ಲೋಕದರ್ಶನ ವರದಿ
ಕೊಪ್ಪಳ 14: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರು ಗ್ರಾಮದ ಸುಕ್ಷೇತ್ರದ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ಯವಾಗಿ ಡಾ.ಜ.ಚ.ನಿ. ಪ್ರತಿಷ್ಠಾನ ಅಡ್ನೂರು-ರಾಜೂರ ವತಿಯಿಂದ ನೀಡುವ ರಾಜ್ಯಮಟ್ಟದ ಜ.ಚ.ನಿ. ಪ್ರಶಸ್ತಿಗೆ ಕೊಪ್ಪಳದ ಹಿರಿಯ ಸಾಹಿತಿಗಳು ಮತ್ತು ನಿವೃತ್ತ ಪ್ರಾಚಾರ್ಯರಾದ ಡಾ.ಮಹಾಂತೇಶ ಮಲ್ಲನಗೌಡರ ಆಯ್ಕೆಯಾಗಿದ್ದಾರೆ. ಇವರನ್ನು ಇಂದು ಅವರ ನಿವಾಸದಲ್ಲಿ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಸ್ವೀಕರಿಸಲು ಅಧಿಕೃತ ಆಹ್ವಾನ ನೀಡಲಾಯಿತು. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಪ್ರತಿಷ್ಠಾನದ ಎನ್.ಎಂ.ಯಲಬುಗರ್ಿ, ಶರಣಪ್ಪ ಅರಕೇರಿ, ಕೆ.ಬಿ.ಅಮಾತೆಣ್ಣವರ, ಶರಣಪ್ಪ ಸೊಂಪೂರ, ಶರಣಪ್ಪ ಮುಂಡರಗಿ, ನಿವೃತ್ತ ಶಿಕ್ಷಕ ಶಂಕ್ರಪ್ಪ ಬಂಗಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಣ್ಣಿಗೇರಿಯ ಕೃಷಿ ವಿಜ್ಞಾನಿ ಅಬ್ದುಲ್ ಖಾದರ ನಡಕಟ್ಟೀನ ಅವರ ದತ್ತಿನಿಧಿಯಿಂದ ಕೊಡ ಮಾಡುವ ಈ ಪ್ರಶಸ್ತಿಯನ್ನು ಕಳೆದ 20 ವರ್ಷಗಳಿಂದ ಪ್ರತಿವರ್ಷ ನಾಡಿನ ಒಬ್ಬ ಹಿರಿಯ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಫೆಬ್ರುವರಿ 1ರಂದು ರಾಜೂರು ಗ್ರಾಮದಲ್ಲಿ ನಡೆಯಲಿರುವ ಸಾಹಿತ್ಯ ಜಾತ್ರೆಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.