ಲೋಕದರ್ಶನ ವರದಿ
ಬೆಳಗಾವಿ, 25: ಬೆಳಗಾವಿಯ ಪ್ರತಿಷ್ಠಿತ ಕನರ್ಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಎಂ. ಕೇ. ನಂಬ್ಯಾರ ಅಣಕು ನ್ಯಾಯಾಲಯದ ಸಭಾಗೃಹದಲ್ಲಿ ಇದೇ ದಿ. 25ರಂದು ಪ್ರತಿಷ್ಠಿತ ಮಜಲಿ (ಕನ್ನಡ) ಹಾಗೂ ಬೆಂಬಳಗಿ (ಇಂಗ್ಲೀಷ್) ರಾಜ್ಯಮಟ್ಟದ ಪಯರ್ಾಯ ಫಲಕ ಚಚರ್ಾಕೂಟ ಸ್ಪಧರ್ೆಗಳನ್ನು ಆಯೋಜಿಸಲಾಯಿತು.
ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ, ಗದಗ, ಶಿರಸಿ, ಮುಂತಾದ ವಿವಿಧ ಸ್ಥಳಗಳಿಂದ 18 ತಂಡಗಳು ಈ ಸ್ಪಧರ್ೆಗಳಲ್ಲಿ ಭಾಗವಹಿಸಿದವು. ಬೆಳಗಾವಿಯ ಕೇ. ಎಲ್. ಈ. ಸಂಸ್ಥೆಯ ಅಃಂಐಅ ವ್ಯವಹಾರ ಆಡಳಿತ ಮಹಾವಿದ್ಯಾಲಯದ ತಂಡವು ಮಜಲಿ ಪಯರ್ಾಯ ಫಲಕವನ್ನು ಗೆದ್ದರೆ, ಶಿರಸಿಯ ಎಮ್. ಈ. ಎಸ್. ವಾಣಿಜ್ಯ ಮಹಾವಿದ್ಯಾಲಯದ ತಂಡವು ಬೆಂಬಳಗಿ ಪಯರ್ಾಯ ಫಲಕವನ್ನು ತನ್ನದಾಗಿಸಿಕೊಂಡಿತು.
ಎರಡೂ ಸ್ಪಧರ್ೆಗಳಲ್ಲಿ ಉತ್ತಮ ಭಾಷಣ ಮಾಡಿದ ಮೊದಲ ಮೂವರು ಸ್ಪಧರ್ಿಗಳಿಗೆ ತಲಾ ರೂ. 1,500, 750 ಮತ್ತು 500ರ ನಗದು ಬಹುಮಾನಗಳನ್ನು ನೀಡಲಾಯಿತು. ಮಜಲಿ ಚಚರ್ಾಕೂಟ ಸ್ಪಧರ್ೆಯಲ್ಲಿ ಬೆಳಗಾವಿಯ ಜಿ. ಎಸ್. ಎಸ್. ಮಹಾವಿದ್ಯಾಲಯದ ಕು. ಹರ್ಷದಾ ರೇವಣಕರ ಮೊದಲನೇ ಸ್ಥಾನವನ್ನು ಪಡೆದರೆ ಬೆಳಗಾವಿಯ ಕೇ. ಎಲ್. ಈ. ಸಂಸ್ಥೆಯ ಅಃಂಐಅ ವ್ಯವಹಾರ ಆಡಳಿತ ಮಹಾವಿದ್ಯಾಲಯದ ನಮನ ಜೈನ ಎರಡನೇ ಹಾಗೂ ಬೆಳಗಾವಿಯ ಗೋಗಟೇ ವಾಣಿಜ್ಯ ಮಹಾವಿದ್ಯಾಲಯದ ಕು. ದರ್ಷನಾ ಬಿ. ಮೂರನೇ ಸ್ಥಾನಗಳನ್ನು ಪಡೆದರು. ಬೆಂಬಳಗಿ ಚಚರ್ಾಕೂಟ ಸ್ಪಧರ್ೆಯಲ್ಲಿ ಮೊದಲನೇ ಸ್ಥಾನವನ್ನು ಶಿರಸಿಯ ಎಮ್. ಈ. ಎಸ್. ವಾಣಿಜ್ಯ ಮಹಾವಿದ್ಯಾಲಯದ ವರುಣ ಭಟ್ ಹಾಗೂ ಎರಡನೇ ಸ್ಥಾನವನ್ನು ಬೆಳಗಾವಿಯ ಬಿ. ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಕು. ರುಬೀನಾ ನದಾಫ ಪಡೆದರು. ಇದೇ ಸ್ಪಧರ್ೆಯಲ್ಲಿ ಮೂರನೇ ಸ್ಥಾನವನ್ನು ಶಿರಸಿಯ ಎಮ್. ಈ. ಎಸ್. ವಾಣಿಜ್ಯ ಮಹಾವಿದ್ಯಾಲಯದ ಗಜಾನನ ಹೆಗ್ಡೆ ಹಾಗೂ ಗದಗಿನ ಎಸ್. ಏ. ಮಾನ್ವಿ ಕಾನೂನು ಮಹಾವಿದ್ಯಾಲಯದ ಕು. ಶಕೀಲಾ ಬಾನು ಹಂಚಿಕೊಂಡರು.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. . ಸಂಧ್ಯಾ ಎಚ್. ವ್ಹಿ. ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಪಯರ್ಾಯ ಫಲಕಗಳನ್ನು ಪ್ರದಾನ ಮಾಡಿದರು. ಪ್ರಾಧ್ಯಾಪಕರಾದ . ಜಿ. ಎಮ್. ವಾಘ ಇವರು ಇತರ ಬಹುಮಾನಗಳನ್ನು ವಿತರಿಸಿದರು. ಮಹಾವಿದ್ಯಾಲಯದ ಚಚರ್ಾಕೂಟ ಒಕ್ಕೂಟದ ಅಧ್ಯಕ್ಷರಾದ ಪ್ರಾಧ್ಯಾಪಕ ...ಪಿ. ಏ. ಯಜುವರ್ೇದಿಯವರು ಸಭೆಯನ್ನು ಸ್ವಾಗತಿಸಿದರು. ಚಚರ್ಾಕೂಟ ಒಕ್ಕೂಟದ ಕಾರ್ಯದಶರ್ಿ ಕು. ಹಷರ್ಾ ವಾಘ ಇವರು ಸಭೆಗೆ ಪಯರ್ಾಯ ಫಲಕಗಳ ಕಿರು ಪರಿಚಯವನ್ನು ನೀಡಿದರು. ಪ್ರಾಧ್ಯಾಪಕರಾದ . ಎಮ್. ಎಸ್. ಕುಲಕಣರ್ಿಯವರು ಬಹುಮಾನಗಳನ್ನು ಘೋಷಿಸಿದರು. ಮಹಾವಿದ್ಯಾಲಯದ ಸಾಮಾನ್ಯ ಕಾರ್ಯದಶಿಗಳಾದ ಕು. ಶ್ವೇತಾ ದೇಶಪಾಂಡೆ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ವಿದ್ಯಾಥರ್ಿನಿಯರ ಪ್ರತಿನಿಧಿಯಾದ ಕು. ವೀಣಾ ಕಾಣೆ ಇವರು ವಂದನಾರ್ಪಣೆಯನ್ನು ಮಾಡಿದರು. ಮಹಾವಿದ್ಯಾಲಯದ ಸಮಸ್ಥ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಸಭೆಯಲ್ಲಿ ಹಾಜರಿದ್ದರು.