ಜಾಗೃತಿ ಚಟುವಟಿಕೆಗಳನ್ನು ಸಮರ್ಕವಾಗಿ ಹಮ್ಮಿಕೊಳ್ಳಲು ರಾಜ್ಯ ಸ್ವೀಪ್ ನೊಡೆಲ್ ಅಧಿಕಾರಿ ಪಿ. ಎಸ್. ವಸ್ತ್ರದ ಸೂಚನೆ
ವಿಜಯಪುರ 21: ಮತದಾರರಲ್ಲಿ ಜಾಗೃತಿ ಮೂಡಿಸಲು ಮತದಾರರ ಸಾಕ್ಷರತಾ ಸಂಘಗಳು ಜಾಗೃತಿ ಚಟುವಟಿಕೆಗಳನ್ನು ಸಮರ್ಕವಾಗಿ ಹಮ್ಮಿಕೊಳ್ಳುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್.ವಸ್ತ್ರದ ಅವರು ಸೂಚನೆ ನೀಡಿದ್ದಾರೆ.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡಿರುವ ಬಗ್ಗೆ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು,ಶಾಲೆ ಹಾಗೂ ಕಾಲೇಜುಗಳಲ್ಲಿ ಯುವ ಮತದಾರರಿಗೆ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮುಂಬರುವ ಚುನಾವಣೆಯಲ್ಲಿ ಯುವ ಮತದಾರರ ಮತದಾನದ ಪ್ರಾಮುಖ್ಯತೆ ಕುರಿತು ಅವರನ್ನು ಪ್ರೇರೇಪಿಸುವುದು. ಶಾಲಾ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಗಳನ್ನು ಕೈಗೊಳ್ಳುವುದು, ಚುನಾವಣಾ ಸಾಕ್ಷರತಾ ಕ್ಲಬ್(ಇ.ಎಲ್.ಸಿ)ಗಳಡಿ ವಿನೂತನ ಚಟುವಟಿಕೆಗಳ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು. ಮತದಾನದ ಹಕ್ಕುಗಳ ಬಗ್ಗೆ ಯುವ ಮತದಾರರಿಗೆ ಅರಿವು ಮೂಡಿಸಿ, ಯುವ ಮತದಾರರ ನೋಂದಣಿ ಮಾಡಿಸಬೇಕು ಎಂದು ಹೇಳಿದರು.
ಈಗಾಗಲೇ 17 ವರ್ಷ 6 ತಿಂಗಳ ವಯಸ್ಸು ಪೂರ್ಣಗೊಂಡ ಎಲ್ಲ ವಿದ್ಯಾರ್ಥಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಸುವುದು. ಇದಕ್ಕೆ ಪೂರಕವಾಗಿ ಮತದಾನ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳನ್ನು ಏರಿ್ಡಸುವುದು, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ರೀಲ್ಸ್ ಗಳನ್ನು ಮಾಡಿಸಲು ತಿಳಿಸಿದರು.
ಈಗಾಗಲೇ ಹಮ್ಮಿಕೊಂಡಿರುವ ಉತ್ತಮ ಚಟುವಟಿಕೆಗಳ ಲೇಖನಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಕಳೆದ ಚುನಾವಣೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ಯಶೋಗಾಥೆಗಳನ್ನು ತಯಾರಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಇ.ಎಲ್.ಸಿ ಗಳುಚಟುವಟಿಕೆಗಳನ್ನು ಡಿಸೆಂಬರ್ 25ರೊಳಗೆ ಆನ್ ಲೈನ್ ನಲ್ಲಿ ನೊಂದಣಿಯನ್ನು ಪೂರ್ಣಗೊಳಿಸಬೇಕು ಮತ್ತು ಉತ್ತಮ ಲೇಖನಗಳನ್ನು ಒಂದು ವಾರದೊಳಗೆ ಕಳುಹಿಸಲು ಸೂಚನೆ ನೀಡಿದರು.
ಕಳೆದ ಸಾಲುಗಳಲ್ಲಿ 2 ಬಾರಿ ವಿಜಯಪುರ ಜಿಲ್ಲೆಗೆ ಉತ್ತಮ ಸ್ವೀಪ್ ಚಟುವಟಿಕೆಗಳನ್ನು ಏರ್ಿಡಿಸಿದ್ದಕ್ಕೆ ಪ್ರಶಸ್ತಿ ಬಂದಿದೆ. ಅದೇ ರೀತಿ ಈ ಬಾರಿಯೂ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಸ್ವೀಪ್ ಸಮಿತಿಯ ನೊಡಲ್ ಅಧಿಕಾರಿಗಳಾದ ಬಿ. ಎಸ್. ರಾಠೋಡ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾ ಎ. ಬಿ ಅಲ್ಲಾಪೂರ, ಶಾಲಾ ಕಾಲೇಜುಗಳ ಇ.ಎಲ್.ಸಿ ಸಂಯೋಜಕರುಗಳು, ಚುನಾವಣಾ ತಹಶೀಲ್ದಾರರಾದ ಪ್ರೇಮಸಿಂಗ್ ಪವಾರ ಉಪಸ್ಥಿತರಿದ್ದರು.