ರಾಜ್ಯ ಮಟ್ಟದ ಯುವಜನ ಮೇಳ

ಗದಗ 11: ಗದಗ ಜಿಲ್ಲೆಯಲ್ಲಿ ಫೆಬ್ರುವರಿ 14ರಿಂದ 3 ದಿನಗಳ ಕಾಲ ಗಜೇಂದ್ರಗಡದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ, ಮಾರ್ಚ 1, 2ರಂದು ಗದಗದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಹಾಗೂ ಮಾರ್ಚ 15, 16 ರಂದು ಲಕ್ಕುಂಡಿ ಉತ್ಸವ ಆಯೋಜಿಸಲಾಗುತ್ತಿದೆ ಎಂದು ರಾಜ್ಯದ ಗಣಿ ಮತ್ತು ಭ ವಿಜ್ಞಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ ಪಾಟೀಲ ತಿಳಿಸಿದರು. 

 ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮಾಧ್ಯಮ ಗೋಷ್ಟಿಯಲ್ಲಿ ಅವರು ಮಾತನಾಡಿದರು. ಗದಗ ಜಿಲ್ಲಾಡಳಿತವು ರೋಣ ಶಾಸಕ ಕಳಕಪ್ಪ ಬಂಡಿಯವರ ನೇತೃತ್ವದಲ್ಲಿ ಎರಡನೇ ಬಾರಿಗೆ ಗಜೇಂದ್ರಗಡದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ನಡೆಸಲು ವಿವಿಧ ಸಮಿತಿಗಳನ್ನು ರಚಿಸಿ ಸರ್ವ ಸಿದ್ಧತೆಗಳನ್ನು  ಮಾಡಿಕೊಂಡಿದೆ.  ರಾಜ್ಯದ 4 ಕಂದಾಯ ವಿಭಾಗಳಿಂದ ಬರುವ ಕಲಾ ತಂಡಗಳಿಗೆ ವಸತಿ, ಸಾರಿಗೆ ಹಾಗೂ ವೇದಿಕೆ ಕುರಿತಂತೆ ಸಿದ್ಧತೆಗಳು ನಡೆಯತಿದ್ದು ಯುವಜನ ಮೇಳವು ವ್ಯವಸ್ಥಿತವಾಗಿ ಜರುಗಲು ಸಂಬಂಧಿತ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಹಾಗೂ ಸಾರ್ವಜನಿಕರು ಈ ಯುವಜನ ಮೇಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿದರು. 

ಉದ್ಯೋಗ ಮೇಳ: ಮಾರ್ಚ 1 ಹಾಗೂ 2 ರಂದು ಗದಗ ಬೆಟಗೇರಿಯ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನರಿಗೆ ಉದ್ಯೋಗವಕಾಶ ಕಲ್ಪಿಸಲು ಕೌಶಲ್ಯಾಭಿವೃದ್ಧಿ ಇಲಾಖೆಯ ಮೂಲಕ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರವು ಯುವಜನರಿಗೆ ಉದ್ಯೋಗ  ಹಾಗೂ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯುವ ಕೌಶಲ್ಯ ನೀತಿ ಅನ್ವಯ ಏರ್ಪಡಿಸಲಾಗುತ್ತಿರುವ  ಈ ಉದ್ಯೋಗ ಮೇಳದಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳ 60 ಕಂಪನಿಗಳ ಉದ್ಯೋಗಧಾತರು ಭಾಗವಹಿಸುತ್ತಿದ್ದು ಸುಮಾರು 5 ಸಾವಿರ ಯುವಜನರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಶಾಸಕ ಎಚ್.ಕೆ.ಪಾಟೀಲ ಮಾತನಾಡಿ ಜಿಲ್ಲೆಯ ಯುವಜನರಿಗೆ ಪರಿಣಾಮಕಾರಿಯಾಗಿ ಉದ್ಯೋಗ ಮೇಳದಲ್ಲಿ ಉದ್ಯೋಗವಕಾಶ ದೊರಕಿಸಲು ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಅಗತ್ಯದ ಕ್ರಮಗಳನ್ನು ಕೈಕೊಳ್ಳಬೇಕು. ತಾಂತ್ರಿಕ ಅಭ್ಯಥರ್ಿಗಳಿಗೆ ಹೆಚ್ಚಿನ ಅವಕಾಶವಿದ್ದು ಸ್ವಂತ ಜಿಲ್ಲಾ ಕೇಂದ್ರದಲ್ಲಿ ಉದ್ಯೋಗಕ್ಕಾಗಿ ಇರುವ ಅವಕಾಶಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು. 

ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕಾಗಿ ಯುವಜನರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅನುಕೂಲವಾಗುವ ಗದಗ ಉದ್ಯೋಗ ಮೇಳ ವೆಬ್ಸೈಟ್ನ್ನು ಸಚಿವ ಸಿ.ಸಿ.ಪಾಟೀಲ ಚಾಲನೆಗೊಳಿಸಿದರು.

ಲಕ್ಕುಂಡಿ ಉತ್ಸವ: ಗದಗ ಜಿಲ್ಲೆಯ ಲಕ್ಕುಂಡಿ ಉತ್ಸವವನ್ನು ಮಾರ್ಚ 15 ಹಾಗೂ 16 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಫೆ. 15ರಂದು ಲಕ್ಕುಂಡಿಯಲ್ಲಿ ಈ ಕುರಿತಂತೆ ಸಮಾಲೋಚನಾ ಸಭೆಯಲ್ಲಿ ಉತ್ಸವದ ಕಾರ್ಯಕ್ರಮ ಕುರಿತಂತೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಕುರಿತಂತೆ ಚಚರ್ಿಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಠೀಲ ನುಡಿದರು.

ನರಗುಂದದಲ್ಲಿ ಉಂಟಾಗುತ್ತಿರುವ ಭೂಕುಸಿತದ ಸಮಸ್ಯೆ ಗಂಭೀರತೆಯ ಹಿನ್ನಲೆಯಲ್ಲಿ ಹಿರಿಯ ವಿಜ್ಞಾನಿ ಎಚ್.ಎಸ್.ಎಮ್.ಪ್ರಕಾಶ ಅವರನ್ನು ನರಗುಂದಕ್ಕೆ ಕರೆಸಿಕೊಳ್ಳಲಾಗಿದ್ದು ಎರಡು ದಿನಗಳ ಕಾಲ ಅವರು ನರಗುಂದದಲ್ಲಿ ಭೂ ಕುಸಿತದ ಕಾರಣಗಳ ಕುರಿತು ಪರಿಶೀಲಿಸುವರು. ಅವರೊಂದಿಗೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜೊತೆಗಿರುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ ಮಾಹಿತಿ ನೀಡಿದರು. 

ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್. ಪಾಟೀಲ, ವಿಧಾನ ಪರಿಷತ್ತ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜ ಮಲ್ಲೂರು, ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ವಿಶ್ವನಾಥ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.