ಲೋಕದರ್ಶನ ವರದಿ
ಬೈಲಹೊಂಗಲ 04: ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ತುರಮರಿ ಅವರಿಗೆ ರಾಮದುರ್ಗದ ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆ, ಪತ್ರಿಕಾ ಬಳಗದ ಆಶ್ರಯದಲ್ಲಿ 2020 ನೇ ಸಾಲಿನ ರಾಜ್ಯ ಮಟ್ಟದ ಮೌಲ್ಯ ಪತ್ರಿಕೋಧ್ಯಮ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕ ಮಹಾದೇವಿ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಸಂಸ್ಥೆಯ 15 ನೇ ವಾರ್ಷಿಕೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಹಾಗೂ ವಿಬುಧ ಸಮ್ಮಾನ ಪರಮ ಸಂಸ್ಕ್ರತಿ ವೈಭವ, ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಹಾಂತೇಶ ತುರಮರಿ ಅವರು ಸುಮಾರು 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದರ ಪ್ರಯುಕ್ತ ಈ ಪ್ರಶಸ್ತಿ ದೊರೆತಿದ್ದು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷ್ಯೆ ರಜನಿ ಜೀರಗ್ಯಾಳ ಪ್ರಶಸ್ತಿ ಪ್ರಧಾನ ಮಾಡಿದರು. ಕನ್ನಡ ಜಾನಪದ ಪರಿಷತ್ತಿನ್ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ, ರಾಮದುರ್ಗ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ್ ಅಧ್ಯಕ್ಷ ಆರ್.ಎಸ್.ಪಾಟೀಲ, ದಾವಣಗೆರೆಯ ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ, ಕಜಾಪ ಜಿಲ್ಲಾದ್ಯಕ್ಷ ಮೋಹನ ಗುಂಡ್ಲೂರ, ಬೆಳಗಾವಿಯ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ, ಮೌಲ್ಯ ಸಂಪದ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ್ಯೆ ಶೈಲಾ ಸೊಗಲದ ಕಲಾವಿದ ಬಾಲಕೃಷ್ಣ ಚೋಪಡೆ ಮುಂತಾದವರು ಉಪಸ್ಥಿತರಿದ್ದರು.