ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಕಾಯರ್ಾಗಾರ

ಗಂಗಾವತಿ: ಕನರ್ಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಮಾಧ್ಯಮ ಅಕಾಡೆಮಿ ಜಂಟಿಯಾಗಿ ರಾಜ್ಯಮಟ್ಟದ ಪತ್ರಕರ್ತರ ಕಾಯರ್ಾಗಾರವನ್ನು ಗಂಗಾವತಿಯಲ್ಲಿ ಹಮ್ಮಿಕೊಳ್ಳಲಾಗುವದು ಎಂದು ಪತ್ರಕರ್ತರ ಸಂಘದ ಸದಸ್ಯ ಶರಣಯ್ಯಸ್ವಾಮಿ ಕರಡಿಮಠ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇತರ ತಾಲೂಕುಗಳನ್ನು ಹೋಲಿಸಿದರೆ ಹೆಚ್ಚು ಸಂಪನ್ಮೂಲ ಮತ್ತು ಅವಕಾಶ ದೊರೆಯುವ ಕಾರಣದಿಂದ ಇಲ್ಲಿ ಮಾಡಲು ಅಡ್ಡಿಇಲ್ಲ ಎಂದು ಅಭಿಪ್ರಾಯಪಟ್ಟರು.

ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಎಸ್.ಗೋನಾಳ ಮಾತನಾಡಿ ಗಂಗಾವತಿಯಲ್ಲಿ ಕಾಯರ್ಾಗಾರ ಮಾಡಲು ತಮ್ಮ ಸಮ್ಮತಿ ಇದೆ ಎಂದು ಹೇಳಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಂ. ಸಾದಿಕಅಲಿ ಮಾತನಾಡಿ ಪತ್ರಕರ್ತರ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಆದರೆ ಅವುಗಳಿಗೆ ಸರಕಾರದ ಮಾನ್ಯತೆ ಇಲ್ಲ ಎಂದು ಹೇಳಿದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ಇಂಗಳಗಿ ನಾಗರಾಜ, ಕಾರ್ಯದಶರ್ಿ ಶ್ರೀನಿವಾಸದೇವಿಕೇರಿ, ವೃಷಭೇಂದ್ರಸ್ವಾಮಿ  ಪಾಲ್ಗೊಂಡಿದ್ದರು.