ರಾಮದುರ್ಗ 21: ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿ, ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ರಾಜ್ಯದ ಸರ್ವ ನೇಕಾರ ಸಮುದಾಯ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲು ತೀಮರ್ಾನಿಸಿದ್ದೇವೆ ಎಂದು ಕನರ್ಾಟಕ ರಾಜ್ಯ ನೇಕಾರ ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಸ್. ಸೋಮಶೇಖರ ಹೇಳಿದರು.
ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೈಮಗ್ಗ ವೃತ್ತಿಯನ್ನು ಪೋಷಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ 2015 ರಲ್ಲಿ ಪ್ರತಿವರ್ಷ ಅಗಸ್ಟ-7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲು ನಿರ್ಣಯ ತೆಗೆದುಕೊಂಡಿದ್ದಾರೆ. ಮುದ್ರಾ, ಉಜ್ವಲ, ಅಟಲ್ ಪಿಂಚಣಿ, ಪ್ರಧಾನ ಮಂತ್ರಿ ಜನಧನ ಸೇರಿದಂತೆ ಅನೇಕ ಬಡವರ ಪರ ಯೋಜನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದು ಐದು ವರ್ಷಗಳ ಕಾಲ ಬ್ರಷ್ಠಾಚಾರ ರಹಿತ ಆಡಳಿತವನ್ನು ದೇಶಕ್ಕೆ ಒದಗಿಸಿರುವುದು ಭಾರತೀಯ ಪ್ರಜೆಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ನಂತರ ರೈತರು ನೇಕಾರರ ಸಾಲ ಮನ್ನಾ ಕುರಿತು ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿಸಿದ್ದಾರೆ. ದುರದೃಷ್ಠವಶಾತ್ ಬಹುಮತ ದೊರೆಯದೇ ಬಿ.ಎಸ್.ವೈ ರಾಜೀನಾಮೆ ನೀಡುವಂತಾಯಿತು. ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ನೇಕಾರರ ಹಾಗೂ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಈ ಬಾರಿ ರಾಜ್ಯದ ನೇಕಾರ ಸಮುದಾಯ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯಥರ್ಿಗಳ ಗೆಲುವಿಗೆ ಶ್ರಮಿಸಲಿದೆ ಎಂದರು.
ಬಾಕ್ಸ್ಃ
ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜವಳಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇನ್ನು ಮುಂದಾದರೂ ಲೋಕಸಭಾ ಚುನಾವಣೆಯ ನಂತರ ಅರ್ಹರಿಗೆ ಜವಳಿ ಖಾತೆ ಹಂಚಿಕೆ ಮಾಡಿ ನೇಕಾರ ಉಧ್ಯಮವನ್ನು ಪ್ರೋತ್ಸಾಹಿಸುವಲ್ಲಿ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು.
ಬಿ.ಎಸ್. ಸೋಮಶೇಖರ ಕನರ್ಾಟಕ ರಾಜ್ಯ ನೇಕಾರ ಮಹಾಸಭಾದ ರಾಜ್ಯಾಧ್ಯಕ್ಷ
ಈ ಸಂದರ್ಭದಲ್ಲಿ ನೇಕಾರ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದಶರ್ಿ ನವೀಜ್ ಜಿಲ್ಲಾಳ, ತಾಲೂಕಾ ನೇಕಾರ ಘಟಕದ ಅಧ್ಯಕ್ಷ ವಿಠ್ಠಲ ಮುರುಡಿ, ನೇಕಾರ ಮಹಾಸಭಾದ ಸಂಚಾಲಕ ಪರಶುರಾಮಯ್ಯ, ರಾಜ್ಯ ದೇವಾಂಗ ಸಂಘದ ಉಪಾಧ್ಯಕ್ಷ ಶಂಕ್ರಣ್ಣ ಮುರುಡಿ, ಗೋಪಾಲ ಪಾತಾಳಿ ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ವಿವಿಧ ನೇಕಾರ ಮುಖಂಡರು ಇದ್ದರು.