ಕ್ಯಾನ್ಸರ್ ಕುರಿತು ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮ

State Level Lecture Program on Cancer

ವಿಜಯಪುರ. ದಿ. ಡಾ.ಆರಿ​‍್ಸ. ಬಿದರಿ ಅವರ ಸ್ಮರಣಾರ್ಥ ಕ್ಯಾನ್ಸರ್ ಕುರಿತು ಮುಂದುವರೆದ ವೈದ್ಯಕೀಯ ಶಿಕ್ಷಣ ರಾಜ್ಯಮಟ್ಟದ ಉಪನ್ಯಾಸ ಕಾರ್ಯಕ್ರಮ ರವಿವಾರ ನಗರದ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆಯಿತು.  

ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವೈದ್ಯಕೀಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಿಕಂದರಾಬಾದಿನ ರೇನೋವಾ ಸೌಮ್ಯ ಕ್ಯಾನ್ಸರ್ಸೆಂಟರ್‌ನ ಮೆಡಿಕಲ್ ಅಂಕೋಲಾಜಿ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಪಿ.ಎಸ್‌. ದತ್ತಾತ್ರೇಯ ಉದ್ಘಾಟಿಸಿದರು.  

ವೈದ್ಯಕೀಯ ಶಾಸ್ತ್ರವಿಭಾಗದ ​‍್ರೊ.ಡಾ.ಆರಿ್್ಸ.ಬಿದರಿ ಪ್ರಾಸ್ತಾವಿಕ ಮಾತನಾಡಿದರು.  

ಡಾ.ಆರಿ​‍್ಸ. ಬಿದರಿ ಸ್ಮಾರಕ ದತ್ತಿ ವತಿಯಿಂದ ಆಯೋಜಿಸಲಾಗಿದ್ದ ಈ ಉಪನ್ಯಾಸದಲ್ಲಿ ಮುಂಬೈ ಮತ್ತು ಹೈದ್ರಾಬಾದ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 400 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸುಮಾರು 1300 ಜನ ಕಾರ್ಯಕ್ರಮಕ್ಕೆ ಆನಲೈನ್ ನೋಂದಣಿ ಮಾಡಿದ್ದು ಗಮನಾರ್ಹವಾಗಿದೆ.  

ಈ ಸಂದರ್ಭದಲ್ಲಿ ವಿಜಯೇಂದ್ರ ಬಿದರಿ, ಡಾ.ಆರಿ​‍್ಸ.ಬಿದರಿ, ಆಶಾ.ಎಂ.ಪಾಟೀಲ, ಡಾ. ಶೈಲಜಾ ಬಿದರಿ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ  

ಡಾ.ರಾಜೇಶ ಹೊನ್ನುಟಗಿ,  ಶ್ರೀಬಿ. ಎಂ.ಪಾಟೀಲ ಸೂಪರ್‌ಸ್ಪೇಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಕಾಲೇಜಿನ ಉಪಪ್ರಾಚಾರ್ಯ ಡಾ. ಎಂ.ಬಿ.ಪಾಟೀಲ, ವೈದ್ಯಕೀಯ ಶಾಸ್ತ್ರವಿಭಾಗದ ಮುಖ್ಯಸ್ಥ ಡಾ.ಎಸ್‌.ಎನ್‌.ಬೆಂಟೂರ, ಡಾ.ತೇಜಸ್ವಿನಿ ಮುಂತಾದವರು ಉಪಸ್ಥಿತರಿದ್ದರು.  

ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿಯ ಸಮಕುಲಾಧಿಪತಿ ಡಾ. ವೈ.ಎಂ.ಜಯರಾಜ್ ಅವರು ಸ್ವಾಗತ ಭಾಷಣ ಮಾಡಿದರು. ಕುಲಪತಿ ಡಾ.ಆರ್‌.ಎಸ್‌.ಮುಧೋಳ ಅಧ್ಯಕ್ಷತೆವಹಿಸಿದ್ದರು. ರಜಿಸ್ಟ್ರಾರ ಡಾ.ಆರಿ​‍್ವ.ಕುಲಕರ್ಣಿ ವಂದಿಸಿದರು.