ಅ.10ರಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ರಾಜ್ಯಮಟ್ಟದ ವಿಕಲಚೇತನರ ಕಲಾ ಪ್ರದರ್ಶನ ಕಾರ್ಯಕ್ರಮ


ಲೋಕದರ್ಶನ ವರದಿ

ಬಳ್ಳಾರಿ06: ಸಮರ್ಥನಂ ಅಂಗವಿಕಲರ ಸಂಸ್ಥೆಯ ವಾಷರ್ಿಕೊತ್ಸವದ ನಿಮಿತ್ತವಾಗಿ ವಿಕಲಚೇತನರ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮನ್ನು ಕಲ್ಪತರು ಜ್ಞಾನಯೋಗ ಕೇಂದ್ರ, ಬಳ್ಳಾರಿ ಮತ್ತು ಕನ್ನಡ ಚೈತನ್ಯ ವೇದಿಕೆ, ಬಳ್ಳಾರಿ ಇವರ ಸಂಯುಕ್ತಾಶ್ರಯದೋಂದಿಗೆ "ಆಗಸ್ಟ್ 10ರಂದು ಸಂಜೆ 5 ರಿಂದ 9 ಗಂಟೆ ವರೆಗೆ ನಗರದ ರಾಘವ ಕಲಾಮಂದಿರದಲ್ಲಿ  ಹಮ್ಮಿಕೊಳ್ಳಲಾಗಿದೆ. 

   ಈ ಕಾರ್ಯಕ್ರಮಕ್ಕೆ ಸಮರ್ಥನಂ ಅಂಗವಿಕಲರ ಸಂಸ್ಥೆಯ ವಿವಿಧ ಶಾಖೆಗಳಾದ ಗದಗ. ಬೆಂಗಳೂರು, ಬೆಳಗಾವಿ, ಧಾರವಾಡ ಮತ್ತು ಅನಂತಪುರದಿಂದ ವಿಕಲಚೇತನರ ಕಲಾ ಬಳಗವು ಆಗಮಿಸುತ್ತವೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿಕಲಚೇತನರ ಕಲಾಪ್ರತಿಭೇಯನ್ನು ಹೊರತರುವುದಾಗಿದೆ. ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆಯ ಕುರಿತು : ಸಮರ್ಥನಂ ಅಂಗವಿಕಲರ ಸಂಸ್ಥೆ ಒಂದು ನೋಂದಾಯಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು, 1997 ರಿಂದ ಉತ್ತರ ಕನರ್ಾಟಕದ ಮೂಲದವರೇ ಆದ ಮಹಾಂತೇಶ ಜಿ ಕಿವುಡಸಣ್ಣವರ ಅವರ ನೇತೃತ್ವದಲ್ಲಿ ಮೂರು ಜನ ಅಂಧ ವ್ಯಕ್ತಿಗಳಿಂದ ಪ್ರಾರಂಭಿಸಲ್ಪಟ್ಟು, ದೃಷ್ಟಿ ಹೀನರ, ಅಂಗವಿಕಲರ ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಲಿದೆ. 

ಪ್ರಮುಖವಾಗಿ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ಊನಶಕ್ಥರ ವಯಕ್ತಿಕ ಸ್ವಾವಲಂಬನೆಯನ್ನು ಸಾಧಿಸುವದಾಗಿದೆ ಮತ್ತು ಸಮಾಜದಲ್ಲಿ ತಮ್ಮದೇ ಆಗಿರುವಂತ ಪ್ರಮುಖ ಹೆಜ್ಜೆಯನ್ನು ಇಡುವಲ್ಲಿ ಸಹಾಯಮಾಡುವತ್ತ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ವಿಕಲಚೇತನರ ಸಭಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದೆ. ಬಳ್ಳಾರಿ ಸಮರ್ಥನಂ ಅಂಗವಿಕಲರ ಸಂಸ್ಥೆಯು 2014 ರಲ್ಲಿ ಕಾಯರ್ಾರಂಭ ಮಾಡುವ ಮೂಲಕ ಅನೇಕ ವಿಕಲಚೇತನರಿಗೆ ಜೀವನ ರೂಪಿಸಿಕೊಳ್ಳುವಲ್ಲಿ ದಾರಿದೀಪವಾಗಿದೆ.

 ಎಲ್ ಆರ್ ಸಿ, ಎಂಬುದು ಆಧುನಿಕ ರೀತಿಯ ತರಬೇತಿಗಳನ್ನು ನೀಡುವುದರ ಮೂಲಕ ವಿಕಲಚೇತನರಿಗೆ ಸಮಾಜಮುಖಿ ಆಗುವಂತೆ ಪ್ರೇರೆಪಿಸುತ್ತಲೇ ಇದೆ. ವಾಸ್ತವವಾಗಿ ಹಲವಾರು ವಿಕಲಚೇತನರಿಗೆ ಬಿ.ಪಿ.ಓ, ತಾಂತ್ರಿಕ ಮತ್ತು ತಾಂತ್ರಿಕೇತರ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡುವುದಲ್ಲದೆ ಅವರಿಗೆ ಉಧ್ಯೋಗವಕಾಶಗಳನ್ನು ಕಲ್ಪಿಸಿಕೊಡುತ್ತಲೇ ಇದೆ. ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೌನೇಶ್ ಆರ್.ಡಿ : 9480812138,  ಕಾಳಪ್ಪ ಪತ್ತಾರ್: 9164691957, ಪ್ರಭು : 9632144418, ಸಂಪಕರ್ಿಸಬೇಕೆಂದು ಮನವಿಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.