೆ ಅವಕಾಶ ಕೊಡಲಾಗಿದೆ ಆದರೆ ಕೋರ್ಟಿನಿಂದ ವಿವಾಹ ವಿಚ್ಛೇದನ ಪಡೆದಿರಬೇಕು, ವಧು-ವರರು ಕಡ್ಡಾಯವಾಗಿ ಬರಬೇಕು ಮತ್ತು ಪಾಲಕರಿಗೆ ಅವಕಾಶವಿದೆ ಸಮ್ಮೇಳನದಲ್ಲಿ ಉಚಿತ ಪ್ರವೇಶ ವಿದ್ದು ಯಾವುದೇ ಫೀ ಇರುವುದಿಲ್ಲ, ಉಪಹಾರ ಮತ್ತು ಊಟದ ವ್ಯವಸ್ಥೆ ಇರುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಛಲವಾದಿ ಚಿಂತಕರ ವೇದಿಕೆ ಅಧ್ಯಕ್ಷ ಸೋಮಣ್ಣ ಬಡಿಗೇರ, ಯುವ ಮುಖಂಡ ರಾಘು ಚಾಕ್ರಿ, ಜಿಲ್ಲಾ ಸಫಾಯಿ ಕರ್ಮಚಾರಿ ನಾಮನಿರ್ದೇಶನ ಸದಸ್ಯ ಕಾಶಪ್ಪ ಛಲವಾದಿ, ಶಿವರಾಜ್ ಚಲವಾದಿ, ಮಂಜುನಾಥ್ ದೊಡ್ಡಮನಿ ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 